More

    ಕಿಮ್ಸ್​ನಲ್ಲಿ ಶೀಘ್ರದಲ್ಲೇ ಪ್ರಾಣವಾಯು ಘಟಕ

    ಹುಬ್ಬಳ್ಳಿ: ಇಲ್ಲಿನ ಕಿಮ್್ಸ ಆವರಣದಲ್ಲಿ ಎಲ್​ಆಂಡ್​ಟಿ ವತಿಯಿಂದ ನಿರ್ವಿುಸಲಾಗುತ್ತಿರುವ 1 ಟನ್ ಸಾಮರ್ಥ್ಯದ ಆಮ್ಲಜನಕ ಉತ್ಪಾದನೆ ಘಟಕಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರು ಭಾನುವಾರ ಭೂಮಿಪೂಜೆ ನೆರವೇರಿಸಿದರು.

    ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಲಿಕ್ವಿಡ್ ಆಮ್ಲಜನಕವನ್ನು ಒಂದು ಕಡೆಯಿಂದ ಇನ್ನೊಂದು ಕಡೆ ಸರಬರಾಜು ಮಾಡಲು ಕಷ್ಟ. ಆದ್ದರಿಂದ ಆಸ್ಪತ್ರೆಗಳಿಗೆ ಅಗತ್ಯವಿರುವ ಆಮ್ಲಜನಕವನ್ನು ಗಾಳಿಯಿಂದಲೇ ಉತ್ಪಾದಿಸುವ ಘಟಕಗಳನ್ನು ಕೇಂದ್ರ ಸರ್ಕಾರದಡಿ ಬರುವ ಉದ್ಯಮಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ನಿರ್ವಿುಸಲಾಗುತ್ತಿದೆ. ಪೆಟ್ರೋಲಿಯಂ ನೈಸರ್ಗಿಕ ಅನಿಲಗಳ ಮಂತ್ರಾಲಯದಡಿ ಬರುವ ಐಒಸಿಎಲ್ (ಇಂಡಿಯನ್ ಆಯಿಲ್ ಕಾಪೋರೇಷನ್ ಲಿಮಿಟೆಡ್), ಎಂಆರ್​ಪಿಎಲ್(ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್) ಸಂಸ್ಥೆಗಳು, ರಾಜ್ಯದಲ್ಲಿ 32 ಆಮ್ಲಜನಕ ಉತ್ಪಾದನೆ ಘಟಕಗಳ ನಿರ್ವಣಕ್ಕೆ ಮುಂದಾಗಿವೆ. ಗಣಿ ಮತ್ತು ಕಲ್ಲಿದ್ದಲು ಮಂತ್ರಾಲಯದಡಿ ಬರುವ ನೇವಲಿ ಇಗ್ನೈಟ್ ಕಾಪೋರೇಷನ್ ರಾಜ್ಯದಲ್ಲಿ 9 ಆಮ್ಲಜನಕ ಉತ್ಪಾದನಾ ಘಟಕಗಳನ್ನು ನಿರ್ವಿುಸಲಿದೆ. ಇದರ ಟೆಂಡರ್ ಪ್ರಕ್ರಿಯೆ ಮುಗಿದಿದೆ ಎಂದರು.

    ಧಾರವಾಡ ಜಿಲ್ಲೆಗೆ ಸಂಬಂಧಿಸಿದಂತೆ ಎನ್​ಎಂಡಿಸಿ(ನ್ಯಾಷನಲ್ ಮಿನರಲ್ ಡೆವೆಲಪ್ಮೆಂಟ್ ಕಾಪೋರೇಷನ್) ವತಿಯಿಂದ ಹುಬ್ಬಳ್ಳಿಯ ಕಿಮ್್ಸ ಹಾಗೂ ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ 1 ಟನ್ ಸಾಮರ್ಥ್ಯದ ಆಮ್ಲಜನಕ ಉತ್ಪಾದನಾ ಘಟಕ, ಎಂಆರ್​ಪಿಎಲ್ ವತಿಯಿಂದ ಕುಂದಗೋಳ ಹಾಗೂ ಕಲಘಟಗಿ ತಾಲೂಕು ಆಸ್ಪತ್ರೆಯಲ್ಲಿ 0.5 ಟನ್ ಸಾಮರ್ಥ್ಯದ ಘಟಕಗಳನ್ನು ನಿರ್ವಿುಸಲಾಗುವುದು. ನವಲಗುಂದ ತಾಲೂಕು ಆಸ್ಪತ್ರೆಯಲ್ಲಿ ದೇಶಪಾಂಡೆ ಫೌಂಡೇಷನ್ ವತಿಯಿಂದ ಆಮ್ಲಜನಕ ಉತ್ಪಾದನಾ ಘಟಕ ನಿರ್ವಿುಸುವಂತೆ ಮನವಿ ಮಾಡಲಾಗಿದೆ. ಕಿಮ್್ಸ ಆವರಣದಲ್ಲಿ ಭೂಮಿ ಪೂಜೆ ನೆರವೇರಿಸಿರುವ ಆಮ್ಲಜನಕ ಉತ್ಪಾದನಾ ಘಟಕ ‘ರೆಡಿ ಟು ಸೆಟ್​ಅಪ್’ ಮಾದರಿಯದ್ದು. ಜೂನ್ 8ರಂದು ಘಟಕದ ಭಾಗಗಳು ಆಗಮಿಸಲಿವೆ. ಜೂನ್ 15ರೊಳಗಾಗಿ ಎನ್​ಎಂಡಿಸಿಯಿಂದಲೂ ಆಮ್ಲಜನಕ ಉತ್ಪಾದನೆ ಘಟಕಗಳ ಭಾಗಗಳು ಆಗಮಿಸಲಿವೆ. ಇವುಗಳನ್ನು ಶೀಘ್ರವಾಗಿ ಅಳವಡಿಸಿ, ಆಮ್ಲಜನಕ ಉತ್ಪಾದನೆಗೆ ಅನುವು ಮಾಡಿ ಕೊಡಲಾಗುವುದು ಎಂದರು.

    ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್, ಶಾಸಕ ಅರವಿಂದ ಬೆಲ್ಲದ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಕಿಮ್್ಸ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಪ್ರಭಾರ ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ ಸಿ., ಉಪ ಅಧೀಕ್ಷಕ ಡಾ. ರಾಜಶೇಖರ ದ್ಯಾಬೇರಿ, ಮುಖ್ಯ ಆಡಳಿತಾಧಿಕಾರಿ ರಾಜಶ್ರೀ ಜೈನಾಪುರ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts