More

    ಕಾಸರಗೋಡು-ಬೆಳಗಾವಿ ಗಡಿ ಸಮಸ್ಯೆ ಬಾಧಿಸದು

    ಮೂಡಲಗಿ, ಬೆಳಗಾವಿ: ಕಾಸರಗೋಡ ಮತ್ತು ಬೆಳಗಾವಿ ಗಡಿ ಸಮಸ್ಯೆಯನ್ನು ಸಮರ್ಥವಾಗಿ ಇಲ್ಲಿನ ಸರ್ಕಾರಗಳು ಎದುರಿಸಿದ್ದರಿಂದ ಅವು ಸಮಸ್ಯೆಯಾಗಿ ಬಾಧಿಸುತ್ತಿಲ್ಲ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

    ತಾಲೂಕಿನ ಯಾದವಾಡ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ತಾಲೂಕು ಕನ್ನಡ ರಾಜ್ಯೋತ್ಸವ ಸಮಿತಿ ಆಶ್ರಯದಲ್ಲಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಈಚೆಗೆ ಏರ್ಪಡಿಸಿದ್ದ ಸಾಂಸ್ಕೃತಿಕ ಸಿರಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 2008ರಲ್ಲಿ ಬೆಳಗಾವಿಯಲ್ಲಿ ವಿಧಾನಸಭೆ ಅಧಿವೇಶನ ನಡೆಸುವುದರ ಮೂಲಕ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವೆಂದು ತೋರಿಸಿಕೊಡಲಾಯಿತು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಸುವರ್ಣವಿಧಾನಸೌಧ ನಿರ್ಮಿಸುವ ಮೂಲಕ ಸರ್ಕಾರದ ನಿರ್ಧಾರ ತಿಳಿಸಲಾಯಿತು. ಬೆಳಗಾವಿಯಲ್ಲಿ ವಿಶ್ವಕನ್ನಡ ಸಮ್ಮೇಳನ ನಡೆಸಿ ತಕ್ಕ ಉತ್ತರ ನೀಡಲಾಗಿದೆ. ಇಂದು ಬೆಳಗಾವಿ ಮಹಾನಗರ ಪಾಲಿಕೆಯು ಕನ್ನಡ ಭಾಷಿಕರ ಕೈಯಲ್ಲಿದೆ ಎಂದರು.

    ಉಪನ್ಯಾಸಕಿ ನಜ್ಮಾಭಾನು ಚಿಕ್ಕನೇರಳೆ ಮಾತನಾಡಿ, ಜಾತಿ, ಮತ, ಪಂಥ ಮೀರಿ ಎಲ್ಲರನ್ನೂ ಒಂದುಗೂಡಿಸುವ ಶಕ್ತಿ ಕನ್ನಡ ಭಾಷೆಗಿದೆ ಎಂದರು.
    ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಗಿಣಿರಾಮ ಧಾರವಾಹಿ ನಟ ಶಿವರಾಂ, ಮೈಸೂರ ಗೊಂಬೆ ಕಲಾವಿದೆ ಸುಮಾರಾಜ ಕುಮಾರ, ಡಾನ್ಸ್ ಕರ್ನಾಟಕ ಡಾನ್ಸ್ ತಂಡ, ಸ್ಥಳೀಯ ಕಲಾವಿದರಾದ ಭೃಂಗೇಶ್ ಮತ್ತು ವಿವಿಧ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

    ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷ ಶಿವಪ್ಪಗೌಡ ನ್ಯಾಮಗೌಡ ಅಧ್ಯಕ್ಷತೆ ವಹಿಸಿದ್ದರು. ಕರವೇ ಜಿಲ್ಲಾ ಸಂಚಾಲಕ ಕಲ್ಮೇಶ ಗಾಣಿಗೇರ, ಕೋಲಾರದ ಕಲ್ಲಿನಾಥ ದೇವರು, ಹುಲಜಂತಿ ಮಾಳಿಂಗರಾಯ ಮಹಾರಾಜರು, ಯಾದವಾಡ ಚೌಕಿಮಠದ ಶಿವಯೋಗಿ ದೇವರು, ಪತ್ರಿಮಠದ ಶಿವಾನಂದ ಮಹಾರಾಜರು, ಜೆಡಿಎಸ್ ಮುಖಂಡ ಭೀಮಪ್ಪ ಗಡಾದ, ಕಾಂಗ್ರೆಸ್ ಮುಖಂಡ ಅರವಿಂದ ದಳವಾಯಿ ಮಾಜಿ ಸೈನಿಕ ಶೈಲ್ ಭಜಂತ್ರಿ, ಜಿಪಂ ಸದಸ್ಯ ರಮೇಶ ಉಟಗಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts