More

    ಕೃಷಿ ಇಲಾಖೆಯಲ್ಲಿ ಏಜೆಂಟರ ಹಾವಳಿ ತಪ್ಪಿಸಿ

    ಶಿರಹಟ್ಟಿ: ಅರ್ಹ ರೈತರಿಗೆ ಕೃಷಿ ಇಲಾಖೆಯಿಂದ ತಾಡಪತ್ರಿ, ಕೃಷಿ ಪರಿಕರ, ಬಿತ್ತನೆ ಬೀಜಗಳು ತಲುಪುತ್ತಿಲ್ಲ ಎಂಬ ದೂರುಗಳಿವೆ. ಇದಕ್ಕೆ ಕಾರಣರಾದ ಏಜೆಂಟರ ಹಾವಳಿ ತಪ್ಪಿಸಬೇಕು ಎಂದು ತಾಪಂ ಇಒ ಡಾ. ಎನ್.ಎಚ್. ಓಲೇಕಾರ ಸೂಚನೆ ನೀಡಿದರು.

    ಪಟ್ಟಣದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಎಸ್​ಇಪಿ, ಟಿಎಸ್​ಪಿ ಯೋಜನೆ ಅನುಷ್ಠಾನ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು. ಕೃಷಿ ಇಲಾಖೆಯ ಪ್ರಗತಿ ವರದಿ ನೀಡಲು ತಾಂತ್ರಿಕ ಅಧಿಕಾರಿ ನೇತ್ರಾವತಿ ಪಟ್ಟೇದ ಮುಂದಾದಾಗ, ಮಧ್ಯೆ ಪ್ರವೇಶಿಸಿದ ಇಒ, ಸಭೆ ಇರುವ ಸಂಗತಿ ಗೊತ್ತಿದ್ದರೂ ಇಲಾಖೆ ಸಹಾಯಕ ನಿರ್ದೇಶಕರು ರಜೆ ತೆಗೆದುಕೊಂಡಿದ್ದಾರೆ. ರೈತ ಸಂಪರ್ಕ ಕೇಂದ್ರಗಳಲ್ಲಿನ ಸಹಾಯಕ ಅಧಿಕಾರಿಗಳ ವಿರುದ್ಧ ಮೌಖಿಕ ದೂರು ಕೇಳಿ ಬಂದಿವೆ. ಈ ಕುರಿತು ಪರಿಶೀಲಿಸಲು ಸಮಾಜ ಕಲ್ಯಾಣ ಇಲಾಖೆಯ ಎಸ್.ಬಿ. ಹರ್ತಿ ಅವರನ್ನು ವಿಶೇಷ ತನಿಖಾಧಿಕಾರಿಯನ್ನಾಗಿ ನೇಮಿಸಲಾಗಿದೆ. ಅವರಿಗೆ ಸಮರ್ಪಕ ದಾಖಲೆ ಪೂರೈಸಿ ಸಹಕರಿಸಬೇಕು. ಇಲ್ಲದಿದ್ದರೆ ಮೇಲಧಿಕಾರಿಗಳ ಗಮನಕ್ಕೆ ತಂದು ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

    ಎಸ್​ಇಪಿ, ಟಿಎಸ್​ಪಿ ಯೋಜನೆ ಅನುಷ್ಠಾನ ಕಾಮಗಾರಿ ಆಯಾ ಸಮುದಾಯದ ಕೇರಿಗಳಲ್ಲಿ ನಡೆಯಬೇಕು. ಜತೆಗೆ ಕೈಗೊಳ್ಳುವ ಕಾಮಗಾರಿ ಮಾಹಿತಿಯ ನಾಮಫಲಕವನ್ನು ಕಡ್ಡಾಯವಾಗಿ ಹಾಕಬೇಕು ಎಂದು ಸೂಚನೆ ನೀಡಿದರು.

    ಬಡ ಜನರ ಉದ್ದಾರಕ್ಕೆ ಯೋಜನೆ: ತಹಸೀಲ್ದಾರ್ ಯಲ್ಲಪ್ಪ ಗೋಣೆಣ್ಣವರ ಮಾತನಾಡಿ, ಎಸ್​ಇಪಿ, ಟಿಎಸ್​ಪಿ ಯೋಜನೆ ಇರುವುದೇ ಬಡವರ ಕಲ್ಯಾಣಕ್ಕೆ. ಅದಕ್ಕೆ ಅಧಿಕಾರಿಗಳು ಇಚ್ಛಾಶಕ್ತಿ ತೋರಿ ಆಯಾ ಸಮುದಾಯ ವಾಸಿಸುವ ಕಾಲನಿಗಳಲ್ಲಿ ಅಭಿವೃದ್ಧಿ ಕೆಲಸ ಮಾಡಿಸಬೇಕು. ಜನರಿಗೆ ಯೋಜನೆಗಳ ಮಾಹಿತಿ ತಲುಪಿಸಲು ಆಯಾ ಗ್ರಾಪಂ ಮಟ್ಟದ ಗ್ರಾಮಸಭೆಗೆ ಅಧಿಕಾರಿಗಳು ಹಾಜರಾಗಬೇಕು ಎಂದು ಸೂಚನೆ ನೀಡಿದರು. ತಾಪಂ ಅಧ್ಯಕ್ಷ ಈಶಪ್ಪ ಲಮಾಣಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಪವಿತ್ರಾ ಶಂಕಿನದಾಸರ, ಜಿಪಂ ಸದಸ್ಯೆ ದೇವಕ್ಕ ಲಮಾಣಿ, ಸಮಾಜ ಕಲ್ಯಾಣಾಧಿಕಾರಿ ಎಸ್.ಬಿ. ಹರ್ತಿ ಇತರರು ಇದ್ದರು.

    ಅನುಮೋದನೆ ಪಡೆಯಿರಿ
    ಇಷ್ಟರಲ್ಲೇ ಗ್ರಾಪಂ ಚುನಾವಣೆ ನಡೆಯುವ ಸಾಧ್ಯತೆ ಇದೆ. ಈ ಕುರಿತು ಅಧಿಕೃತ ಘೊಷಣೆ ಹೊರಬೀಳುವ ಮೊದಲು ಅಧಿಕಾರಿಗಳು ಅಭಿವೃದ್ದಿ ಕಾಮಗಾರಿಗಳ ಕ್ರಿಯಾಯೋಜನೆ ತಯಾರಿಸಿ ಸಂಬಂಧಿಸಿದ ಮೇಲಧಿಕಾರಿಗಳ ಅನುಮೋದನೆ ಪಡೆದರೆ ಸರ್ಕಾರಕ್ಕೆ ಹಣ ಮರಳಿ ಹೋಗುವುದಿಲ್ಲ. ಈ ಕುರಿತು ಕಾರ್ಯೋನ್ಮುಖರಾಗಿ ಎಂದು ಇಒ. ಡಾ. ಓಲೇಕಾರ ಸಲಹೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts