More

    ಕಾಮಗಾರಿ ನಡೆಸಿ 15 ದಿನಗಳಲ್ಲಿ ಕಿತ್ತ ಡಾಂಬರ್

    ಮುಂಡಗೋಡ: ಕಾಮಗಾರಿ ಮಾಡಿದ 15 ದಿನಗಳಲ್ಲಿಯೇ ಡಾಂಬರ್ ಕಿತ್ತು ಹೋಗಿದೆ. ರಸ್ತೆಯಲ್ಲಿ ಹೊಂಡಗಳು ಬಿದ್ದಿವೆ.

    ಇದು ಪಟ್ಟಣದ ಶಿರಸಿ-ಹುಬ್ಬಳ್ಳಿ ರಾಜ್ಯ ಹೆದ್ದಾರಿಯಲ್ಲಿನ ಡಿ.ಎಸ್. ಮಹಾಲೆ ಮಿಲ್ ಬಳಿ ಪಿಡಬ್ಲು್ಯಡಿ ಇಲಾಖೆ ನಡೆಸಿದ ರಸ್ತೆಯ ಸ್ಥಿತಿ.

    ಕಳೆದ ವರ್ಷ ಆದ ನೆರೆಯಿಂದ ಇಲ್ಲಿನ ರಸ್ತೆ ಮತ್ತು ಸೇತುವೆ ಕೊಚ್ಚಿಕೊಂಡು ಹೋಗಿತ್ತು. ಆಗ ಪಿಡಬ್ಲ್ಯುಡಿ ಇಲಾಖೆಗೆ ರಸ್ತೆ ಕಾಮಗಾರಿ ನಡೆಸುವ ಜವಾಬ್ದಾರಿ ನೀಡಲಾಗಿತ್ತು.

    ಕಾಮಗಾರಿ ಮಾಡುವಾಗ ರಸ್ತೆಗೆ ಮಸಾರಿ ಮಣ್ಣು ಮತ್ತು ಗೊಚ್ಚು ಹಾಕಿ ನಂತರ ನೀರು ಹಾಕಿರಲೇ ಇಲ್ಲ. ಅಲ್ಲಿಯೇ ಇದ್ದ ನಿವಾಸಿಗಳು ನಿರಂತರ ವಾಹನ ಸಂಚಾರದಿಂದ ರಸ್ತೆಯ ಧೂಳು ತಡೆಯಲಾರದೇ ಸುಮಾರು 10 ಟ್ಯಾಂಕರ್ ನೀರನ್ನು ಹಾಕಿಸಿದ್ದರು. ನಂತರ ಕಾಮಗಾರಿ ಮಂದಗತಿಯಲ್ಲಿ ಸಾಗಿತ್ತು.

    ಈಗ ಕಾಮಗಾರಿ ಮುಗಿದು 15 ದಿನಗಳಾಗಿದ್ದು, ಒಂದೆರಡು ಮಳೆಗೆ ಡಾಂಬರ್ ಕಿತ್ತು ಹೋಗಿರುವುದು ಕಾಮಗಾರಿಯ ಗುಣಮಟ್ಟಕ್ಕೆ ಕನ್ನಡಿಯಾಗಿದೆ.

    ಪಿಡಬ್ಲು್ಯಡಿ ಕಾಮಗಾರಿಗಳು ಗುಣಮಟ್ಟದಿಂದ ಆಗುತ್ತಿಲ್ಲ ನಮ್ಮ ಮನೆ ಹತ್ತಿರ ಮಾಡಿದ ರಸ್ತೆ ಕಾಮಗಾರಿಯೂ ಸಂಪೂರ್ಣ ಕಳಪೆ ಮಟ್ಟದ್ದಾಗಿದ್ದು ಡಾಂಬರ್ ಕಿತ್ತು ಹೋಗಿದೆ. ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ದೀಪಕ ಮಹಾಲೆ ಸ್ಥಳೀಯ ನಿವಾಸಿ

    ಕೀಳುವಷ್ಟು ಕೀಳಲ: ಈ ಕುರಿತು ಪತ್ರಿಕೆಯು ಪಿಡಬ್ಲು್ಯಡಿ ಇಲಾಖೆ ಮುಂಡಗೋಡ ಎಇಇ ದಯಾನಂದ ಬಿ.ಆರ್. ಅವರನ್ನು ಕೇಳಿದಾಗ, ‘ಸ್ಥಳಕ್ಕೆ ಹೋಗಿ ನಾನು ನೋಡಿಕೊಂಡು ಬಂದಿದ್ದೇನೆ. ಮೇಲಿಂದ ಮೇಲೆ ಮಳೆ ಬಂದಿದೆ. ವಾತಾವರಣದ ಕಾರಣದಿಂದ ಡಾಂಬರ್ ಕಿತ್ತು ಹೋಗಿದೆ. ಇನ್ನೂ ಎಷ್ಟು ಕೀಳುತ್ತದೋ ಕೀಳಲಿ ನಂತರ ಅದರ ಮೇಲೆ ಮತ್ತೊಮ್ಮೆ ಡಾಂಬರೀಕರಣ ಮಾಡಲಾಗುವುದು’ ಎಂದು ಉತ್ತರ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts