More

    ಕುಂದಗೋಳದಲ್ಲಿ 32 ಪ್ಲಾಟ್​ಗಳ ಅತಿಕ್ರಮಣ

    ಕುಂದಗೋಳ: ನನೆಗುದಿಗೆ ಬಿದ್ದ ಎಲ್ಲ ಕಾಮಗಾರಿಗಳನ್ನು ಬೇಗ ಆರಂಭಿಸಬೇಕು. ಅಭಿವೃದ್ಧಿಗೆ ಎಲ್ಲ ಸದಸ್ಯರ ಸಹಾಯ, ಸಹಕಾರ ಅವಶ್ಯವಿದೆ. ಹೆಚ್ಚು ಅನುದಾನ ತಂದು ಮಾದರಿ ಪಟ್ಟಣವಾಗಿ ಮಾಡೋಣ ಎಂದು ಪಪಂ ನೂತನ ಅಧ್ಯಕ್ಷ ವಾಸು ಗಂಗಾಯಿ ಹೇಳಿದರು.

    ಪಪಂ ಸಭಾಭವನದಲ್ಲಿ ಗುರುವಾರ ಏರ್ಪಡಿಸಿದ್ದ ಮೊದಲ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಪಟ್ಟಣದ ಮೌನೇಶ್ವರ ಆಶ್ರಯ ಬಡಾವಣೆ ನಕ್ಷೆ ಪರಿಷ್ಕರಣೆ ಕುರಿತು ಪಪಂ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ಗೋಂದಕರ ಪ್ರಸ್ತಾಪಿಸಿದರು. ಆಗ ಮಧ್ಯಪ್ರವೇಶಿಸದ ಮಲ್ಲಿಕಾರ್ಜುನ ಕಿರೇಸೂರ, ಅಲ್ಲಿನ 4.21 ಎಕರೆಯಲ್ಲಿ 101 ಮನೆಗಳು ಅಧಿಕೃತವಾಗಿ ನಿರ್ವಣವಾಗಿವೆ. ಉಳಿದ 32 ಪ್ಲಾಟ್​ಗಳು ಪಪಂಗೆ ಸೇರಿವೆ. ಆದರೆ, ಅಲ್ಲಿ 52 ಜನರು ಅಕ್ರಮವಾಗಿ ತಗಡಿನ ಶೆಡ್ ನಿರ್ವಿುಸಿಕೊಂಡಿದ್ದಾರೆ. ಅವರಿಗೆ ಹೊಸ ಆಸರೆ ಪ್ಲಾಟ್​ಗಳಲ್ಲಿ ಮನೆ ನೀಡಬೇಕು. ಅತಿಕ್ರಮಣ ಜಾಗ ತೆರವುಗೊಳಿಸಿ ಅಲ್ಲಿ ಪಪಂ ಸಮುದಾಯ ಕಟ್ಟಡ ನಿರ್ವಿುಸಬೇಕು ಎಂದರು. ಅದಕ್ಕೆ ಸದಸ್ಯರಿಂದ ಪರ-ವಿರೋಧ ವ್ಯಕ್ತವಾಯಿತು. ಆಗ ಅಧ್ಯಕ್ಷರು, ‘ಶಾಸಕರು, ಅಧಿಕಾರಿಗಳೊಂದಿಗೆ ರ್ಚಚಿಸಿ ಸಮಸ್ಯೆ ಬಗೆಹರಿಸೋಣ’ ಎಂದರು.

    ಗಣೇಶ ಕೊಕಾಟೆ ಮಾತನಾಡಿ, ಹೊಸ ಆಶ್ರಯ ಬಡಾವಣೆಯಲ್ಲಿ ಪ್ರತಿ ಸದಸ್ಯರಿಗೆ 15 ಪ್ಲಾಟ್ ನೀಡಲಾಗುವುದು. ನಿಮ್ಮ ವಾರ್ಡ್​ನ ಫಲಾನುಭವಿಗಳ ಪಟ್ಟಿ ಅಧಿಕಾರಿಗಳಿಗೆ ಕೊಡುವಂತೆ ಶಾಸಕರು ಸೂಚಿಸಿದ್ದರು. ಅದರಂತೆ ನಾವು ಪಟ್ಟಿ ನೀಡಿದ್ದರೂ ಯಾವ ಪ್ಲಾಟ್ ಇಲ್ಲ, ಸೂಚಿಸಿದವರ ಹೆಸರೂ ಇಲ್ಲ. ಮತದಾರರಿಗೆ ಏನೆಂದು ಉತ್ತರಿಸಬೇಕು ಎಂದು ಪ್ರಶ್ನಿಸಿದರು. ಆಗ ಅಧ್ಯಕ್ಷರು, ‘ಎಲ್ಲ ಸದಸ್ಯರು ಶಾಸಕರನ್ನು ಭೇಟಿಯಾಗಿ ಸಮಸ್ಯೆ ವಿವರಿಸೋಣ’ ಎಂದು ಸಮಾಧಾನಪಡಿಸಿದರು.

    ಸದಸ್ಯರಾದ ಪ್ರವೀಣ ಬಡ್ನಿ, ಸಂದೀಪ ಕಲಾಳ, ಬಸವರಾಜ ತಳವಾರ, ಹನುಮಂತ ಮೇಲಿನಮನಿ, ಸುನೀತಾ ಪಾಟೀಲ, ಬಸಮ್ಮ ವಡೆಕನ್ನವರ ಮಾತನಾಡಿ, ಪಟ್ಟಣದಲ್ಲಿ 24*7 ಕುಡಿಯುವ ನೀರಿನ ಯೋಜನೆ ಕಾಮಗಾರಿಯನ್ನು ಬೇಗ ಮುಗಿಸಬೇಕು ಎಂದರು.

    ಪಪಂನ ಜೆಸಿಬಿ ಯಂತ್ರ ದುರಸ್ತಿ ಹೆಸರಲ್ಲಿ ಹಣ ದುರುಪಯೋಗವಾಗಿದೆ ಎಂದು ಮಲ್ಲಿಕಾರ್ಜುನ ಕಿರೇಸೂರ ಆರೋಪಿಸಿದರು. ಈ ಬಗ್ಗೆ ಅಧಿಕಾರಿಗಳಲ್ಲಿ ಸ್ಪಷ್ಟ ಮಾಹಿತಿ ಇರಲಿಲ್ಲ. ಪಪಂ ವಾಹನಗಳ ನಿರ್ವಹಣೆ ಲೆಕ್ಕ ನೀಡುವಂತೆ ಸದಸ್ಯರು ಆರೋಗ್ಯ ಕಿರಿಯ ನಿರೀಕ್ಷಕಿ ಜಾನಕಿ ಬಳ್ಳಾರಿ ಅವರನ್ನು ಒತ್ತಾಯಿಸಿದರು. ಅದಕ್ಕವರು, ‘ಈ ಹಿಂದಿನ ಚೀಫ್ ಆಫೀಸರ್ ಇಷ್ಟೇ ಬಿಲ್ ಮಾಡುವಂತೆ ಸೂಚಿಸಿದ್ದರು. 1.10 ಲಕ್ಷ ರೂ. ಖರ್ಚಾಗಿದೆ’ ಎಂದು ಉತ್ತರಿಸಿದರು. ಆಗ ಗಣೇಶ ಕೊಕಾಟಿ ಅವರು, 1.40 ಲಕ್ಷ ರೂ. ಖರ್ಚು ಮಾಡಿದ್ದಾರೆಂದು ಹೇಳಿದ್ದಾರೆ. ಇದರಲ್ಲಿ ಯಾವುದು ಸರಿ ಹೇಳಿ ಎಂದು ಪಟ್ಟು ಹಿಡಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಾಗ ಅಧ್ಯಕ್ಷರು ಮಧ್ಯಪ್ರವೇಶಿಸಿ , ಸರಿಯಾದ ಲೆಕ್ಕ ಕೊಡಿ, ಈ ಕುರಿತು ಮುಂದಿನ ದಿನಗಳಲ್ಲಿ ರ್ಚಚಿಸೋಣ ಎಂದು ಹೇಳಿ ಚರ್ಚೆಗೆ ತೆರೆ ಎಳೆದರು.

    ಪಪಂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ವಿಳಂಬವಾದಾಗ ಜೆಸಿಬಿ ದುರಸ್ತಿಗೆ 35 ಸಾವಿರ ರೂ. ವ್ಯಯಿಸಲಾಗಿದೆ ಎಂದು ತಹಸೀಲ್ದಾರ್ ಮೂಲಕ ಹಿಂದಿನ ಚೀಫ್ ಆಫೀಸರ್ ಅವರಿಂದ ಬಿಲ್ ಪಾಸ್ ಮಾಡಲಾಗಿದೆ. ಆದರೆ, ಪಪಂ ಲೆಕ್ಕದಲ್ಲಿ 1.10 ಲಕ್ಷ ರೂ. ಖರ್ಚು ಮಾಡಿದ ಮಾಹಿತಿಯಿದೆ. ಉಳಿದ ಹಣದ ಮಾಹಿತಿ ಗೌಪ್ಯವಿರಿಸಿದ್ದು ವಿಪರ್ಯಾಸದ ಸಂಗತಿ.

    ಬ್ರಹ್ಮಲಿಂಗೇಶ್ವರ ದೇವಸ್ಥಾನ ಸಮೀಪದ ಮಹಾತ್ಮ ಗಾಂಧಿ ವೃತ್ತದಲ್ಲಿ ಅಕ್ಕಪಕ್ಕದ ಅಂಗಡಿಯವರು ಅತಿಕ್ರಮಣ ಮಾಡಿದ್ದರಿಂದ ಮಹಾತ್ಮ ಗಾಂಧೀಜಿ ಸ್ಮಾರಕ ಇಲ್ಲದಂತಾಗಿದೆ. ಅವುಗಳನ್ನು ತೆರವುಗೊಳಿಸುವುದು, ಉಳಿದ ಜಾಗದಲ್ಲಿ ಬೈಕ್ ನಿಲುಗಡೆಗೆ ವ್ಯವಸ್ಥೆ ಮಾಡುವಂತೆ ಠರಾವು ಪಾಸ್ ಮಾಡಲಾಯಿತು.

    ಗಾಳಿಮರ ದೇವಸ್ಥಾನದಿಂದ ಮಾರುಕಟ್ಟೆ ರಸ್ತೆ, ಉರ್ದು ಶಾಲೆವರೆಗಿನ ರಸ್ತೆ ಅಭಿವೃದ್ಧಿಪಡಿಸುವಂತೆ ಪಿಡಬ್ಲ್ಯುಡಿ ಅಧಿಕಾರಿಗಳಿಗೆ ಸೂಚಿಸಲಾಯಿತು. ಪಿಡಬ್ಲ್ಯುಡಿ ಇಂಜಿನಿಯರ್ ಪ್ರತಿಕ್ರಿಯಿಸಿ, ರಸ್ತೆ ಡಾಂಬರೀಕರಣವಷ್ಟೇ ಮಾಡಬೇಕು. ಎಸ್ಟಿಮೇಟ್ ಪ್ರಕಾರ ರಸ್ತೆ ಅಗಲ, ಉದ್ದ ಮಾಡಬೇಕು ಎಂದರು. ರಸ್ತೆ ಅತಿಕ್ರಮಿಸಿದ ಡಬ್ಬಿ ಅಂಗಡಿಗಳನ್ನು ತೆರವುಗೊಳಿಸುವಂತೆ ಸದಸ್ಯರು ಹೇಳಿದರು. ಅಂಗಡಿಗಳನ್ನು ತೆರವುಗೊಳಿಸಿದರೆ ಸಮಸ್ಯೆಯಾಗಿ, ರಸ್ತೆ ಅಭಿವೃದ್ಧಿ ವಿಳಂಬವಾಗುತ್ತದೆ. ಇದ್ದುದರಲ್ಲಿ ರಸ್ತೆ ಅಭಿವೃದ್ಧಿಪಡಿಸಿ. ಉಳಿದಿದ್ದನ್ನು ಮುಂದೆ ನೋಡೋಣ ಎಂದು ಅಧ್ಯಕ್ಷರು ಹೇಳಿದರು. ಅದಕ್ಕೆ ಕೆಲವು ಸದಸ್ಯರು ಅಭಿವೃದ್ಧಿ ವಿಷಯದಲ್ಲಿ ಮೀನಮೇಷ ಮಾಡಬಾರದು ಎಂದರು.ನಂತರ ಸದಸ್ಯರು, ಅಧಿಕಾರಿಗಳ ಸಲಹೆ-ಸೂಚನೆ ಸ್ವೀಕರಿಸಿ ಕೆಲ ವಿಷಯಗಳಿಗೆ ಮಂಜೂರಾತಿಗೆ ಠರಾವು ಮಾಡಲಾಯಿತು. ಪಪಂ ಉಪಾಧ್ಯಕ್ಷೆ ಭುವನೇಶ್ವರಿ ಕವಲಗೇರಿ, 19 ಸದಸ್ಯರು, ಸಿಬ್ಬಂದಿ, ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts