More

    ಕೂಲಿ ದಿನ ಹೆಚ್ಚಿಸಲು ನರೇಗಾ ಕಾರ್ಮಿಕರ ಒತ್ತಾಯ

    ಬೆಳಗಾವಿ: ದಿನಗೂಲಿ ಹಾಗೂ ಕೂಲಿ ದಿನಗಳನ್ನು ಹೆಚ್ಚಿಸುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಖಾತಾನಪುರದ ಜಾಗೃತ ಮಹಿಳಾ ಒಕ್ಕೂಟ ಹಾಗೂ ಹುಕ್ಕೇರಿಯ ಮಜ್ದೂರ್​ ನವನಿರ್ಮಾಣ ಸಂಟನೆ ನೇತೃತ್ವದಲ್ಲಿ ನೇರಗಾ ಮಹಿಳಾ ಕೂಲಿಕಾರರು ಬುಧವಾರ ಪ್ರತಿಭಟಿಸಿದರು.

    ಜಿಪಂ ಮೂಲಕ ಕೇಂದ್ರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಸಚಿವ ಗಿರಿರಾಜ್​ ಸಿಂಗ್​ ಅವರಿಗೆ ಮನವಿ ರವಾನಿಸಿದರು. ಮನೇರಗಾ ಯೋಜನೆಯಡಿ ಕೂಲಿ ನೀಡುವಲ್ಲಿ ಆಗುತ್ತಿರುವ ವಿಳಂಬ ಹಾಗೂ ಸಲಕರಣೆಗಳನ್ನು ಹರಿತಗೊಳಿಸಲು ನೀಡುತ್ತಿದ್ದ 10 ರೂ.ಮೊತ್ತ ನಿಲ್ಲಿಸಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

    ಅಗತ್ಯವಿರುವಾಗ ಹದಿನೈದು ದಿನದಲ್ಲಿ ಕೆಲಸ ನೀಡಬೇಕು. ಅರ್ಜಿ ಸ್ವೀಕಾರ, ರಸೀದಿ ಕೊಡುವುದು ವ್ಯತ್ಯಯವಾಗದಂತೆ ನಡೆಯಬೇಕು, ವಾರಕ್ಕೊಮ್ಮೆ ಕೂಲಿ ಪಾವತಿಸುವುದು. ಇಲ್ಲವಾದಲ್ಲಿ ನಿರುದ್ಯೋಗ ಭತ್ಯೆ, ವಿಳಂಬ ಪಾವತಿಗೆ ದಂಡ ಕೂಲಿಕಾರರಿಗೆ ಸಿಗಬೇಕು. ಕನಿಷ್ಠ 100 ದಿನಗಳು ಎಂದು ಕಾನೂನಿನಲ್ಲಿರುವಾಗ 100 ದಿನಕ್ಕೆ ಎಂಐಎಸ್​ ಲಾಕ್​ ಆಗುತ್ತಿರುವುದೇಕೆ? ಉದ್ಯೋಗ ಖಾತ್ರಿ ಕಾನೂನಿನ ಬಗ್ಗೆ ಜನರಲ್ಲಿ, ಅಧಿಕಾರಿಗಳಲ್ಲಿ ಅರಿವು ಮೂಡಿಸಬೇಕು. ಗ್ರಾಮೀಣ ಪ್ರದೇಶದಲ್ಲಿನ ಗೋಮಾಳ, ಗಾಂವಠಾಣ, ಕೆರೆಗಳ ಅಭಿವೃದ್ಧಿ ಕೆಲಸವೂ ಉದ್ಯೋಗ ಖಾತ್ರಿಯಿಂದ ಆಗಬೇಕು ಎಂದು ಒತ್ತಾಯಿಸಿದರು.

    ಕನಿಷ್ಠ ಕೂಲಿಯೂ ಸಿಗುತ್ತಿಲ್ಲ, ಬೆಲೆ ಏರಿಕೆಗೆ ತಕ್ಕಂತೆ ಕೂಲಿ ಹೆಚ್ಚಳ ಮಾಡಿ ಕೆಲಸದ ದಿನಗಳನ್ನು ಹೆಚ್ಚಿಸಬೇಕು. ಉದ್ಯೋಗ ಖಾತ್ರಿ ಕಾಮಗಾರಿಗಳು ವಾರ್ಡ್​ ಸಭೆ, ಗ್ರಾಮ ಸಭೆಗಳಲ್ಲಿ ಜನರಿಂದಲೇ ರ್ನಿಣಯವಾಗಬೇಕು. ಹೊರತು ಅಧಿಕಾರಿಗಳು ರ್ನಿಣಯ ಮಾಡಿದ ಕಾಮಗಾರಿಗಳಲ್ಲ, ಜನಪ್ರತಿನಿಧಿಗಳು ನರೇಗಾದ ಕಾಮಗಾರಿಗಳನ್ನು ಗುತ್ತಿಗೆ ತೆಗೆದುಕೊಳ್ಳುವುದು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.

    ಪ್ರತಿಭಟನೆಯಲ್ಲಿ ಶಿವಾಜಿ ಕಾಗಣಿಕರ್​, ಕವಿತಾ ಮುರಕುಟ್ಟಿ, ವೈಶಾಲಿ ಕಮ್ಮಾರ, ಮಹಾನಂದಾ ತಳವಾರ, ಶ್ರೀದೇವಿ ತಳವಾರ, ಗೀತಾ ಕಮ್ಮಾರ, ಶಾಂತವ್ವ ಭಜಂತ್ರಿ, ಕಸ್ತೂರಿ ಸತ್ಯನ್ನವರ, ಶಾಂತವ್ವ ಇರಗಾರ, ನೀಲವ್ವ ಬಾಲೆನ್ನವರ, ಗಂಗವ್ವ ನಡುವಿನಮನಿ, ನಿರ್ಮಲ ತಳವಾರ, ಸಾವಿತ್ರಿ ಸತ್ಯನ್ನವರ ಸೇರಿದಂತೆ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts