More

    ಕಾಶ್ಮೀರದಲ್ಲಿ ಶೃಂಗೇರಿ ಶಾರದೆ ವಿಗ್ರಹ ಪ್ರತಿಷ್ಠಾಪನೆ

    ಶೃಂಗೇರಿ: ಕಾಶ್ಮೀರದ ತೀತ್ವಾಲ್​ನಲ್ಲಿ ನೂತನ ಶಿಲಾಮಯ ಶಾರದಾದೇವಿ ದೇವಾಲಯ ನಿರ್ವಣಗೊಳ್ಳುತ್ತಿದ್ದು ಶೃಂಗೇರಿಯಲ್ಲಿ ನಿರ್ವಣಗೊಂಡ ಶಾರದೆಯ ಪಂಚಲೋಹ ವಿಗ್ರಹವನ್ನು ಅಲ್ಲಿ ಪ್ರತಿಷ್ಠಾಪಿಸಲಾಗುತ್ತಿದೆ. ಜ.24ರಂದು ಬೆಳಿಗ್ಗೆ 11ಗಂಟೆಗೆ ಶೃಂಗೇರಿ ಶ್ರೀಮಠದ ಜಗದ್ಗುರುಗಳು, ಆಡಳಿತಾಧಿಕಾರಿ ಡಾ.ವಿ.ಆರ್.ಗೌರೀಶಂಕರ್, ಕಾಶ್ಮೀರ ಪಂಡಿತರ ಸಮ್ಮುಖದಲ್ಲಿ ಶೃಂಗೇರಿಯಲ್ಲಿ ವಿಶೇಷ ಪೂಜೆ ನಡೆಯಲಿದೆ. ಬಳಿಕ ರಥಯಾತ್ರೆಗೆ ಚಾಲನೆ ನೀಡಲಾಗುವುದು.

    ಬೆಂಗಳೂರಿನ ಕಾಶ್ಮೀರಭವನದಲ್ಲಿ ಈ ವಿಗ್ರಹವನ್ನು ಭಕ್ತರ ದರ್ಶನಕ್ಕೆ ಇಡಲಾಗುತ್ತದೆ. ನಂತರ ಮುಂಬೈ, ಪುಣೆ, ಅಹಮದಾಬಾದ್, ಜಯಪುರ, ಜಮ್ಮು, ದೆಹಲಿ ಸೇರಿ ವಿವಿಧ ರಾಜ್ಯಗಳ ಮೂಲಕ ಮಾರ್ಚ್ 16ರಂದು ವಿಗ್ರಹ ತೀತ್ವಾಲ್ ತಲುಪಲಿದೆ. ಮಾರ್ಚ್ 22ರ ಯುಗಾದಿಯಂದು ನೂತನ ಶಿಲಾಮಯ ಶಾರದೆಯ ದೇವಾಲಯದಲ್ಲಿ ವಿಗ್ರಹ ಪ್ರತಿಷ್ಠಾಪನೆಗೊಳ್ಳಲಿದೆ.

    ಬೆಂಗಳೂರಿನ ಬಿಡದಿಯ ಶಿಲ್ಪಿಗಳ ನೆರವಿನಿಂದ ಈ ದೇವಾಲಯ ನಿರ್ವಿುಸಲಾಗುತ್ತಿದೆ. ದೇಗುಲದ ನಿರ್ವಣಕ್ಕೆ 2021ರ ಡಿಸೆಂಬರ್ 2ರಂದು ಭೂಮಿಪೂಜೆ ನೆರವೇರಿದ್ದು, ದೇವಾಲಯ ನಿರ್ವಣಕ್ಕೆ ಬಿಡದಿಯಿಂದ ಕಲ್ಲುಗಳನ್ನು ಕೊಂಡೊಯ್ಯಲಾಗಿದೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts