More

    ಕಾರ್ವಿುಕರ ಆರೋಗ್ಯ ರಕ್ಷಣೆಗೆ ವ್ಯವಸ್ಥೆ ಮಾಡಿ

    ದಾಂಡೇಲಿ: ಸ್ಥಳೀಯ ಕಾಗದ ಕಾರ್ಖಾನೆಯ ಕಾರ್ವಿುಕರು ಮತ್ತು ಸಿಬ್ಬಂದಿಗೆ ಕರೊನಾ ಕುರಿತ ತಪಾಸಣೆ, ಗಂಟಲ ದ್ರವ ಪರೀಕ್ಷೆ, ಸೋಂಕು ದೃಢಪಟ್ಟವರ ಕ್ವಾರಂಟೈನ್ ಮತ್ತು ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಕೆ. ಅವರು ವೆಸ್ಟ್​ಕೋಸ್ಟ್ ಪೆಪರ್​ವಿುಲ್ಲಿನ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಜೈನ್ ಅವರಿಗೆ ಸೂಚನೆ ನೀಡಿದರು.

    ಇಲ್ಲಿನ ನಗರಸಭೆಯಲ್ಲಿ ಶನಿವಾರ ಜರುಗಿದ ಕರೊನಾ ಮುಂಜಾಗ್ರತೆ ಕ್ರಮಗಳ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು. ತಾಲೂಕಿನ ವಿವಿದ ಇಲಾಖೆಗಳ ಅಧಿಕಾರಿಗಳಿಂದ ಮಾಹಿತಿ ಪಡೆದರು. ಇನ್ನು ಮುಂದೆ ತೆಗೆದುಕೊಳ್ಳಬೇಕಿರುವ ಮುಂಜಾಗ್ರತಾ ಕ್ರಮಗಳ ಕುರಿತು ಸಲಹೆ ನೀಡಿದರು.

    ನಗರದಲ್ಲಿ ಕರೊನಾ ಪ್ರಕರಣ ಹೆಚ್ಚುತ್ತಿರುವ ಬಗ್ಗೆ ಜನರು ಗಾಬರಿ ಪಡಬಾರದು. ಹೆಚ್ಚಿನ ಸುರಕ್ಷತಾ ಕ್ರಮಗಳ ಬಗ್ಗೆ ಗಮನ ಹರಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಹೇಳಿದರು.

    ಉಪವಿಭಾಗಾಧಿಕಾರಿ ಪ್ರಿಯಾಂಗ, ತಹಸೀಲ್ದಾರ್ ವಿದ್ಯಾಧರ ಗುಳಗುಳಿ, ಶೈಲೇಶ ಪರಮಾನಂದ, ನಗರಸಭೆ ಪೌರಾಯುಕ್ತ ಡಾ. ಸೈಯದ ಜಾಹೇದಲಿ, ವೆಸ್ಟ್​ಕೋಸ್ಟ್ ಪೆಪರ್​ವಿುಲ್ಲಿನ ಸಂಪರ್ಕ ಅಧಿಕಾರಿ ರಾಜೇಶ ತಿವಾರಿ, ತಾಲೂಕು ವೈದ್ಯಾಧಿಕಾರಿ ಡಾ. ಕದಂ, ಡಾ. ರಾಜೇಶ ಪ್ರಸಾದ, ಡಿವೈಎಸ್​ಪಿ ಶಿವಾನಂದ ಚಲವಾದಿ, ಸಿಪಿಐ ಪ್ರಭು ಗಂಗನಹಳ್ಳಿ, ಮೋತಿಲಾಲ ಪವಾರ, ಭೀಮರಾವ್ ಉಳ್ಳನ್ನವರ, ಪಿಎಸ್​ಐ ಎಸ್. ಯಲ್ಲಪ್ಪ, ಹನುಮಂತ ಬಿರಾದಾರ, ನಗರಸಭೆ ಸಿಬ್ಬಂದಿ ಉಪಸ್ಥಿತರಿದ್ದರು.

    ಸೋಂಕಿತರನ್ನು ಕಳಂಕಿತರನ್ನಾಗಿ ನೋಡಬೇಡಿ
    ಅಧಿಕಾರಿಗಳ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ಹರೀಶಕುಮಾರ, ಕರೊನಾ ಬಗ್ಗೆ ನಕಾರಾತ್ಮಕ ಭಾವನೆ ಒಳ್ಳೆಯದಲ್ಲ, ಸೋಂಕಿತರನ್ನು ಕಳಂಕಿತರನ್ನಾಗಿ ನೋಡಬೇಡಿ. ಅವರಲ್ಲಿ ರೋಗ ಎದುರಿಸಲು ಧೈರ್ಯ ತುಂಬಿ, ಶೀಘ್ರದಲ್ಲಿ ಗುಣವಾಗಲಿ ಎಂದು ಹಾರೈಸುವ ಮನೋಭಾವ ಬೆಳೆಸಿಕೊಳ್ಳಿ ಎಂದರು.

    ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಕಾರ್ಖಾನೆ ವತಿಯಿಂದ ಕಾರ್ವಿುಕರು ಮತ್ತು ಸಿಬ್ಬಂದಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಕರೊನಾ ಕುರಿತು ಜಿಲ್ಲಾಡಳಿತದ ಜತೆಗೆ ಎಲ್ಲ ರೀತಿಯ ಸಹಕಾರ ನೀಡಲು ನಾವು ಸದಾ ಸಿದ್ಧರಿದ್ದೇವೆ.
    | ರಾಜೇಂದ್ರ ಜೈನ್ ಕಾರ್ಯನಿರ್ವಾಹಕ ನಿರ್ದೆಶಕರು ವೆಸ್ಟ್​ಕೋಸ್ಟ್ ಪೇಪರ್​ವಿುಲ್ ದಾಂಡೇಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts