More

    ಕುಮಟಾ ತಾಲೂಕಿನ ವಾಲಗಳ್ಳಿ ಗ್ರಾಮಸ್ಥರ ಪ್ರತಿಭಟನೆ

    ಕುಮಟಾ: ತಾಲೂಕಿನ ವಾಲಗಳ್ಳಿಯಲ್ಲಿ ಕುಮಟಾ-ಚಂದಾವರ ಮುಖ್ಯ ರಸ್ತೆಯ ಗಟಾರ ಹಾಗೂ ಮೋರಿ ಕಾಮಗಾರಿ ಅಸಮರ್ಪಕತೆಯಿಂದ ಹಲವರ ಕೃಷಿ ಜಮೀನು ಕೊಚ್ಚಿಹೋಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು ಶನಿವಾರ ಹಾರೋಡಿ ಕ್ರಾಸ್ ಬಳಿ ಜಮಾಯಿಸಿ ಪ್ರತಿಭಟನೆ ನಡೆಸಿದರು.

    ಸ್ಥಳೀಯ ಜಿ. ಎಸ್. ಹೆಗಡೆ ಮಾತನಾಡಿ, ಇಲ್ಲಿ ಹಾರೋಡಿ ಕ್ರಾಸ್ ಬಳಿ ನಿರ್ಮಾಣ ಮಾಡಲಾಗಿರುವ ಮೋರಿಯ ಮೂಲಕ ಬರುವ ನೀರು ಖಾಸಗಿ ವ್ಯಕ್ತಿಯೊಬ್ಬರ ಜಮೀನಿನ ಮೂಲಕ ಹಾದು ಹೋಗುತ್ತಿತ್ತು. ಆದರೆ, ಹಿಂದಿನ ವರ್ಷ ಅವರು ನೀರು ಬರುವ ಮಾರ್ಗದಲ್ಲಿ ಭದ್ರವಾಗಿ ಪಾಗಾರ ನಿರ್ವಿುಸಿಕೊಂಡಿದ್ದಾರೆ. ಹೀಗಾಗಿ ಮೋರಿಯ ನೀರು ಸಿಕ್ಕಸಿಕ್ಕಲ್ಲಿ ನುಗ್ಗುತ್ತಿದೆ. ಅದಕ್ಕಾಗಿ ಪ್ರತ್ಯೇಕ ಗಟಾರವನ್ನು ರಸ್ತೆ ಬದಿ ನಿರ್ವಿುಸಬೇಕು. ಇಲ್ಲಿ ಗಟಾರವು ರಸ್ತೆಯ ಅಂಚಿಗೆ ಇರದೇ ಜನವಸತಿ ಪಕ್ಕದಲ್ಲಿರುವುದೇ ಸಮಸ್ಯೆ ಎಂದು ವಿವರಿಸಿದರು.

    ಬಳಿಕ ಸ್ಥಳಕ್ಕಾಗಮಿಸಿದ ಪಿಡಬ್ಲು್ಯಡಿ ಇಂಜಿನಿಯರ್ ರಾಜು ಶಾನಭಾಗ ಮಾತನಾಡಿ, ಜನರ ಬೇಡಿಕೆಯಂತೆ ಇಲ್ಲಿ ಮನೆಗಳಿಗೆ ತಾಗಿಕೊಂಡಿರುವ ಗಟಾರಕ್ಕೆ ಬದಲಾಗಿ ರಸ್ತೆ ಬದಿಯಲ್ಲೇ ಗಟಾರ ನಿರ್ವಣಕ್ಕೆ ಪ್ರಯತ್ನ ನಡೆಸಿದ್ದೇವೆ. ಈಗಾಗಲೇ 40 ಲಕ್ಷ ರೂ.ಗಳಲ್ಲಿ 500 ಮೀಟರ್ ಕಾಂಕ್ರೀಟ್ ಗಟಾರ ನಿರ್ವಿುಸಲು ಪ್ರಸ್ತಾವ ಸಲ್ಲಿಸಲಾಗಿದೆ ಎಂದು ತಿಳಿಸಿ ಜನರನ್ನು ಸಮಾಧಾನ ಪಡಿಸಿದರು.

    ಪಿಎಸ್​ಐ ಆನಂದಮೂರ್ತಿ, ಪಿಎಸ್​ಐ ರವಿಗುಡ್ಡಿ ಬಂದೋಬಸ್ತ್ ಕಲ್ಪಿಸಿದ್ದರು. ಶ್ರೀಧರ ನಾರಾಯಣ ಹೆಗಡೆ, ಪರಮೇಶ್ವರ ಗೌಡ, ರಾಮು ಮಾರು ಗೌಡ, ಅಮ್ಮಾ ಹೊಸಬು ಗೌಡ, ಹುಲಿಯಾ ಶಿವು ಗೌಡ, ಮಂಜುನಾಥ ನಾಗು ಗೌಡ, ಪಿ.ಕೆ. ಭಟ್ಟ, ವಸಂತ ಬೀರಾ ಗೌಡ, ಗಂಗೆ ಮಾದೇವ ಗೌಡ ಇನ್ನಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts