More

    ಕಾಮಗಾರಿ ಪೂರ್ಣಗೊಳಿಸಲು ಬದ್ಧ

    ಕಡೂರು: ಅಪೂರ್ಣಗೊಂಡಿರುವ ಸಮುದಾಯ ಭವನಗಳ ಕಾಮಗಾರಿ ಪೂರ್ಣಗೊಳಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ತಿಳಿಸಿದರು.

    ನಿಡಘಟ್ಟ ಗ್ರಾಮದಲ್ಲಿ ಶುಕ್ರವಾರ ಶ್ರೀ ಬೀರಲಿಂಗೇಶ್ವರ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿದ ಅವರು, ದಾನಿಗಳು ಮತ್ತು ಶಾಸಕರ ಅನುದಾನದಿಂದ ಗ್ರಾಮದಲ್ಲಿ ಸಮುದಾಯ ಭವನ ನಿರ್ವಣಗೊಂಡಿದೆ. ಇದು ಒಂದು ಸಮಾಜಕ್ಕೆ ಸೀಮಿತವಾಗದೆ ಎಲ್ಲ ಸಮುದಾಯದವರಿಗೂ ಸದ್ಬಳಕೆಯಾಗಬೇಕು ಎಂದರು.

    ಸಮುದಾಯ ಭವನದ ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಬಹಳಷ್ಟು ಸಮುದಾಯ ಭವನಗಳು ಅಪೂರ್ಣಗೊಂಡಿದ್ದು, ಸರ್ಕಾರ ಅವುಗಳನ್ನು ಪೂರ್ಣಗೊಳಿಸಲು ಬದ್ಧವಾಗಿದೆ. ಮಠಗಳಿಗೆ ಸರ್ಕಾರ 120 ಕೋಟಿಯಿಂದ 150 ಕೋಟಿ ರೂ. ಅನುದಾನ ನೀಡಿದೆ ಎಂದರು.

    ಧಾರ್ವಿುಕ ಪಾವಿತ್ರ್ಯ ಹೊಂದಿರುವ ಹಾಲುಮತ ಸಮಾಜದೊಳಗೆ ಹುಳಿ ಹಿಂಡುವ ಜನರ ನಡುವೆ ಜಾಗೃತವಾಗಿ ಗಟ್ಟಿತನದಿಂದ ಬದುಕುತ್ತಿದೆ. ಹುಳಿ ಹಿಂಡಿದ ಹಾಲು ಮೊಸರಾಗಿ, ಕಡೆದಾಗ ಬೆಣ್ಣೆಯಾಗಿ, ಕಾಯಿಸಿದಾಗ ತುಪ್ಪವಾಗಿ ಉಪಯೋಗಕಾರಿಯೇ ಆಗುವಂತೆ ಹಾಲುಮತ ಸಮಾಜ ಏನೇ ತೊಂದರೆ ಎದುರಾದರೂ ಒಗ್ಗಟ್ಟಿನಿಂದ ಎದುರಿಸಿದರೆ ಮಹತ್ಕಾರ್ಯಗಳು ನಡೆಯುತ್ತವೆ ಎಂಬುದಕ್ಕೆ ಇದೇ ಸಾಕ್ಷಿ. ಸಮುದಾಯ ಭವನ ಎಲ್ಲ ಸಮಾಜದವರ ಸೌಹಾರ್ದತೆಯ ಸಂಕೇತವಾಗಲಿ ಎಂದು ಕಾಗಿನೆಲೆ ಕನಕಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts