More

    ಕೂಲಿ ಹಣಕ್ಕಾಗಿ ಕಾರ್ವಿುಕರ ಪ್ರತಿಭಟನೆ

    ಬ್ಯಾಡಗಿ: ಉದ್ಯೋಗ ಖಾತ್ರಿ ಯೋಜನೆಯಡಿ ದುಡಿದ ಕೂಲಿ ಹಣ ಬಾಕಿ ಉಳಿದಿದ್ದು, ನಿರ್ಲಕ್ಷ್ಯ ತೋರಿರುವ ಇಂಜಿನಿಯರ್ ಮೇಲೆ ಜಿಪಂ ಸಿಇಒ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಾ.ಪಂ. ಕಾರ್ಯಾಲಯ ಎದುರು ತಾಲೂಕಿನ ಮಾಸಣಗಿಯ ಕೂಲಿ ಕಾರ್ವಿುಕರು ಸೋಮವಾರ ಪ್ರತಿಭಟನೆ ನಡೆಸಿದರು.

    ಗ್ರಾಮೀಣ ಕೂಲಿ ಕಾರ್ವಿುಕ ಸಂಘಟನೆ ಅಧ್ಯಕ್ಷ ರಾಜು ಆಲದಹಳ್ಳಿ ಮಾತನಾಡಿ, ಗ್ರಾಮೀಣ ಪ್ರದೇಶದ ಶೇ. 50 ಕೂಲಿಕಾರ್ವಿುಕರು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹೆಸರು ನೋಂದಾಯಿಸಿಕೊಂಡು ಕೂಲಿ ನಂಬಿ ಜೀವನ ಸಾಗಿಸುತ್ತಿದ್ದಾರೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಕೆಲಸ ನೀಡುವ ವೇಳೆ, ಇಂಜಿನಿಯರ್​ಗಳು ಅಳತೆ ಪುಸ್ತಕದಲ್ಲಿ ನಮೂದಿಸುವ ಸಂದರ್ಭದಲ್ಲಿ ನಿರ್ಲಕ್ಷ ್ಯೋರಿದ ಪರಿಣಾಮ ಸಾಕಷ್ಟು ಕೂಲಿಕಾರರು ಕೂಲಿಹಣಕ್ಕೆ ಪರದಾಡುವ ದುಸ್ಥಿತಿ ಬಂದಿದೆ. ಆಗಾಗ ಕೂಲಿಬಿಟ್ಟು ಪ್ರತಿಭಟನೆಗೆ ಬರಬೇಕಿದ್ದು, ಕೂಡಲೆ ಕೂಲಿಕಾರರ ವೇತನ ಜಮೆ ಮಾಡಬೇಕು ಎಂದು ಒತ್ತಾಯಿಸಿದರು.

    ಕೂಲಿಕಾರ ದುರಗಪ್ಪ ಹುಣಸಿಕಟ್ಟಿ ಮಾತನಾಡಿ, ಮಾಸಣಗಿ ಗ್ರಾಮದ ಕೂಲಿಕಾರರು, ಉದ್ಯೋಗ ಖಾತ್ರಿ ಯೋಜನೆಯಲ್ಲಿ 3 ತಿಂಗಳ ಹಿಂದೆ ಅಂಗರಗಟ್ಟಿ ಗ್ರಾಮದಲ್ಲಿ ಕಾಲುವೆ ನಿರ್ವಿುಸುವ ಕಾಮಗಾರಿ ನಡೆಸಿದ್ದೇವೆ. 92 ಜನ 7 ದಿನ ಕೂಲಿ ಮಾಡಿದ್ದು, ಪಂಚಾಯಿತಿಯವರು ಇ-ಹಾಜರಾತಿ ಪಟ್ಟಿ (ಎನ್​ಎಂಆರ್) ಬರೆದುಕೊಟ್ಟಿದ್ದಾರೆ. ಆದರೆ, ಇಂಜಿನಿಯರ್ ಅಳತೆ ಪುಸ್ತಕದಲ್ಲಿ ಕೂಲಿಕಾರರ ಮಾಹಿತಿ ನಮೂದಿಸಿ, ಗಣಕೀಕರಣ ಮಾಡದಿರುವ ಕಾರಣ ಸುಮಾರು 2 ಲಕ್ಷ ರೂ. ಹಣ ಇಂದಿಗೂ ಜಮೆಯಾಗಿಲ್ಲ. ಈ ಕುರಿತು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಪಂ ಮುಖ್ಯ ಕಾರ್ಯದರ್ಶಿ ಗಮನಕ್ಕೂ ತಂದರೂ ಪ್ರಯೋಜನವಾಗಿಲ್ಲ. ಹೀಗಾಗಿ ಕೂಲಿಕಾರರ ಗೋಳಾಡುವಂತಾಗಿದೆ. ವಾರದೊಳಗೆ ನಮ್ಮ ಹಣ ಬಾರದಿದ್ದಲ್ಲಿ ಕುಟುಂಬ ಸಮೇತ ಧರಣಿ ಮಾಡುತ್ತೇವೆ ಎಂದು ಎಚ್ಚರಿಸಿದರು.

    ತಾ.ಪಂ. ವ್ಯವಸ್ಥಾಪಕ ಪ್ರಕಾಶ ಹಿರೇಮಠ ಮನವಿ ಪತ್ರ ಸ್ವೀಕರಿಸಿ, ವಾರದೊಳಗೆ ಸಂಬಂಧಿಸಿದ ಇಂಜಿನಿಯರ್ ಕರೆಸಿ ಕೂಲಿಕಾರರಿಗೆ ಹಣ ಜಮೆ ಮಾಡುವ ಭರವಸೆ ನೀಡಿದರು. ಬಳಿಕ ಪ್ರತಿಭಟನೆ ಹಿಂಪಡೆದರು. ಸುರೇಶ ತಿಮ್ಮಜ್ಜಿ, ಶೇಖಪ್ಪ ಕರ್ಜಗಿ, ನಿಂಗಪ್ಪ ಶಿವಣ್ಣನವರ, ರಾಜಕುಮಾರ ಅಂಬ್ಲೇಪ್ಪನವರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts