More

    ಕಾಯಂ ಅಖಾಡ ನಿರ್ವಣಕ್ಕೆ ಚಿಂತನೆ

    ಧಾರವಾಡ: ನಗರದಲ್ಲಿ ಪ್ರತಿವರ್ಷ ಕುಸ್ತಿ ಹಬ್ಬ ಆಚರಿಸುವ ಮೂಲಕ ಕುಸ್ತಿ ಕ್ರೀಡೆಗೆ ಪ್ರೋತ್ಸಾಹ ನೀಡಲು ಕಾಯಂ ಕುಸ್ತಿ ಅಖಾಡಾಗಳ ನಿರ್ವಣಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಶಾಸಕ ಅಮೃತ ದೇಸಾಯಿ ಹೇಳಿದರು.

    ನಗರದಲ್ಲಿ ಫೆ. 22ರಿಂದ ನಡೆಯುವ ಕುಸ್ತಿ ಹಬ್ಬದ ಪ್ರಚಾರಾರ್ಥ ಜಿಲ್ಲಾ ಆಸ್ಪತ್ರೆ ಬಳಿಯ ಜ್ಯೋತಿ ಗರಡಿ ಮನೆಯಿಂದ ಶನಿವಾರ ಹಮ್ಮಿಕೊಂಡಿದ್ದ ರ್ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಕುಸ್ತಿ ಕ್ರೀಡೆ ದೇಸಿ ಶೈಲಿಯ ಪ್ರಮುಖ ಆಟ. ಕುಸ್ತಿಯನ್ನು ಜಿಲ್ಲೆ ಹಾಗೂ ಸುತ್ತಲಿನ ಜಿಲ್ಲೆಗಳಲ್ಲಿ ಪ್ರೋತ್ಸಾಹಿಸಲು ಕರ್ನಾಟಕ ಕುಸ್ತಿ ಹಬ್ಬವನ್ನು ನಗರದಲ್ಲಿ ಆಯೋಜಿಸಲಾಗುತ್ತಿದೆ ಎಂದರು.

    ಈ ಸಂದರ್ಭದಲ್ಲಿ ಪ್ರತಿ ತಿಂಗಳು ಮಾಸಾಶನ ಬರುವಂತೆ ನೋಡಿಕೊಳ್ಳಲು ಮಾಜಿ ಕುಸ್ತಿ ಪೈಲ್ವಾನರು ಶಾಸಕರಿಗೆ ಮನವಿ ಮಾಡಿದಾಗ, ಮಾಸಾಶನ ಹೆಚ್ಚಳ ಕುರಿತು ಕ್ರೀಡಾಮಂತ್ರಿ ಹಾಗೂ ಮುಖ್ಯಮಂತ್ರಿ ಅವರೊಂದಿಗೆ ರ್ಚಚಿಸಿ ಕ್ರಮಕೈಗೊಳ್ಳಲಾಗುವುದು. ಸದ್ಯ ಮಾಜಿ ಕುಸ್ತಿ ಪಟುಗಳಿಗೆ ತಿಂಗಳಿಗೆ 2500 ರೂ. ನೀಡಲಾಗುತ್ತಿದೆ. ಅದನ್ನು 5000 ರೂ. ಹೆಚ್ಚಿಸಲು ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

    ರ್ಯಾಲಿಯು ಅಂಜುಮನ್ ವೃತ್ತ, ಆಲೂರು ವೆಂಕಟರಾವ್ ವೃತ್ತ, ಕಾಲೇಜು ರಸ್ತೆ ಮೂಲಕ ಕೆಸಿಡಿ ಮೈದಾನದಲ್ಲಿ ಸಮಾರೋಪಗೊಂಡಿತು. ಅಶೋಕ ಏಣಗಿ, ಬಸಣ್ಣ ಈಟಿಗಟ್ಟಿ, ಮಹಾದೇವ ತಡಸಿನಕೊಪ್ಪ, ಫಕೀರಪ್ಪ ಕರಡಿಕೊಪ್ಪ, ರೆಹಮಾನ ಹೋಳಿ, ಲಿಂಗರಾಜ ಕಲ್ಲೂರ, ವಿರೂಪಾಕ್ಷ ಚಿಕ್ಕಮಲ್ಲಿಗವಾಡ, ಶಿವಲಿಂಗ ದುಮ್ಮಾಡ, ದ್ಯಾಮಣ್ಣ ತಡಸಿನಕೊಪ್ಪ, ಮುಶಪ್ಪ ನವಲೂರು, ಸಹದೇವ ಹಿರೇಮಲ್ಲಿಗವಾಡ ಸೇರಿ ಮಾಜಿ ಹಾಗೂ ಹಾಲಿ ಪೈಲ್ವಾನರು, ಯುವಕ ಸಂಘಗಳ ಸದಸ್ಯರು, ಕುಸ್ತಿ ಹಬ್ಬದ ಸಮಿತಿ ಸದಸ್ಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts