More

    ಕಾರ್ತಿಕದಲ್ಲಿ ನರೇಗಲ್ಲ ಹಿರೇಮಠ ಜಾತ್ರೆ

    ನರೇಗಲ್ಲ: ಪಟ್ಟಣದ ಹಿರೇಮಠದ ಜಾತ್ರಾ ಮಹೋತ್ಸವ, ಗುರುಗಳ ಪುಣ್ಯಸ್ಮರಣೋತ್ಸವ ಹಾಗೂ ರಂಭಾಪುರಿ ಪೀಠದ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ನವೆಂಬರ್ 15ರ ಕಾರ್ತಿಕ ಮಾಸದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಸಲು ಹಿರೇಮಠ ಸಭಾಭವನದಲ್ಲಿ ಇತ್ತೀಚೆಗೆ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.
    ಮಲ್ಲಿಕಾರ್ಜುನ ಶಿವಾಚಾರ್ಯರು ಮಾತನಾಡಿ, ಜನರನ್ನು ಆಧ್ಯಾತ್ಮದ ಕಡೆಗೆ ಕರೆತರುವ ಉದ್ದೇಶದಿಂದ ಜಾತ್ರೆ, ಉತ್ಸವಗಳನ್ನು ನಡೆಸಲಾಗá-ತ್ತದೆ. ನ. 15 ರಂದು ನಡೆಯುವ ಜಾತ್ರಾ ಮಹೋತ್ಸವದ ಅಂಗವಾಗಿ ರಂಭಾಪುರಿ ಪೀಠದ ಶ್ರೀವೀರಸೋಮೇಶ್ವರ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ನಡೆಸಲು ತಿರ್ವನಿಸಲಾಗಿದೆ. ಈ ಧಾರ್ವಿುಕ ಕಾರ್ಯದಲ್ಲಿ ಭಕ್ತರು ಸಕ್ರಿಯವಾಗಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು. ದಸರಾ ನಂತರ ಭಕ್ತರೊಂದಿಎಗ ಮತ್ತೆ ಸಭೆ ನಡೆಸಿ ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸಲಾಗá-ತ್ತದೆ ಎಂದರು.
    ನರೇಗಲ್ಲ ಹಾಗೂ ಮಜರೆ ಗ್ರಾಮದ ಭಕ್ತರು ಮಾತನಾಡಿ, ಜಾತ್ರಾ ಮಹೋತ್ಸವದ ಮುಂಚಿತವಾಗಿ 9 ದಿನಗಳ ಕಾಲ ಆಧ್ಯಾತ್ಮಿಕ ಪುರಾಣ, ಪ್ರವಚನ ಜತೆಗೆ ಕೃಷಿ ಚಿಂತನೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಯನ್ನು ಪ್ರತಿದಿನ ನಡೆಸಬೇಕು ಎಂದರು.
    ಡಾ. ಮಲ್ಲಯ್ಯ ಚಪ್ಪರಮಠ, ಎಂ.ಎಸ್. ಧಡೇಸೂರಮಠ, ಮುತ್ತಣ್ಣ ಪಲ್ಲೆದ, ಡಾ. ಕೆ.ಬಿ. ಧನ್ನೂರ, ಬಿ.ಕೆ. ಪೋಲೀಸ್ ಪಾಟೀಲ. ನಿವೃತ್ತ ಶಿಕ್ಷಕ ಎಂ.ಎ. ಹಿರೆವಡೆಯರ, ಡಾ.ಆರ್.ಕೆ. ಗಚ್ಚಿನಮಠ, ರುದ್ರಮುನಿಸ್ವಾಮಿ ಹಿರೇಮಠ, ಎಸ್.ಕೆ. ಪಾಟೀಲ, ಅಣ್ಣಪ್ಪ ಜೋಳದ, ಡಾ. ಎಲ್. ಎಸ್. ಗೌರಿ, ಅಂದಾನಯ್ಯ ಮಾಲಗಿತ್ತಿಮಠ, ಮಲ್ಲಿಕಾರ್ಜುನಗೌಡ ಮಲ್ಲನಗೌಡ್ರ, ಸಿದ್ದಪ್ಪ ರಾಗಿ, ಬಸವರಾಜ ಕಳಕೊಣ್ಣವರ, ಉಮೇಶ ಸಂಗನಾಳಮಠ, ಕಲ್ಮೇಶ ತೊಂಡಿಹಾಳ, ಕುಮಾರಸ್ವಾಮಿ ಕೊರದಾನ್ಯಮಠ, ಶಾಂತಪ್ಪ ಚಿಕ್ಕೊಪ್ಪದ, ಕೆ. ಎಸ್. ಕಳಕೊಣ್ಣವರ, ನಿಂಗನಗೌಡ ಲಕ್ಕನಗೌಡ್ರ, ಶರಣಪ್ಪ ಜುಟ್ಲದ, ಶಾಂತಪ್ಪ ಚಿಕ್ಕೊಪ್ಪದ, ವಿರುಪಾಕ್ಷಗೌಡ ಲಕ್ಕನಗೌಡ್ರ, ರಮೇಶ ಕಳಕೊಣ್ಣವರ, ಮುತ್ತಣ್ಣ ಹಡಪದ ಇತರರು ಇದ್ದರು. ಶಿಕ್ಷಕ ಎಸ್. ವಿ. ಹಳ್ಳಿಕೇರಿ ಸ್ವಾಗತಿಸಿದರು. ಎಂ. ಕೆ. ಬೇವಿನಕಟ್ಟಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts