More

    ಕುಡಿಯುವ ನೀರು ಪೂರೈಕೆಗೆ ತರ್ತು ಕ್ರಮ

    ಬಾಗಲಕೋಟೆ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬAದ ಕಡೆಗಳಲ್ಲಿ ೨೪ ಗಂಟೆಯೊಳಗಾಗಿ ತುರ್ತು ಕ್ರಮಕೈಗೊಂಡು ನೀರು ಪೂರೈಸುವ ಕಾರ್ಯವಾಗಬೇಕೆಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

    ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಬರ ನಿರ್ವಹಣೆ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಮಸ್ಯಾತ್ಮಕ ಗ್ರಾಮಗಳಲ್ಲಿ ಈಗಾಗಲೇ ತಾಲೂಕವಾರು, ಮಾಹೆವಾರು ಕ್ರೀಯಾ ಯೋಜನೆ ತಯಾರಿಸಿ ಸಮಸ್ಯೆ ಕಂಡು ಬಂದ ಗ್ರಾಮಗಳಲ್ಲಿ ತುರ್ತಾಗಿ ಕ್ರಮವಹಿಸಬೇಕು. ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಎಲ್ಲ ತಾಲೂಕುಗಳಲ್ಲಿ ಒಟ್ಟು ೧೦೪೪ ಖಾಸಗಿ ಕೊಳವೆ ಬಾವಿಗಳನ್ನು ಗುರುತಿಸಿದ್ದು, ೧೦೧೬ ಕೊಳವೆಭಾವಿ ಮಾಲಿಕರೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಸಮಸ್ಯೆ ಕಂಡುಬಂದಲ್ಲಿ ಕ್ರಮಜರುಗಿಸಲು ಸೂಚಿಸಿದರು.

    ಗ್ರಾಮ ಮತ್ತು ನಗರ ಪ್ರದೇಶಗಳಲ್ಲಿ ಪ್ರತಿಯೊಂದು ವಾರ್ಡ, ಏರಿಯಾಗಳಲ್ಲಿ ನೀರು ಪೂರೈಕೆಯಾಗುತ್ತಿರುವ ಬಗ್ಗೆ ಗಮನಹರಿಸಬೇಕು. ಹೆಚ್ಚಾಗಿ ಕೆಲವೊಂದು ಏರಿಯಾಗಳಲ್ಲಿ ನೀರು ಪೂರೈಕೆಯಾದೇ ಸಮಸ್ಯೆ ಉಂಟಾಗುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಗ್ರಾಮೀಣ ಭಾಗದಲ್ಲಿ ಗ್ರಾಮೀಣ ಕುಡಿಯುವ ನೀರು ಯೋಜನೆಯ ಅಧಿಕಾರಿಗಳು ಹಾಗೂ ನಗರಾಭಿವೃದ್ದಿ ಕೋಶದ ಅಧಿಕಾರಿಗಳು ಕ್ರಮವಹಿಸಬೇಕು. ಜೂನ್ ಮಾಹೆಯವರೆಗೆ ಕ್ರೀಯಾ ಯೋಜನೆ ರೂಪಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.

    ಬಾದಾಮಿ ತಾಲೂಕಿನ ಕೈನಕಟ್ಟಿ, ಡಾಣಕಶಿರೂರ, ಮಂಗಳೂರ ಹಾಗೂ ಇಲಕಲ್ಲ ತಾಲೂಕಿನ ಮುರಟಗೇರಿ, ಮುರಡಿ, ಸಂಕಲಾಪೂರ ಗ್ರಾಮಗಳಲ್ಲಿ ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಅವಶ್ಯಕತೆ ಬಂದ ಕಡೆ ಮೋಟಾರ್ ಹಾಗೂ ಪೈಪಲೈನ್ ಅಳವಡಿಸಲು ೮೪ ಕಾಮಗಾರಿಗಳಿಗೆ ೨೨೫ ಲಕ್ಷಗಳ ಅನುದಾನ ಸಹ ಬಿಡುಗಡೆ ಮಾಡಲಾಗಿದೆ. ಅಲ್ಲದೇ ೭೪ ಹೊಸ ಕೊಳವೆಬಾವಿ ಕೊರೆಯಲು ೧೮೦ ಲಕ್ಷ ರೂ.ಗಳ ಅನುದಾನ ಬಿಡುಗಡೆ ಮಾಡಲಾಗಿದೆ. ಕೊಳವೆ ಬಾವಿಗಳ ಪ್ಲಶಿಂಗ್ ಮತ್ತು ರೀಡ್ರಿಲ್ಲಿಂಗ್ ಮಾಡಲು ೧೯೨ ಕಾಮಗಾರಿ ಕೈಗೊಂಡಿದ್ದು, ಅದಕ್ಕಾಗಿ ೧೫೪.೭೫ ಲಕ್ಷ ಅನುದಾನ ನೀಡಲಾಗಿದೆ ಎಂದರು.

    ಮಾರ್ಚದಿಂದ ಜುಲೈ ವರೆಗೆ ನೀರಿನ ಸಮಸ್ಯೆ ಕಂಡು ಬರುವ ಗ್ರಾಮಗಳನ್ನು ಗುರುತಿಸಲಾಗಿದೆ. ಜಿಲ್ಲೆಯಲ್ಲಿ ೭೮೦ ಶುದ್ದ ಕುಡಿಯುವ ನೀರಿನ ಘಟಕಗಳಿದ್ದು, ಅದರಲ್ಲಿ ೭೨೩ ಕಾರ್ಯನಿರ್ವಹಿಸುತ್ತಿವೆ. ಉಳಿದ ಘಟಕಗಳನ್ನು ದುರಸ್ತಿಗೆ ಕ್ರಮವಹಿಸಲಾಗುತ್ತಿದೆ. ಸರಕಾರಿ ಸಂಸ್ಥೆಗಳಲ್ಲಿ ಇರುವ ೩೮೦ ಕೊಳವೆಬಾವಿಗಳನ್ನು ಅವಶ್ಯಕತೆಗೆ ಅನುಗುಣವಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ನಗರ ಪ್ರದೇಶದಲ್ಲೂ ೨೧೨೯ ಕೊಳವೆಬಾವಿಗಳಿದ್ದು, ೧೯೪೦ ಚಾಲ್ತಿಯಲ್ಲಿವೆ. ೧೪೬ ಖಾಸಗಿ ಕೊಳವೆಬಾವಿ ಗುರುತಿಸಿದ್ದು, ಅವಶ್ಯಕತೆಗೆ ಇದ್ದಲ್ಲಿ ಬಾಡಿಗೆ ಆಧಾರದ ಮೇಲೆ ಪಡೆದು ನೀರು ಪೂರೈಸಲು ಕ್ರಮವಹಿಸಲಾಗುವುದೆಂದು ತಿಳಿಸಿದರು.

    ಸಭೆಯಲ್ಲಿ ಉಪವಿಭಾಗಾಧಿಕಾರಿಗಳಾದ ಸಂತೋಷ ಜಗಲಾಸರ, ಸಂತೋಷ ಕಾಮಗೌಡ, ನೋಡಲ್ ಅಧಿಕಾರಿಗಳಾದ ಲಕ್ಷö್ಮಣ ಕಳ್ಳೇನ್ನವರ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ರವೀಂದ್ರ ಹಕಾಟೆ, ಪಶು ಇಲಾಖೆಯ ಉಪನಿರ್ದೇಶಕ ಎಸ್.ಎಚ್.ಕಳ್ಳಿಗುಡ್ಡ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ವಿಜಯ ನೆಕ್ಕಳಕಿ, ಸಹಕಾರ ಸಂಘದ ಉಪನಿಬಂಧಕ ಎಂ.ಬಿ.ಪೂಜಾರ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಗುರುಪಾದ ಡೂಗನವರ ಸೇರಿದಂತೆ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts