More

    ಕಾಯಕ ನಿಷ್ಠೆಯಿಂದ ಸಾಧನೆ ಸಾಧ್ಯ

    ಬೆಳಗಾವಿ: ಎಲ್ಲ ಅಂಗಾಂಗಗಳು ಇದ್ದೂ, ಮನಸ್ಸಿನ ಜಂಜಾಟಗಳಿಂದ ಅನಾರೋಗ್ಯವಾಗಿರುವವನೇ ನಿಜವಾದ ಅಂಗವಿಕಲ. ಅಂಗವಿಕಲತೆ ಶಾಪವಲ್ಲ, ವರ. ಕಾಯಕದಲ್ಲಿ ನಿಷ್ಠೆ, ಯೋಗ, ಧ್ಯಾನ ರೂಢಿಸಿಕೊಳ್ಳುವುದರ ಮೂಲಕ ಏನನ್ನಾದರೂ ಸಾಧಿಸಬಹುದು ಎಂದು ಮಾನವ ಕಂಪ್ಯೂಟರ್ ಖ್ಯಾತಿಯ ಬಸವರಾಜ ಉಮರಾಣಿ ಹೇಳಿದರು.

    ಲಿಂಗಾಯತ ಸಂಘಟನೆ ವತಿಯಿಂದ ಭಾನುವಾರ ಬೆಳಗಾವಿಯ ಫ. ಗು.ಹಳಕಟ್ಟಿ ಭವನದಲ್ಲಿ ಹಮ್ಮಿಕೊಂಡಿದ್ದ ಇಂಜಿನಿಯರ್ಸ್ ದಿನ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಕಾರಾತ್ಮಕ ಯೋಚನೆ ಮಾಡುವುದರ ಮೂಲಕ ಸಾಧನೆ ಸಾಧ್ಯ ಎಂದರು. ಗಣಿತದ ಅನೇಕ ಲೆಕ್ಕಗಳನ್ನು ಕ್ಷಣಾರ್ಧದಲ್ಲಿ ಮಾಡಿ ತೋರಿಸಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದರು.

    ಅಧ್ಯಕ್ಷತೆ ವಹಿಸಿದ್ದ ಈರಣ್ಣ ದೇಯನ್ನವರ ಮಾತನಾಡಿ, ದೇಶ ಕಟ್ಟುವ ಕಾಯಕ ಮಾಡುತ್ತಿರುವ ಇಂಜಿನಿಯರ್‌ಗಳ ಕಾಯಕ ನಿಜಕ್ಕೂ ಮೆಚ್ಚುವಂಥದ್ದು ಎಂದರು. ಇಂಜಿನಿಯರ್‌ಗಳಾದ ಮಲ್ಲಿಕಾರ್ಜುನ ಮುದನೂರ, ರಮೇಶ ತುಬಚಿ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರವೀಣ ಮಠಪತಿ ಮಾತನಾಡಿದರು. ಹಲವು ವರ್ಷಗಳಿಂದ ವಿವಿಧ ಇಂಜಿನಿಯರಿಂಗ್ ವಿಭಾಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಿ.ಆರ್.ಪಾಟೀಲ, ವೀರೇಶ ಶೆಟ್ಟೆನ್ನವರ, ಜಗದೀಶ ಪಾವಟೆ, ನಾಗರಾಜ ಬನ್ನೂರ ಸೇರಿ 30ಕ್ಕೂ ಹೆಚ್ಚು ಹಿರಿಯ ಮತ್ತು ಕಿರಿಯ ಇಂಜಿನಿಯರ್‌ಗಳನ್ನು ಸಂಘಟನೆ ವತಿಯಿಂದ ಸನ್ಮಾನಿಸಲಾಯಿತು. ಶಂಕರ ಗುಡಸ, ಶಶಿಭೂಷಣ ಪಾಟೀಲ, ಸತೀಶ ಪಾಟೀಲ, ಸದಾಶಿವ ದೇವರಮನಿ, ವಿ.ಕೆ.ಪಾಟೀಲ, ಆನಂದ ಕರ್ಕಿ, ಬಸವರಾಜ ಕರಡಿಮಠ, ಎಂ ವೈ.ಮೆಣಸಿನಕಾಯಿ, ಶೋಭಾ ದೇಯನ್ನವರ, ರತ್ನಾ ಮುಂಗರವಾಡಿ, ಅಕ್ಕಮಹಾದೇವಿ ತೆಗ್ಗಿ, ಮಹಾದೇವಿ ಅರಳಿ, ಶಿವಾನಂದ ತಲ್ಲೂರ, ಸಂಗಮೇಶ ಅರಳಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts