More

    ಕೃಷಿ ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ: 17 ಸೈಟ್​, 3 ವಾಣಿಜ್ಯ ಮಳಿಗೆ, 826 ಗ್ರಾಂ ಚಿನ್ನ, 47 ಲಕ್ಷ ವಶಕ್ಕೆ ಅಧಿಕಾರಿಗಳು

    ವಿಜಯವಾಣಿ ಸುದ್ದಿಜಾಲ ಗದಗ
    ಆದಾಯ ಮೀರಿ ಆಸ್ತಿ ಗಳಿಕೆ ಆರೋಪದ ಮೇಲೆ ನಗರದ ಸಾಯಿ ಬಡಾವಣೆಯಲ್ಲಿ ಇರುವ ಕೃಷಿ ಅಧಿಕಾರಿ ಸಹದೇವ ಯರಗೊಪ್ಪ ಮನೆ ಮೇಲೆ ಗುರುವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ವಶಪಡಿಸಿಕೊಂಡಿದ್ದಾರೆ.
    ಗದಗ ಜಿಲ್ಲೆ ರೋಣ ತಾಲೂಕಿನ ಮೆಣಸಗಿ ಗ್ರಾಮದ ಸಹದೇವ ಯರಗೊಪ್ಪ ಅವರ ಮನೆ ಹಾಗೂ ನರೇಗಲ್​ ಪಟ್ಟಣದ ಸಹೋದರನ ಮನೆ, ಕೊಪ್ಪಳ, ಹಾವೇರಿ ಮನೆ ಸೇರಿದಂತೆ ಏಳು ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೊಪ್ಪಳದ ಕೃಷಿ ಇಲಾಖೆ ಉಪನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಸಹದೇವ ಯರಗೊಪ್ಪ ಅವರಿಗೆ ಸಂಬಂಧಿಸಿದ ಹಲವು ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
    ದಾಳಿ ವೇಳೆ 17 ಸೈಟ್​, 3 ವಾಣಿಜ್ಯ ಮಳಿಗೆಗಳು, 826 ಗ್ರಾಂ ಚಿನ್ನ, ಬ್ಯಾಂಕ್​ ಖಾತೆಯಲ್ಲಿರುವ 40 ಲಕ್ಷ, ಮನೆಯಲ್ಲಿ 7 ಲಕ್ಷ, 27 ಎಕರೆ ಕೃಷಿ ಬೂಮಿ ಹೊಂದಿರುವುದು ಬೆಳಕಿಗೆ ಬಂದಿದೆ. ಆದಾಯಕ್ಕಿಂದ ಶೇ. 113 ಕ್ಕಿಂತ ಅಧಿಕ ಆಸ್ತಿ ಗಳಿಗೆ ಮಾಡಿದ್ದಾರೆ ಎಂದು ಲೋಕಾ ಪೊಲೀಸರು ಮಾಹಿತಿ ನೀಡಿದ್ದಾರೆ.
    ಲೋಕಾಯುಕ್ತ ಎಸ್​.ಪಿ. ಸತೀಶ್​ ಚಿಟಗುಬ್ಬಿ ನೇತೃತ್ವದಲ್ಲಿ ದಾಳಿ ನಡೆದಿದೆ. ಡಿವೈಎಸ್​ಪಿ ವಿಜಯ ಬಿರಾದಾರ, ಸಿಪಿಐ ರವಿ ಪುರುಷೋತ್ತಮ, ಐಯ್ಯನಗೌಡರ್​, ಇನ್ಸಪೆಕ್ಟರ್​ ಸಾಹುಬಾಯಿ ತೇಲಿ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts