More

  ಭುವನೇಶ್ವರಿ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆಯಲ್ಲಿ ಹುಟ್ಟುಹಬ್ಬ ಹಾಗೂ ಕಲಿಕಾ ಸಾಮಗ್ರಿಗಳ ದೇಣಿಗೆ

  ಗದಗ: ಗದಗ ಸಂಚಾಲಿತ ಭುವನೇಶ್ವರಿ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆಯಲ್ಲಿ ಗಣ್ಯ ಉದ್ಯಮಿಗಳಾದ ಶ್ರೀ ರೇಣುಪ್ರಕಾಶ ಎಸ್. ಹಿರೇಮಠವರು ತಮ್ಮ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಕೊಳ್ಳುತ್ತಾ ಕಲಿಕಾ ಸಾಮಗ್ರಿಗಳನ್ನು ದೇಣಿಗೆ ನೀಡಿದರು.
  ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಗದಗ-ಬೆಟಗೇರಿ ಲಾಯನ್ಸ್ ಕ್ಲಭ್‌ನ ಅಧ್ಯಕ್ಷರಾದ ಶ್ರೀ ರಮೇಶ ಶಿಗ್ಲಿಯವರು ಮಾತನಾಡಿ, ಅತ್ಯಂತ ಕಷ್ಟಕರವಾದ ಸೇವಾ ಕಾರ್ಯವನ್ನು ಈ ಸಂಸ್ಥೆಯು ಆಯ್ಕೆ ಮಾಢಿಕೊಂಡು ವಿಶೇಷ ಮಕ್ಕಳಿಗೆ ಸೂಕ್ತವಾದ ಅವಕಾಶಗಳನ್ನು ಕಲ್ಪಿಸಿ, ಅವರವರ ಸಾಮರ್ಥ್ಯಗೆ ತಕ್ಕಂತೆ ತರಬೇತಿ ನೀಡಿ, ಸಮಾಜದ ಮುಖ್ಯವಾಹಿನಿಗೆ ತರುತ್ತಿರುವುದರೊಂದಿಗೆ ಸಂಸ್ಕಾರವನ್ನು ಕೂಡಾ ನೀಡುತ್ತಿರುವ ಸಂಸ್ಥೆಯ ಸೇವಾ ಕಾರ್ಯ ಶ್ಲಾಘನೀಯವಾಗಿದೆ.ವಿಶೇಷ ಮಕ್ಕಳೊಂದಿಗೆ ಕಾಲ ಕಳೆಯುವುದರಿಂದ ನಮ್ಮೆಲ್ಲ ಒತ್ತಡಗಳನ್ನು ಕಳೆದುಕೊಳ್ಳಬಹುದು. ವಿಶ್ವ ಕಲ್ಯಾಣ ಸಂಸ್ಥೆಯು ಸಮಾಜಕ್ಕೆ ಸಮರ್ಪಣಾ ಭಾವದಿಂದ ಸೇವಾ ಕಾರ್ಯಗಳನ್ನು ಮಾಡುತ್ತಿದ್ದು, ಶ್ರೀ ರೇಣುಪ್ರಕಾಶವರು ತಮ್ಮ ಹುಟ್ಟುಹಬ್ಬವನ್ನು ಭುವನೇಶ್ವರಿ ವಿಶೇಷ ಶಾಲೆಯ ವಿಶೇಷ ಚೇತನರೊಂದಿಗೆ ಆಚರಿಸುತ್ತಿರುವುದು ಭಗವಂತನ ಸನ್ನಿದಾನದಲ್ಲಿಯೇ ಆಚರಿಸಿದಂತಾಗಿದೆ. ಈ ಸೇವಾ ಕಾರ್ಯಕ್ಕೆ ಕ್ಲಭ್‌ವತಿಯಿಂದ ಹಾಗೂ ನನ್ನ ವೈಯಕ್ತಿಕವಾಗಿ ಸಹಾಯ-ಸಹಕಾರ ನಿರಂತರವಾಗಿ ಮಾಡುತ್ತೇವೆಂದು ಹೇಳಿದರು.
  ಕಾರ್ಯಕ್ರಮದ ಅಥಿತಿಗಳಾಗಿ ಶ್ರೀ ಸದಾಶಿವ ಆರ್. ಹಿರೇಮಠ ಮಾತನಾಡಿ, ದೇವರು ಯಾವ ದೇವಸ್ಥಾನ ಇಲ್ಲಾ ಇಲ್ಲಿಯೇ ಇದ್ದಾನೆ, ಇಂತಹ ಮಕ್ಕಳಲ್ಲಿರುವ ಸೂಪ್ತವಾದ ಕೌಶಲ್ಯವನ್ನು ಹೊರಹೊಮ್ಮಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ನಮ್ಮ ತಂದೆಯವರು ದೇವರ ಸ್ವರೂಪಿಗಳಾದ ವಿಶೇಷ ಚೇತನರೊಂದಿಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ.
  ಕಾರ್ಯಕ್ರಮದಲ್ಲಿ ಶ್ರೀ ರೇಣುಪ್ರಕಾಶ ಎಸ್. ಹಿರೇಮಠವರು ದೀಪ ಬೆಳಗಿಸಿ, ಎಲ್ಲ ವಿಶೇಷ ಮಕ್ಕಳೊಂದಿಗೆ ಕೇಕ್ ಕಟ್ ಮಾಡಿ, ಹಾಗೂ ಕಲಿಕಾ ಸಾಮಗ್ರಿಗಳನ್ನು ದೇಣಿಗೆ ನೀಡುವುದರ ಮೂಲಕ ಹುಟ್ಟುಹಬ್ವವನ್ನು ಅರ್ಥಪೂರ್ಣವಾಗಿ ಆಚರಿಸುತ್ತಾ ದಿವ್ಯಾಂಗರಲ್ಲಿ ಅದ್ಬುತವಾದ ಶಕ್ತಿ ಇರುತ್ತದೆ. ಅವರನ್ನು ವೈಜ್ಞಾನಿಕವಾಗಿ ಶಿಕ್ಷಣ ಹಾಗೂ ತರಬೇತಿ ನೀಡಿ, ಸಮಾಜದಲ್ಲಿ ಸ್ವಾವಲಂಬಿ ಜೀವನವನ್ನು ನಡೆಸುವ ಹಾಗೆ ಮಾಡಿ, ಅವರಲ್ಲಿ ಸೂಪ್ತವಾದ ಶಕ್ತಿಯನ್ನು ಹೊರತರುವ ಈ ಸೇವಾ ಕಾರ್ಯ ದೇವರು ಮೆಚ್ಚುವಂತಹದ್ದು, ನನಗೆ ಇಂದು ನನ್ನ ಹುಟ್ಟುಹಬ್ಬವನ್ನು ಸ್ವರ್ಗದಲ್ಲಿಯೇ ಆಚರಿಸಿದಂತಾಗಿದೆAದು ಭಾವುಕರಾಗಿ ಹೇಳುತ್ತಾ, ಈ ಸೇವಾ ಕಾರ್ಯಕ್ಕೆ ನಿರಂತರವಾಗಿ ಸಹಾಯ-ಸಹಕಾರ ನೀಡುವುದಾಗಿ ಹೇಳಿದರು.
  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಮಂಜುನಾಥ ಹದ್ದಣ್ಣವರವರ ವಹಿಸಿ ಪ್ರಾಸ್ತವಿಕವಾಗಿ ಮಾತನಾಡಿ, ವಿಶ್ವ ಕಲ್ಯಾಣ ಸಂಸ್ಥೆಯು ನಡೆದು ಬಂದ ದಾರಿಯನ್ನು ವಿವರಿಸುತ್ತಾ, ದಾನಿಗಳಿಂದ ನಡೆಸುತ್ತಿರುವ ಈ ಸೇವಾ ಕಾರ್ಯಕ್ಕೆ ಈಡೀ ಸಮಾಜದ ಸಹಭಾಗಿತ್ವ ಬಹಳ ಅವಶ್ಯವಿದ್ದು, ಇವರಿಗೆ ಸೂಕ್ತವಾದ ಅವಕಾಶಗಳನ್ನು ನೀಡಿ, ಇವರಲ್ಲಿರುವ ಸೂಪ್ತವಾದ ಕೌಶಲ್ಯಗಳನ್ನು ಹೊರತರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಇಂದು ಶ್ರೀ ರೇಣುಪ್ರಕಾಶ ಎಸ್. ಹಿರೇಮಠವರು ತಮ್ಮ ಹುಟ್ಟುಹಬ್ಬವನ್ನು ವಿಶೇ಼ಷ ಚೇತನರೊಂದಿಗೆ ಆಚರಿಸಿ, ಕಲಿಕಾ ಸಾಮಗ್ರಿಗಳನ್ನು ದೇಣಿಗೆ ನೀಡಿ ವಿಶೇಷ ಚೇತನರಿಗೆ ಮಹತ್ವ ಪೂರ್ಣವಾದ ಸೇವೆಯನ್ನು ಸಲ್ಲಿಸಿದ್ದಾರೆ ಇವರಿಗೆ ಭಗವಂತ ಸಕಲ ಇಷ್ಠಾರ್ಥ ಸಿದ್ಧಿಯಾಗಲೆಂದು ಶುಭ ಹಾರೈಸಿದರು.
  ಕಾರ್ಯಕ್ರಮದಲ್ಲಿ ಕೇದಾರನಾಥ ಹಿರೇಮಠ, ಯಶಸ್ ಶಿಗ್ಲಿ, ಶ್ರೀಮತಿ ಸುವರ್ಣಾ ತುಳಸಿಮನಿ, ಮಂಜುನಾಥ ಆಸಂಗಿ, ನೀಲಪ್ಪ ಕಟಗಿ, ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವ ವಿದ್ಯಾಲಯದ ಎಮ್‌ಎಸ್‌ಡಬ್ಲೂö್ಯ ಪ್ರಶಿಕ್ಷಣಾರ್ಥಿಗಳಾದ ದೀಕ್ಷಾ ಪೊಲೀಸ್‌ಪಾಟೀಲ, ಲಕ್ಷಿö್ಮ ಶೇಬಣ್ಣವರ ಹಾಗೂ ವಿಶೇಷ ಮಕ್ಕಳು, ಸಿಬ್ಬಂದಿ ಹಾಗೂ ಪಾಲಕರು ಉಪಸ್ಥಿತರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts