More

    ಕೀಳರಿಮೆ ತೊರೆದರೆ ಉನ್ನತ ಸಾಧನೆ ಸಾಧ್ಯ

    ಸಾಗರ: ಕೀಳರಿಮೆ ಹೊಂದಿರುವವರು ಉನ್ನತಿ ಸಾಧಿಸುವುದು ಸುಲಭವಲ್ಲ ಎಂದು ಎಂಎಡಿಬಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ಹೇಳಿದರು.

    ಭೀಮನಕೋಣೆಯಲ್ಲಿ ಗ್ರಾಮಸ್ಥರು ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿ, 1979ರಲ್ಲಿ ಸೇವಾ ಸಾಗರದ ಪೂರ್ಣಾವಧಿ ಕಾರ್ಯಕರ್ತನಾಗಿ ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡವನು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಪರ್ಕದಿಂದ ಕಾರ್ಯನಿರ್ವಹಿಸುತ್ತಿದ್ದಾಗ ವಿವಿಧ ಪರಿಸರ ಚಳವಳಿಗಳಲ್ಲಿ ಭಾಗವಹಿಸಿದ್ದೆ. 1993ರಲ್ಲಿ ಸಂಘದ ಮುಖ್ಯಸ್ಥರಾಗಿದ್ದ ಹಿರಿಯೂರು ಕೃಷ್ಣಮೂರ್ತಿ ಮಾರ್ಗದರ್ಶನದಲ್ಲಿ ಬಿ.ಎಸ್.ಯಡಿಯೂರಪ್ಪನವರ ಜತೆ ಗುರುತಿಸಿಕೊಂಡಿದ್ದು ನನ್ನ ಬದುಕಿಗೆ ಹೊಸ ತಿರುವು ನೀಡಿತು ಎಂದು ತಿಳಿಸಿದರು.

    ಬಾಲ್ಯದಿಂದಲೂ ನನಗೆ ನನ್ನ ಕುಟುಂಬದೊಂದಿಗೆ ಬೆಳೆಯಲು ಸಾಧ್ಯವಾಗಲಿಲ್ಲ. ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ನನಗೆ ಯಡಿಯೂರಪ್ಪನವರ ಹೋರಾಟದ ವಿವಿಧ ಮಜಲುಗಳು ನನ್ನ ಬೆಳವಣಿಗೆಗೆ ಕಾರಣವಾಯಿತು. 26 ವರ್ಷಗಳಿಂದ ಸಂಘಟನೆ ದೃಷ್ಟಿಯಿಂದ ಶಿಕಾರಿಪುರದಲ್ಲಿ ಕಾರ್ಯನಿರ್ವಹಿಸಿದ್ದ ನನ್ನನ್ನು ಮುಖ್ಯಮಂತ್ರಿಗಳು ಗುರುತಿಸಿ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ನನ್ನ ಜವಾಬ್ದಾರಿ ಹೆಚ್ಚಿಸಿದ್ದರೆ ಎಂದು ಹೇಳಿದರು.

    ಶಾಸಕ ಹರತಾಳು ಹಾಲಪ್ಪ, ಭೀಮನಕೋಣೆ ಲಕ್ಷ್ಮೀನಾರಾಯಣಸ್ವಾಮಿ ದೇವಸ್ಥಾನ ಸಮಿತಿ ಅಧ್ಯಕ್ಷ ಗುರುಪ್ರಸಾದ್, ಕಲ್ಯಾಣಮಂಟಪ ಸಮಿತಿ ಅಧ್ಯಕ್ಷ ಬಿ.ಎನ್.ಶ್ರೀಧರ್, ಮಹಿಳಾ ಮಂಡಳಿ ಅಧ್ಯಕ್ಷೆ ಕಲಾವತಿ, ಅಪರ್ಣಾ ಗುರುಮೂರ್ತಿ, ಶಾರದಾ ರತ್ನವರ್ಮ, ಆರ್.ಸುಬ್ರಹ್ಮಣ್ಯ, ಬಿ.ಎಚ್.ರಾಘವೇಂದ್ರ, ಎಂ.ಎಸ್.ನಾಗರಾಜ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts