More

    ಕಿತ್ತೂರು ಹೆಸ್ಕಾಂ ಕಚೇರಿ ಜಪ್ತಿ

    ಚನ್ನಮ್ಮನ ಕಿತ್ತೂರು: ಸಂತ್ರಸ್ತರಿಗೆ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶ ಹೊರಡಿಸಿದ್ದರೂ ಅಧಿಕಾರಿಗಳು ನಿರ್ಲಕ್ಷೃ ವಹಿಸಿದ ಹಿನ್ನೆಲೆಯಲ್ಲಿ ಹೆಸ್ಕಾಂ ಕಚೇರಿಯ ಪೀಠೋಪಕರಣಗಳನ್ನು ಕೋರ್ಟ್ ಅದೇಶದ ಮೇರೆಗೆ ಶುಕ್ರವಾರ ಜಪ್ತಿ ಮಾಡಲಾಗಿದೆ.

    ತಾಲೂಕಿನ ಎಂ.ಕೆ.ಹುಬ್ಬಳ್ಳಿಯಲ್ಲಿ ವಿದ್ಯುತ್ ತಂತಿ ತಗುಲಿ 2026ರಲ್ಲಿ ಈರವ್ವ ದೆಸನ್ನವರ, ಗಂಗಪ್ಪ ಗೋಕಾರ ಎಂಬುವರ ಏಳು ಎಕರೆ ಕಬ್ಬು ಸುಟ್ಟಿತ್ತು. ಈ ಕುರಿತು ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು. ಪರಿಹಾರ ನೀಡುವಂತೆ ತೀರ್ಪು ಪ್ರಕಟಿಸಿದ್ದರೂ ನೀಡದ ಹೆಸ್ಕಾಂ ವಿರುದ್ಧ ರೈತರು ಮತ್ತೆ ಕೋರ್ಟ್ ಮೆಟ್ಟಿಲೇರಿದ್ದರು. 2018ರಲ್ಲಿ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶ ಮಾಡಿ ಕೇಸ್ ಮುಕ್ತಾಯಗೊಳಿಸಿತ್ತಾದರೂ ಯಾವುದೇ ಪರಿಹಾರ ನೀಡದೆ ಅಧಿಕಾರಿಗಳು ನುಣುಚಿಕೊಳ್ಳಲು ಯತ್ನಿಸಿದ್ದರು. ನಂತರ ಮತ್ತೆ ಕೋರ್ಟ್ ಮೆಟ್ಟಿಲೇರಿದ್ದ ರೈತರು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿದ್ದರು. ಸಹಾಯಕ ಕಾರ್ಯನಿರ್ವಾಹಕ ಕಚೇರಿಯ 13 ಪ್ಲಾಸ್ಟಿಕ್ ಕುರ್ಚಿ, 9 ವೀಲ್ ಚೇರ್, 1 ವಿಐಪಿ ಚೇರ್, 2 ಕಬ್ಬಿಣದ ಅಲ್ಮೇರಾ, 4 ಟೇಬಲ್ ವಶಕ್ಕೆ ಪಡೆಯಲಾಯಿತು. ರೈತರ ಪರ ವಾದ ಮಂಡಿಸಿದ್ದ ವಕೀಲ ಕೆ.ಎಸ್.ಕೊಡ್ಲಿ, ಅಮೀನರಾದ ಎಸ್.ಜಿ. ನಾವಲಗಿ, ಬಿ.ಐ.ಪಾಟೀಲ, ಬಿ.ಎಸ್.ಕಬ್ಬೂರ, ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂ.ಕೆ.ಹಿರೇಮಠ ಅವರಿಗೆ ನ್ಯಾಯಾಲಯದ ಆದೇಶದ ಪ್ರತಿ ನೀಡಿ ಕಚೇರಿ ಜಪ್ತಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts