More

    ಕಾರವಾರದಲ್ಲಿ ಸಾವಿರ ದಾಟಿದ ಕರೊನಾ

    ಕಾರವಾರ: ಕಾರವಾರ ಈಗ ಕರೊನಾ ಹಾಟ್ ಸ್ಪಾಟ್ ಆಗಿದೆ. ದಿನದಿಂದ ದಿನಕ್ಕೆ ಪ್ರಕರಣಗಳು ಹೆಚ್ಚುತ್ತಿವೆ. ಜಿಲ್ಲೆಯಲ್ಲಿ ಅತೀ ಹೆಚ್ಚು ಸಕ್ರಿಯ ಪ್ರಕರಣಗಳಿರುವ ತಾಲೂಕು ಈಗ ಕಾರವಾರವಾಗಿದೆ. ಶುಕ್ರವಾರ ಕಾರವಾರದಲ್ಲಿ 66 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 1019ಕ್ಕೆ ಏರಿದೆ. 538 ಜನ ಗುಣ ಹೊಂದಿದ್ದಾರೆ. 472 ಸಕ್ರಿಯ ಪ್ರಕರಣಗಳಿದ್ದು, 355 ಜನ ಆಸ್ಪತ್ರೆ ಹಾಗೂ ಕರೊನಾ ಕೇರ್ ಸೆಂಟರ್​ಗಳಲ್ಲಿ, 117 ಜನ ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 9 ಜನ ಕರೊನಾಕ್ಕೆ ಬಲಿಯಾಗಿದ್ದಾರೆ. ದಾಂಡೇಲಿ ಹಾಗೂ ಹಳಿಯಾಳ ತಾಲೂಕು ಸೇರಿ ಒಟ್ಟಾರೆ ಕರೊನಾ ಸೋಂಕಿತರ ಸಂಖ್ಯೆ 1551 ದಾಟಿದೆ. 1389 ಜನ ಗುಣ ಹೊಂದಿದ್ದಾರೆ. ಇದುವರೆಗೆ 23 ಜನ ಮೃತಪಟ್ಟಿದ್ದು, 139 ಸಕ್ರಿಯ ಪ್ರಕರಣಗಳಿವೆ. ಜಿಲ್ಲೆಯಲ್ಲಿ ಶುಕ್ರವಾರ 161 ಜನರಲ್ಲಿ ಕರೊನಾ ಪತ್ತೆಯಾಗಿದ್ದು, 106 ಜನ ಗುಣ ಹೊಂದಿದ್ದಾರೆ. ಒಂದು ಸಾವು ಸಂಭವಿಸಿದೆ. ಜಿಲ್ಲೆಯ ಒಟ್ಟಾರೆ ಸೋಂಕಿತರ ಸಂಖ್ಯೆ 7935 ಆಗಿದ್ದು, 5463 ಜನ ಗುಣ ಹೊಂದಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 2377 ಕ್ಕೆ ಏರಿಕೆಯಾಗಿದೆ. ಯಲ್ಲಾಪುರದ 75 ವರ್ಷದ ವೃದ್ಧ ಕ್ರಿಮ್್ಸ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಒಟ್ಟಾರೆ ಮೃತರ ಸಂಖ್ಯೆ 95 ಕ್ಕೆ ಏರಿಕೆಯಾಗಿದೆ. ಶುಕ್ರವಾರ ಅಂಕೋಲಾದಲ್ಲಿ 16, ಕುಮಟಾದಲ್ಲಿ 19, ಹೊನ್ನಾವರದಲ್ಲಿ 17, ಸಿದ್ದಾಪುರದಲ್ಲಿ 4, ಯಲ್ಲಾಪುರದಲ್ಲಿ 15, ಮುಂಡಗೋಡಿನಲ್ಲಿ 18, ಹಳಿಯಾಳದಲ್ಲಿ 2 ಕರೊನಾ ಪ್ರಕರಣಗಳು ಪತ್ತೆಯಾಗಿವೆ. ಕಾರವಾರದಲ್ಲಿ 60, ಅಂಕೋಲಾದಲ್ಲಿ 15, ಕುಮಟಾದಲ್ಲಿ 3, ಹೊನ್ನಾವರದಲ್ಲಿ 9, ಸಿದ್ದಾಪುರದಲ್ಲಿ 15, ಹಳಿಯಾಳದಲ್ಲಿ 4 ಜನ ಗುಣ ಹೊಂದಿ ಬಿಡುಗಡೆಯಾಗಿದ್ದಾರೆ.

    ಕರೊನಾಗೆ ಸ್ಟಾಫ್ ನರ್ಸ್ ಬಲಿ
    ಮುಂಡಗೋಡ:
    ಕರೊನಾ ಸೋಂಕಿನಿಂದ ತಾಲೂಕಿನ ಮಳಗಿ ಪಂಚವಟಿ ನವೋದಯ ವಿದ್ಯಾಲಯದ ಸ್ಟಾಫ್ ನರ್ಸ್ ಬುಧವಾರ ಮೃತಪಟ್ಟಿದ್ದಾರೆ. ಹಳಿಯಾಳದ ಕಮಲಮ್ಮ ವೈ.ಸಿ. (49) ಮೃತಪಟ್ಟವರು. 25 ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದರು. ಕೆಲ ದಿನಗಳಿಂದ ಹಲ್ಲು ನೋವು ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಸೆ. 5ರಂದು ಹುಬ್ಬಳ್ಳಿ ಎಸ್​ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಕೋವಿಡ್ ಪರೀಕ್ಷೆಗೆ ಒಳಪಡಿಸಿದಾಗ ಪಾಸಿಟಿವ್ ಬಂದಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts