More

    ಕಾರ್ಗಿಲ್​ ವೀರ ಯೋಧರಿಗೆ ಸನ್ಮಾನ

    ಬೆಳಗಾವಿ: ಇಲ್ಲಿನ ರಾಮತೀರ್ಥ ನಗರದ ಮಾಜಿ ಸೈನಿಕರ ಕಲ್ಯಾಣ ಸಂದ ವತಿಯಿಂದ ರಾಮತೀರ್ಥ ನಗರದ ರಾಜಮಹಲ್​ ಸಭಾಗೃಹದಲ್ಲಿ ಬುಧವಾರ 24ನೇ ಕಾರ್ಗಿಲ್​ ವಿಜಯೋತ್ಸವದ ಅಂಗವಾಗಿ ಕಾರ್ಗಿಲ್​ ವಿಜಯ ದಿವಸ ಗೌರವ ಸಮರ್ಪಣಾ ಸಮಾರಂಭ ನೆರವೇರಿತು.

    ಕಾರ್ಗಿಲ್​ ಯುದ್ಧದಲ್ಲಿ ಪಾಲ್ಗೊಂಡ ಯೋಧರು ಮತ್ತು ಕಾರ್ಗಿಲ್​ ಯುದ್ಧದ ಹುತಾತ್ಮ ಯೋಧರ ಪತ್ನಿಯರು, ರಾಷ್ಟ್ರ ಮಟ್ಟದ ಶೂಟಿಂಗ್​ ಸ್ಪರ್ಧೆಯಲ್ಲಿ ಮೂರು ಬಾರಿ ಯಶಸ್ವಿಯಾದ ಎನ್​.ಸಿ.ಸಿ. ಕೆಡೆಟ್​ ಪ್ರೀತಿ ಸವಡಿ ಸೇರಿ ವಿವಿಧ ಸಾಧಕರನ್ನು ಸನ್ಮಾನಿಸಲಾಯಿತು. ವಿಜಯಾ ಅಥೋರ್ ಆ್ಯಂಡ್​ ಟ್ರಾಮಾ ಸೆಂಟರ್​ ವತಿಯಿಂದ ಈವರೆಗೆ ಸೇನಾ ಯೋಧರು ಮತ್ತು ಮಾಜಿ ಯೋಧರು ಮತ್ತು ಪರಿವಾರದ ಆರೋಗ್ಯ ಭಾಗ್ಯಕ್ಕಾಗಿ ವಿಜಯಾ ಹೆಲ್ತ್​ ಕಾರ್ಡ್​ ಬಿಡುಗಡೆಗೊಳಿಸಿ, ವಿತರಿಲಾಯಿತು.

    ಮಾಜಿ ಯೋಧರಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ರಿಯಾಯಿತಿ ದರದಲ್ಲಿ ಲಭ್ಯವಿರುವ ಆರೋಗ್ಯ ತಪಾಸಣೆ ಸೌಲಭ್ಯ ಒದಗಿಸಲಾಗುವುದು ಎಂದು ವಿಜಯಾ ಅಥೋರ್ ಮತ್ತು ಟ್ರಾಮಾ ಸೆಂಟರ್​ ವತಿಯಿಂದ ಸಂಸ್ಥೆಯ ನಿರ್ದೇಶಕ ಡಾ.ರವಿ ಪಾಟೀಲ ತಿಳಿಸಿದರು. ಕಾರ್ಗಿಲ್​ ಯುದ್ಧದಲ್ಲಿ ಪ್ರಾಣ ಸಮರ್ಪಿಸಿದ ಯೋಧರ ಸ್ಮರಣಾರ್ಥ ಸ್ಮಾರಕಕ್ಕೆ ಪುಷ್ಪಚಕ್ರ ಸಮರ್ಪಿಸಲಾಯಿತು.

    ಕ್ಯಾಂಪ್​ನ ತೋರಳಿ ಕೋಬ್ರಾ ಕಮಾಂಡೋ ಡಿ.ಐ.ಜಿ.ಪಿ. ರವೀಂದ್ರನ್​ ಎಂ.ಎಲ್​., ಮಾಳಮಾರುತಿ ಪೊಲೀಸ್​ ಠಾಣೆಯ ಪೊಲೀಸ್​ ಇನ್ಸ್​ಸ್ಪೆಕ್ಟರ್​ ಸುನೀಲ್​ ಪಾಟೀಲ, ಭಾರತೀಯ ಕೃಷಿಕ ಸಮಾಜದ ಅಧ್ಯ ಸಿದ್ದಗೌಡ ಮೋದಗಿ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಪಾಲಿಕೆ ಸದಸ್ಯ ಹನುಮಂತ ಕೊಂಗಾಲಿ, ಮಾಜಿ ಸೈನಿಕರ ಕಲ್ಯಾಣ ಸಂದ ಅಧ್ಯ ರಾಜೇಂದ್ರ ಹಲಗಿ, ಕಾರ್ಮಿಕ ಅಧಿಕಾರಿ ಗಡದನವರ, ರಾಮ ತೀರ್ಥ ನಗರ ಮಾಜಿ ಸೈನಿಕರ ಕಲ್ಯಾಣ ಸಂದ ಅಧ್ಯ ರಾಜೇಂದ್ರ ಹಲಗಿ, ಮಲ್ಲೆಶ ವಣ್ಣೂರ, ಚಂದ್ರಶೇಖರ ಸವಡಿ ಇತರರಿದ್ದರು. ಬಸವರಾಜ ವಣ್ಣೂರ ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts