More

    ಸಮುದ್ರದ ವಾತಾವರಣದ ಮಾಹಿತಿ ನೀಡುವ ಬೋಯ್ ಅಳವಡಿಕೆ

    ಕಾರವಾರ: ಮೀನುಗಾರರಿಗೆ ಸಮುದ್ರದ ವಾತಾವರಣದ ಮಾಹಿತಿ ನೀಡುವ 75 ಲಕ್ಷ ರೂ. ಮೌಲ್ಯದ ಎಂಕೆ-4 ಎಂಬ ಡೈರೆಕ್ಷನ್ ವೇವ್ ರೈಡರ್ ಬೋಯ್(ತೇಲುವ ಗೂಡು)ಅನ್ನು ಅರಬ್ಬಿ ಸಮುದ್ರದಲ್ಲಿ ಅಳವಡಿಸಲಾಗಿದೆ.

    ರಾಜ್ಯದ ಕರಾವಳಿಯಲ್ಲಿ ಮೀನುಗಾರಿಕೆ ಮಾಹಿತಿಗೆ ಅಳವಡಿಸಿದ ನೆದರ್ಲ್ಯಾಂಡ್ ದೇಶದಲ್ಲಿ ತಯಾರಾದ ಮೊದಲ ಅತೀ ಆಧುನಿಕ ತಂತ್ರಜ್ಞಾನದ ಮೊದಲ ಯಂತ್ರ ಇದಾಗಿದೆ. ಇಲ್ಲಿನ ಕವಿವಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಜೆ.ಎಲ್. ರಾಠೋಡ್ ಅವರ ನೇತೃತ್ವದಲ್ಲಿ ಅದರ ನಿರ್ವಹಣೆ, ನಿಗಾ ನಡೆಯಲಿದೆ.

    ಹೈದರಾಬಾದ್​ನಲ್ಲಿರುವ ಸಮುದ್ರ ಮಾಹಿತಿ ಮತ್ತು ಸೇವೆಗಳ ರಾಷ್ಟ್ರೀಯ ಕೇಂದ್ರ (ಇನ್​ಕ್ವಾಯಿಸ್) ನೊಂದಿಗೆ ಇದು ಸಂಪರ್ಕ ಹೊಂದಿದ್ದು, ಈ ಬೋಯ್ ಪಡೆದ ಮಾಹಿತಿಯನ್ನು ಇನ್ಸಾಟ್ ಉಪಗ್ರಹ ಹಾಗೂ ಎಚ್​ಎಫ್​ಗಳ ಮೂಲಕ ಮೀನುಗಾರರಿಗೆ ತಲುಪಿಸಲಾಗುತ್ತದೆ.

    ಈಗಾಗಲೇ ಕಾರವಾರ ಕಡಲ ತೀರದಲ್ಲಿ ಎಂಕೆ-3 ಎಂಬ 50 ಲಕ್ಷ ರೂ. ಮೌಲ್ಯದ ಬೋಯ್ ಇದೆ. ಅದರಲ್ಲಿ ಅಲೆಗಳ ಎತ್ತರ, ದಿಕ್ಕು, ಮಾದರಿ, ಸಮುದ್ರದ ಮೇಲ್ಮೈ ನೀರಿನ ಉಷ್ಣತೆಯನ್ನು ಅಳೆಯಲಾಗುತ್ತಿತ್ತು. ಹೊಸ ಬೋಯ್ನಲ್ಲಿ ನೀರಿನ ಪ್ರವಾಹದ ವೇಗ, ಹರಿಯುವ ದಿಕ್ಕು ಹಾಗೂ ವಾತಾವರಣದ ಉಷ್ಣತೆಯನ್ನು ಅಳೆಯಲಾಗುತ್ತದೆ. ದಪ್ಪ ಹಗ್ಗದಿಂದ ಕಟ್ಟಿ ಗೂಡು ಸಮುದ್ರದಲ್ಲಿ ಎಲ್ಲೆಂದರಲ್ಲಿ ಹೋಗದಂತೆ ಬಂಧಿಸಲಾಗಿದೆ.

    ಸೋಲಾರ್ ಪ್ಯಾನಲ್​ಗಳು ಇದರಲ್ಲಿದ್ದುದರಿಂದ ನಿಖರ ಹಾಗೂ ಸ್ಪಷ್ಟ ಮಾಹಿತಿಯನ್ನು ಇದು ಒದಗಿಸಬಲ್ಲದು ಎಂದು ಡಾ. ಜೆ.ಎಲ್. ರಾಠೋಡ್ ಅವರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts