More

    ಕಾಲುವೆ ನೀರಿಗಾಗಿ ಬೀದಿಗಿಳಿದ ಅನ್ನದಾತರು

    ಯಾದಗಿರಿ: ಮೆಣಸಿನಕಾಯಿ ಬೆಳೆಗೆ ಅವಶ್ಯವಾಗಿರುವ ನೀರನ್ನು ನಾರಾಯಣಪುರ ಎಡದಂಡೆ ಕಾಲುವೆಯಿಂದ ಹರಿಸಲು ಆಗ್ರಹಿಸಿ ರಾಜ್ಯ ರೈತ ಸಂಘದ ಸೋಮವಾರ ಕರೆ ನೀಡಿದ್ದ ಶಹಾಪುರ ಬಂದ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

    ಬೆಳಗ್ಗೆ ಸಮೀಪದ ಭೀಮರಾಯನ ಗುಡಿಯಿಂದ ಸಂಘದ ಮುಖಂಡರು ಹಾಗೂ ಬೃಹತ್ ಪ್ರಮಾಣದಲ್ಲಿ ರೈತವರ್ಗ ಇಲ್ಲಿನ ಬಸವೇಶ್ವರ ಸರ್ಕಲ್ನವರೆಗೆ ಕಾಲ್ನಡಿಗೆಯಲ್ಲಿ ಆಗಮಿಸಿತು. ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ನೀರು ಕೊಡಿ, ಇಲ್ಲವೇ ಖುಚರ್ಿ ಬಿಡಿ ಎಂದು ಒತ್ತಾಯಿಸಿದರು. ನಗರದ ಪ್ರಮುಖ ಬೀದಿಗಳಲ್ಲಿ ಅಂಗಡಿ ಮುಂಗಟ್ಟುಗಳನ್ನು ವ್ಯಾಪಾರಸ್ಥರು ಸ್ವಯಂ ಪ್ರೇರಿತರಾಗಿ ಬಂದ್ ಮಾಡಿ ಬಂದ್ಗೆ ಬೆಂಬಲ ಸೂಚಿಸಿದರು.

    ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾಜರ್ುನ ಸತ್ಯಂಪೇಟೆ ಮಾತನಾಡಿ, ಕಾಲುವೆಗೆ ಸಮರ್ಪಕವಾಗಿ ನೀರು ಹರಿಸದ ಕಾರಣ ಬೆಳೆ ನಷ್ಟದತ್ತ ಸಾಗಿದ್ದು, ಮುಂದೆ ಆತ್ಮಹತ್ಯೆ ಮಾಡಿಕೊಳ್ಳುವ ಬದಲು ಈಗಲೇ ವಿಷ ಸೇವಿಸಿ ಅತ್ಮಹತ್ಯೆ ಮಾಡಿಕೊಳ್ಳುತ್ತೇವೆ. ನಾವು ನೀರು ಬಿಡಿ ಎಂದು ಕೇಳುತ್ತಿರುವುದು ಗಾಂಜಾ ಬೆಳೆಸುವುದಕ್ಕೆ ಅಲ್ಲ. 14 ಸಾವಿರ ಹೆಕ್ಟೇರ್ನಲ್ಲಿ ಕಷ್ಟ ಪಟ್ಟು ಬೆಳೆದ ಮೆಣಸಿನಕಾಯಿ ಬೆಳೆ ನಮ್ಮ ಕಣ್ಣೆದುರಿಗೆ ಒಣಗಿ ಹೋಗುತ್ತಿದೆ. ಪ್ರಸ್ತುತ ಭೀಕರ ಬರದ ಕರಿ ನೆರಳಿನ ಕಾಮರ್ೊಡ ಆವರಿಸಿದ್ದು ಅನ್ನದಾತರು ತತ್ತರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಸಂಘದ ಮಹಿಳಾ ಘಟಕದ ಅಧ್ಯಕ್ಷೆ ನಾಗರತ್ನ ಪಾಟಿಲ್ ಮಾತನಾಡಿ, ಸರಕಾರ ಕಾಟಾಚಾರಕ್ಕೆ ಮಾತುಕತೆ ನಡೆಸಿದೆ. ರೈತರ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಹೇಳುತ್ತಿಲ್ಲ. ಆದ್ದರಿಂದ ನಮ್ಮ ಹೋರಾಟ ಇನ್ನಷ್ಟು ತೀವ್ರಗೊಳಿಸಿದ್ದು ಇಂದು ನಗರದ ಬಸವೇಶ್ವರ ವೃತ್ತದ ಬಳಿ ರಾಜ್ಯ ಹೆದ್ದಾರಿ ತಡೆದು ನೀರು ಬರುವವರೆಗೆ ಇಲ್ಲಿಂದ ಎದ್ದೇಳುವುದಿಲ್ಲ. ಸರಕಾರ ರೈತರ ತಾಳ್ಮೆ ಪರೀಕ್ಷೆ ಮಾಡುತ್ತಿದೆ ಎಂದು ಹರಿಹಾಯ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts