More

    ಕಾರ್ವಿುಕರಿಗಿಲ್ಲ ಯೋಜನೆ ಸಮಗ್ರ ಮಾಹಿತಿ

    ಸಾಗರ: ಕಾರ್ವಿುಕರ ಕಲ್ಯಾಣಕ್ಕಾಗಿ 8,500 ಕೋಟಿ ರೂ. ಕಾರ್ವಿುಕ ಇಲಾಖೆಯಲ್ಲಿದ್ದು ಈ ಹಣ ಸದ್ವಿನಿಯೋಗವಾದರೆ ಕಾರ್ವಿುಕರ ಅಭ್ಯುದಯವಾಗುತ್ತದೆ. ಆದರೆ ಕಾರ್ವಿುಕರಿಗೆ ಯೋಜನೆ ಕುರಿತು ಸಮಗ್ರ ಮಾಹಿತಿ ಸಿಗುತ್ತಿಲ್ಲ ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು.

    ನಗರದಲ್ಲಿ ಶುಕ್ರವಾರ ಬಿಜೆಪಿ ನಗರ ಘಟಕ ಏರ್ಪಡಿಸಿದ್ದ ಜನಸ್ಪಂದನೆ ಕಾರ್ಯಕ್ರಮದಲ್ಲಿ ಕಾರ್ವಿುಕ ಕಾರ್ಡ್ ಅಭಿಯಾನವನ್ನು ಕಾರ್ವಿುಕರಿಗೆ ಅರ್ಜಿ ವಿತರಿಸುವ ಮೂಲಕ ಚಾಲನೆ ನೀಡಿದರು. ಕಾರ್ವಿುಕ ಕಾರ್ಡ್ ಬಡ ಕಾರ್ವಿುಕರ ಬದುಕಿನ ಆಶಾಕಿರಣ ಆಗಿದ್ದು ಕಾರ್ವಿುಕ ಇಲಾಖೆಯಲ್ಲಿ ನೋಂದಾಯಿಸಿ ಕಾರ್ಡ್ ಪಡೆಯುವ ಕಾರ್ವಿುಕರಿಗೆ ಮನೆ ನಿರ್ವಣ, ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ಸಿಗುತ್ತದೆ. ಒಂದೊಮ್ಮೆ ಕಾರ್ವಿುಕರಿಗೆ ಕೆಲಸ ಮಾಡುವ ಸಂದರ್ಭದಲ್ಲಿ ಅಪಘಾತವಾದರೆ ವಿಮಾ ಸೌಲಭ್ಯ ಸಿಗುತ್ತದೆ. ಇದರಿಂದ ಕಾರ್ವಿುಕರಿಗೆ ಹೆಚ್ಚಿನ ಸೌಲಭ್ಯ ಸಿಗುತ್ತದೆ ಎಂದರು.

    ಕಾರ್ವಿುಕರಿಗೆ ಕಾರ್ಡ್ ನೀಡುವ ಮಾದರಿಯಲ್ಲಿಯೆ ಗ್ರಾಮೀಣ ಕೃಷಿ ಕೂಲಿ ಕಾರ್ವಿುಕರಿಗೂ ಕಾರ್ಡ್ ಅಗತ್ಯವಿದ್ದು, ಅವರಿಗೆ ಸಹ ಎಲ್ಲ ರೀತಿಯ ಸೌಲಭ್ಯ ದೊರೆಯುವಂತೆ ಆಗಬೇಕು, ಈ ನಿಟ್ಟಿನಲ್ಲಿ ಅಧಿಕಾರಿಗಳ ಜತೆ ಚರ್ಚೆ ನಡೆಸಿ ಸಿಎಂಗೆ ಮನವಿ ಸಲ್ಲಿಸಲಾಗುತ್ತದೆ ಎಂದು ಹೇಳಿದರು.

    ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಕರೊನಾ ಸೋಂಕಿನ ಸಂದರ್ಭದಲ್ಲಿ ಶ್ರಮಿಕ ವರ್ಗದ ಪರವಾಗಿ ನಿಂತಿದೆ ಎಂದರು.

    ಬಿಜೆಪಿ ನಗರ ಘಟಕದ ಅಧ್ಯಕ್ಷ ಕೆ.ಆರ್.ಗಣೇಶಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಪಾಧ್ಯಕ್ಷ ಯು.ಎಚ್.ರಾಮಪ್ಪ, ಗ್ರಾಮಾಂತರ ಘಟಕದ ಅಧ್ಯಕ್ಷ ಲೋಕನಾಥ್ ಬಿಳಿಸಿರಿ, ನಗರಸಭಾ ಸದಸ್ಯ ಡಿ.ತುಕಾರಾಮ್ ಕೆ.ಆರ್.ಸುರೇಶ್, ಸಂತೋಷ್ ಶೇಟ್, ದೀಪಕ್ ಮರೂರು, ಸತೀಶ್ ಕೆ.ಮೊಗವೀರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts