More

    ಕಾರ್ವಿುಕ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ

    ಶಿರಸಿ: ಕಾರ್ವಿುಕ ಇಲಾಖೆಯ ಕಾರ್ವಿುಕ ವಿರೋಧಿ ನೀತಿ ಖಂಡಿಸಿ ವಿವಿಧ ಕಾರ್ವಿುಕ ಸಂಘಟನೆ ಸದಸ್ಯರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

    ಲಾಕ್​ಡೌನ್ ಸಂದರ್ಭದಲ್ಲಿನ ಕಾರ್ವಿುಕ ಕಲ್ಯಾಣ ಮಂಡಳಿಯಿಂದ ಕಾರ್ವಿುಕರಿಗೆ ನೀಡಲು ಸರ್ಕಾರ ಘೊಷಿಸಿದ ಸಹಾಯಧನ ತಲುಪದೆ ಇರುವ ಹಿನ್ನೆಲೆಯಲ್ಲಿ ಹಾಗೂ ಅಸಮರ್ಪಕ ಕಾರ್ವಿುಕರ ಆಹಾರ ಧಾನ್ಯ ವಿತರಣೆ ಕುರಿತು ವಿರೋಧಿಸಿ ಕಾರ್ವಿುಕರು ಕಾರ್ವಿುಕ ಇಲಾಖೆ ನೀತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಕಾರ್ವಿುಕ ಇಲಾಖೆ ಸದಸ್ಯತ್ವ ನೋಂದಣಿಯಲ್ಲಿ ವಿಳಂಬ, ಇಲಾಖೆಯಲ್ಲಿ ಕಾರ್ವಿುಕರಿಗೆ ಸ್ಪಂದಿಸದಿರುವುದು, ಕಾರ್ವಿುಕರ ಮಕ್ಕಳಿಗೆ ಬರಬೇಕಿರುವ ವಿದ್ಯಾರ್ಥಿ ವೇತನ 2-3 ವರ್ಷವಾದರೂ ಬರದೆ ಇರುವುದು, ಸರ್ಕಾರದ ಯೋಜನೆ ಕಾರ್ವಿುಕರಿಗೆ ಸಕಾಲದಲ್ಲಿ ತಲುಪದೆ ಇರುವುದು, ಕಾರ್ವಿುಕ ಇಲಾಖೆಯಲ್ಲಿಯೇ ನೋಂದಣಿ ಸದಸ್ಯತ್ವ ಜರುಗಿಸಲು ಅವಕಾಶ ಮಾಡಿಕೊಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

    500ಕ್ಕೂ ವಿವಿಧ ಸಂಘಟನೆಯ ಕಾರ್ವಿುಕರು ವೈಯಕ್ತಿಕವಾಗಿ ಕಾರ್ವಿುಕ ಇಲಾಖೆ ಸಿಬ್ಬಂದಿಯೊಂದಿಗೆ ಈ ಸಂದರ್ಭದಲ್ಲಿ ಅಹವಾಲು ಸಲ್ಲಿಸಿದರು.

    ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ, ಜುಜೆ ಫರ್ನಾಂಡಿಸ್, ಗಣಪತಿ ನಾಯ್ಕ, ಅಶೋಕ ಪಡ್ತಿ, ಶ್ರೀನಿವಾಸ ಹೆಗಡೆ, ಮಂಜುನಾಥ ನಾಯ್ಕ, ಕಮಲಾಕರ ಆಚಾರಿ, ಪ್ರಕಾಶ ಪಟಗಾರ, ಮಾದೇವ ಗೌಡ, ಗಣಪತಿ ಆಚಾರಿ, ರಾಮಪ್ಪ ಭೋವಿವಡ್ಡರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts