More

    ಕುದುರೆಗಳ ನಿಗೂಢ ಸಾವು

    ಮುಂಡಗೋಡ: ತಾಲೂಕಿನಲ್ಲಿ ಕೆಲ ತಿಂಗಳ ಹಿಂದೆ ಕುರಿಗಾಹಿಗಳು ಬಿಟ್ಟು ಹೋದ ಕುದುರೆಗಳು ನಿಗೂಢವಾಗಿ ಸಾವಿಗೀಡಾಗುತ್ತಿವೆ. ಮೂಢ ನಂಬಿಕೆಗೆ ಮಾರುಹೋದ ಕೆಲ ರೈತರು ಅಶ್ವಗಳನ್ನು ಕೊಂದು ತಮ್ಮ ಹೊಲಗಳಲ್ಲಿ ಹೂತು ಹಾಕುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿವೆ.

    2-3 ತಿಂಗಳ ಹಿಂದೆ ಉತ್ತರ ಕರ್ನಾಟಕದ ಭಾಗದಲ್ಲಿ ಸಂಭವಿಸಿದ ನೆರೆಹಾವಳಿಯಿಂದ ಕಂಗೆಟ್ಟ ಕುರಿಗಾಹಿಗಳು ನೂರಾರು ಕುದುರೆಗಳನ್ನು ತಂದು ತಾಲೂಕಿನಲ್ಲಿ ಬಿಟ್ಟು ಹೋಗಿದ್ದರು. ಕೆಲ ಕುದುರೆಗಳು ಗುಂಪುಗುಂಪಾಗಿ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ನಿಂತು ವಾಹನ ಸಂಚಾರಕ್ಕೆ ಕಿರಿಕಿರಿ ಉಂಟು ಮಾಡುತ್ತಿದ್ದವು. ನಂತರ ಪಟ್ಟಣ ಪಂಚಾಯಿತಿಯವರು ಅವುಗಳನ್ನು ಕಾಡಿನತ್ತ ಓಡಿಸಿದ್ದರು. ಕೆಲವು ಕುದುರೆಗಳನ್ನು ಗ್ರಾಮೀಣ ಭಾಗಗಳಲ್ಲಿ ಬಿಡಲಾಗಿತ್ತು. ಕುದುರೆಗಳು ಕಾಡಿನ ಅಕ್ಕ-ಪಕ್ಕದ ಹೊಲ-ಗದ್ದೆಗಳಲ್ಲಿ ನುಗ್ಗಿ ಬೆಳೆಗಳನ್ನು ತಿನ್ನುತ್ತಿದ್ದವು. ಕುದುರೆಗಳನ್ನು ಕೊಂದು ತಮ್ಮ ಹೊಲದಲ್ಲಿ ಹೂತರೆ ಒಳ್ಳೆಯದಾಗುತ್ತದೆ ಎಂಬ ಮೂಢ ನಂಬಿಕೆಯಿಂದ ಈಗಾಗಲೇ ತಾಲೂಕಿನ ಅರಶಿಣಗೇರಿ, ಹುನಗುಂದ ಗ್ರಾಮದ ಕೆಲ ರೈತರು ತಮ್ಮ ಹೊಲ ಮತ್ತು ತೋಟಗಳಿಗೆ ಬಂದ ಕುದುರೆಗಳನ್ನು ಕೊಂದು ಹೂಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿವೆ. ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಿ ಕುದುರೆಗಳ ಮಾರಣ ಹೋಮ ತಡೆಯಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

    ಕುದುರೆಗಳ ವಾರಸುದಾರರು ಯಾರೂ ಇಲ್ಲ. ರೈತರ ಬೆಳೆ ತಿಂದು ಹಾನಿ ಮಾಡುತ್ತಿವೆ. ಕೆಲವು ರೈತರು ಕುದುರೆಗಳನ್ನು ಹೊಡೆದು ಕಾಲು ಮುರಿದರೆ, ಕೆಲವರು ಸತ್ತ ಕುದುರೆಯನ್ನು ಹೊಲದಲ್ಲಿ ಹೂತಿದ್ದಾರೆ. ಗ್ರಾಮದ ಸುತ್ತ ಬಹಳ ಕುದುರೆಗಳು ಇದ್ದು ಇವುಗಳಿಗೆ ಸೂಕ್ತ ರಕ್ಷಣೆ ಸಿಗುವಂತಾಗಬೇಕು.
    | ಮರಿಯಪ್ಪ ಹರಿಜನ ಹುನಗುಂದ ಗ್ರಾಪಂ ಮಾಜಿ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts