More

    ಕಾರ್ಯಕತರ್ೆಯರಿಗೆ ಉದ್ದೇಶಿತ ಕೆಲಸ ಮಾತ್ರ ಕೊಡಿ

    ಹುಮನಾಬಾದ್: ಅಂಗನವಾಡಿ ಕಾರ್ಯಕತರ್ೆಯರಿಗೆ ಅನ್ಯ ಕಾರ್ಯಗಳ ಜವಾಬ್ದಾರಿ ವಹಿಸದೆ ಮೂಲ ಉದ್ದೇಶಿತ ಕಾರ್ಯಕ್ಕೆ ಬಳಸಿಕೊಳ್ಳುವ ನಿಟ್ಟಿನಲ್ಲಿ ಸಕರ್ಾರ ಕ್ರಮ ಕೈಗೊಳ್ಳಬೇಕೆಂದು ಅಂಗನವಾಡಿ ನೌಕರರ ಸಂಘದ ರಾಜ್ಯಾಧ್ಯಕ್ಷೆ ವರಲಕ್ಷ್ಮೀ ಆಗ್ರಹಿಸಿದರು.

    ಪಟ್ಟಣದ ಸಕರ್ಾರಿ ನೌಕರರ ಸಮುದಾಯ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಮಟ್ಟದ 7ನೇ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಂಗನವಾಡಿ ನಡೆಸಬೇಕಾದ ಕಾರ್ಯಕತರ್ೆಯರಿಗೆ ಮೂಲ ಇಲಾಖೆ ಅಲ್ಲದೆ ಇತರ ಹಲವಾರು ಇಲಾಖೆಯವರ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ಇದರಿಂದ ಒತ್ತಡ ಹೆಚ್ಚಾಗುವುದರ ಜತೆಗೆ ಮೂಲ ಕಾರ್ಯಕ್ಕೆ ಅಡಿಯಾಗುತ್ತಿದೆ. ಈ ಬಗ್ಗೆ ಸಕರ್ಾರ ಗಂಭೀರ ಚಿಂತನೆ ನಡೆಸಬೇಕೆಂದು ಸಂಘದ ಪರವಾಗಿ ಒತ್ತಾಯಿಸಲಾಗಿದೆ.ನಿರಂತರ ಹೋರಾಟ ಮಾಡಿದರೆ ಮಾತ್ರ ಸಕರ್ಾರದ ಸೌಲಭ್ಯ ಪಡೆಯಲು ಸಾಧ್ಯವಿದೆ. ಆದ್ದರಿಂದ ಸಂಘಟಿತರಾಗಬೇಕೆಂದು ಸಲಹೆ ನೀಡಿದರು.

    ಸೇವೆಗೆ ಸೇರಿದಾಗಿನಿಂದ ಸತತ ಹೋರಾಟ ನಡೆಸಿದ್ದರ ಪರಿಣಾಮ ಕೆಲ ಸೌಲಭ್ಯ ದಕ್ಕಿವೆ. ಇನ್ನುಳಿದ ಬೇಡಿಕೆಗಳ ಈಡೇರಿಕೆಗಾಗಿ ಅದೇ ನಿಟ್ಟಿನಲ್ಲಿ ಕಾನೂನು ಬದ್ಧವಾಗಿ ಈಡೇರಿಸಲು ಸಕರ್ಾರ ಮುಂದಾಗಬೇಕು. ಬೇಡಿಕೆ ಈಡೇರುವವರೆಗೆ ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯಲಿದೆ ಎಂದರು.

    ಸಂಘದ ತಾಲೂಕು ಅಧ್ಯಕ್ಷೆ ಉಷಾ ಗುತ್ತೇದಾರ, ಪ್ರಮುಖರಾದ ರೇಷ್ಮಾ ಹಂಸರಾಜ, ಪದ್ಮಾ, ಶಕುಂತಲಾ, ಪ್ರಭು ಸಂತೋಷಕರ್, ಶಾಂತಾ ಘಂಟೆ, ಅಂಬುಬಾಯಿ ಮಾಳಗೆ, ಜಗದೇವಿ ಪತ್ರಿ, ಬಸವರಾಜ ಮಾಳಗೆ ಇತರರಿದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts