More

    ಕುಂದಾನಗರಿಯಲ್ಲಿ ‘ಎಂ+ಎಂ’ ಫಾರ್ಮುಲಾ

    ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲಾಗದೆ ಮತ್ತು ಅಧಿಕಾರ ಹಿಡಿಯುವ ಆಸೆಯಿಂದ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮತ್ತು ಹೈದರಾಬಾದ್‌ನ ಎಐಎಂಐಎಂ ಪಕ್ಷ ಒಂದಾಗಿದ್ದು, ‘ಎಂ+ಎಂ’ ಫಾರ್ಮುಲಾ ಆರಂಭಿಸಿವೆ ಎಂದು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ವಾಗ್ದಾಳಿ ನಡೆಸಿದರು.

    ಪಕ್ಷದ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಎರಡು ದಿನದಿಂದ ಸಾಮಾಜಿಕ ಜಾಲತಾಣಗಳಲ್ಲಿ ‘ಎಂ+ಎಂ’ ಸುದ್ದಿ ಹರದಾಡುತ್ತಿದೆ. ಎಲ್ಲ ಮತದಾರರು ಬಿಜೆಪಿಗೆ ಮತ ನೀಡುವ ಮೂಲಕ ಫಾರ್ಮುಲಾಕ್ಕೆ ತಕ್ಕಪಾಠ ಕಲಿಸಬೇಕು ಎಂದು ಕರೆ ನೀಡಿದರು.

    ಪಕ್ಷದ ಚಿಹ್ನೆಯಡಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇವೆಯೇ ವಿನಹ ಭಾಷೆಯ ಹೆಸರಿನಲ್ಲಿ ಅಲ್ಲ. ವಾರ್ಡ್‌ಗಳ ಮೀಸಲಾತಿ ಆಧಾರದ ಮೇಲೆ ಕಾರ್ಯಕರ್ತರಿಗೆ ಟಿಕೆಟ್ ನೀಡಲಾಗಿದ್ದು, ಜಾತಿ ಆಧಾರದ ಮೇಲೆ ಅಲ್ಲ. ಕಾರ್ಯಕರ್ತರೇ ಪಕ್ಷದ ಆಸ್ತಿ. ಅವರನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮ ಸಚಿವರು, ಶಾಸಕರ ಮೇಲಿದೆ ಎಂದರು.

    ಕಾಂಗ್ರೆಸ್ ಸಹ ಬಿಜೆಪಿಯನ್ನು ಎದುರಿಸಲಾಗದೆ ಎಂಇಎಸ್, ಎಐಎಂಐಎಂ ಇನ್ನಿತರರ ಜತೆ ಹೊಂದಾಣಿಕೆ ಮಾಡಿಕೊಳ್ಳುತ್ತಿವೆ. ಅತಂತ್ರ ಸ್ಥಿತಿಯಲ್ಲಿರುವ ಕಾಂಗ್ರೆಸ್ ಏಕಾಂಗಿಯಾಗಿ ಚುನಾವಣೆ ಎದುರಿಸುವ ಶಕ್ತಿ ಕಳೆದುಕೊಂಡಿದೆ. ಹಾಗಾಗಿಯೇ ಚುನಾವಣೆಯಲ್ಲಿ ಇತರ ರಾಜಕೀಯ ಪಕ್ಷಗಳ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಮಟ್ಟಕ್ಕೆ ಬಂದು ನಿಂತಿದೆ ಎಂದು ವ್ಯಂಗ್ಯವಾಡಿದರು. ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಉಸ್ತುವಾರಿ, ಶಾಸಕ ಅಭಯ ಪಾಟೀಲ ಮಾತನಾಡಿ, ಎಐಎಂಐಎಂ ಪಕ್ಷದೊಂದಿಗೆ ಎಂಇಎಸ್ ಹೊಂದಾಣಿಕೆ ಮಾಡಿಕೊಂಡ ಹಿನ್ನೆಲೆಯಲ್ಲಿ ಅದು 10 ಸ್ಥಾನದಲ್ಲೂ ಗೆಲ್ಲುವುದಿಲ್ಲ. ಆ ಎರಡು ಪಕ್ಷಗಳ ವಿರುದ್ಧ ನಾವು ಯಾವುದೇ ಆರೋಪ ಮಾಡಬೇಕಿಲ್ಲ, ಮತದಾರರೇ ಅವರಿಗೆ ತಕ್ಕಪಾಠ ಕಲಿಸಲಿದ್ದಾರೆ. ಭಾಷೆ, ಜಾತಿ ಆಧಾರದ ಮೇಲೆ ಮತಯಾಚನೆ ಮಾಡಿ ಚುನಾವಣೆ ನಿಯಮ ಉಲ್ಲಂಘಿಸಿದವರ ವಿರುದ್ಧ ಆಯೋಗ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts