More

    ಕುಡಿವ ನೀರಿನ ಸೌಲಭ್ಯ ಕಲ್ಪಿಸಿ

    ಯಾದಗಿರಿ : ಗುರುಮಠಕಲ್ ಕ್ಷೇತ್ರದಲ್ಲಿ ಶುದ್ಧ ಕುಡಿವ ನೀರಿನ ಸಮಸ್ಯೆ ಸಾಕಷ್ಟಿದ್ದು ಈ ಬಗ್ಗೆ ಸರ್ಕಾರ ವಿಶೇಷ ಗಮನ ಹರಿಸುವಂತೆ ಶಾಸಕ ಶರಣಗೌಡ ಕಂದಕೂರ ಸೋಮವಾರ ಸದನದಲ್ಲಿ ಒತ್ತಾಯಿಸಿದರು.

    ವಿಧಾನಸಭೆ ಅಧಿವೇಶನದ ಶೂನ್ಯ ವೇಳೆಯಲ್ಲಿ ಸಭಾಧ್ಯಕ್ಷರ ಅನುಮತಿಯೊಂದಿಗೆ ಮಾತಿಗಿಳಿದ ಕಂದಕೂರ, ಕಳೆದ ೭ ತಿಂಗಳ ಹಿಂದೆ ನನ್ನ ಕ್ಷೇತ್ರದ ಅನಪುರ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ನೂರಾರು ಜನ ಅಸ್ವಸ್ಥರಾಗಿದ್ದರಲ್ಲದೆ, ಮೂರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಅಂದಿನ ಅಧಿವೇಶನದಲ್ಲಿ ಸಿಎಂ ಬಸವರಾಜ ಬೊಮ್ಮಾಯಿಗೆ ಶಾಸಕರಾಗಿದ್ದ ನಾಗನಗೌಡರು ಗಮನಕ್ಕೆ ತಂದಿದ್ದರು.

    ಆದರೆ ಮೃತ ೩ ಕುಟುಂಬಗಳಿಗೆ ಇದುವರೆಗೂ ಪರಿಹಾರ ಸಿಕ್ಕಿಲ್ಲ. ಅಲ್ಲದೆ ಕಳೆದ ೨ ವಾರಗಳ ಹಿಂದೆ ಇಮ್ಲಾಪುರದಲ್ಲಿ ಇಂತದ್ದೆ ಘಟನೆ ನಡೆದಿದ್ದು ನನಗೆ ಸಾಕಷ್ಟು ನೋವು ತರಿಸಿದೆ ಎಂದರು.

    ಇದಲ್ಲದೆ, ಸರ್ಕಾರ ನನ್ನ ಕ್ಷೇತ್ರದ ಕಡೇಚೂರು-ಬಾಡಿಯಾಳ ಕ್ಷೇತ್ರದಲ್ಲಿ ಈ ಹಿಂದೆ ೩೩೦೦ ಎಕರೆ ಭೂಮಿಯನ್ನು ಕೈಗಾರಿಕೆ ಉz್ದೆÃಶಕ್ಕಾಗಿ ಸ್ವಾಧೀನ ಪಡಿಸಿಕೊಂಡಿದೆ. ಆದರೆ, ಅಲ್ಲಿ ಮೂಲಸೌಲಭ್ಯದ ಕೊರತೆ ಇದೆ. ಏತನ್ಮಧ್ಯೆಯೂ ಮತ್ತೇ ೩ ಸಾವಿರ ಭೂಮಿ ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿರುವುದು ಸರಿಯಲ್ಲ. ನನ್ನ ಕ್ಷೇತ್ರದಲ್ಲಿ ಸಾಕಷ್ಟು ಜನ ಉದ್ಯೋಗಕ್ಕಾಗಿ ಗುಳೆ ಹೋಗುತ್ತಿದ್ದು, ಇದನ್ನು ತಪ್ಪಿಸಲು ಸರ್ಕಾರ ವಿಶೇಷ ಗಮನ ಹರಿಸುವಂತೆ ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts