More

    ಕಾಫಿ ನಾಡಲ್ಲಿ ಒಂದೇ ದಿನ ಚುನಾವಣೆ

    ಚಿಕ್ಕಮಗಳೂರು: ಜಿಲ್ಲೆಯಲ್ಲಿ ಅವಧಿ ಪೂರ್ಣಗೊಂಡ ಎಲ್ಲ 209 ಗ್ರಾಪಂ ಚುನಾವಣೆ ಒಂದೇ ಹಂತದಲ್ಲಿ ನಡೆಯಲಿದೆ. ಈ ಮೊದಲು ಎರಡು ಹಂತದಲ್ಲಿ ( ಡಿ. 22 ಮತ್ತು ಡಿ. 27) ಚುನಾವಣೆ ನಿಗದಿಪಡಿಸಲಾಗಿತ್ತು. ಆದರೆ ಜಿಲ್ಲಾಧಿಕಾರಿ ವರದಿ ಆಧರಿಸಿ ಚುನಾವಣಾ ಆಯೋಗ ಮೊದಲ ಹಂತದಲ್ಲಿಯೇ (ಡಿ. 22ರಂದು ) ಜಿಲ್ಲೆಯ ಎಲ್ಲ ಗ್ರಾಪಂಗೆ ಚುನಾವಣೆ ದಿನಾಂಕ ನಿಗದಿಪಡಿಸಿ ಆದೇಶ ಮಾಡಿದೆ.

    ಮೊದಲ ಹಂತದ ಚುನಾವಣಾ ವೇಳಾಪಟ್ಟಿಯಂತೆ ಜಿಲ್ಲೆಯ ಎಲ್ಲ ಗ್ರಾಪಂಗಳ ಚುನಾವಣೆ ನಡೆಸಬೇಕು ಎಂದು ಆಯೋಗ ಆದೇಶ ಮಾಡಿದ್ದು, ಸೋಮವಾರದಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಜಿಲ್ಲಾಧಿಕಾರಿ ನ. 11ರಂದು ಸಲ್ಲಿಸಿದ ವರದಿ ಆಧರಿಸಿ ಮೊದಲ ಹಂತದಲ್ಲಿ ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ ಮತ್ತು ಶೃಂಗೇರಿ ಹಾಗೂ ಎರಡನೇ ಹಂತದಲ್ಲಿ ಎನ್.ಆರ್.ಪುರ, ಕಡೂರು, ತರೀಕೆರೆ, ಅಜ್ಜಂಪುರ ತಾಲೂಕುಗಳ ಗ್ರಾಪಂ ಚುನಾವಣೆ ನಿಗದಿಪಡಿಸಲಾಗಿತ್ತು.

    ಎರಡನೇ ಹಂತದ ಚುನಾವಣೆ ದತ್ತ ಜಯಂತಿ ಆಚರಣೆ ವೇಳೆಯಲ್ಲಿಯೇ ನಿಗದಿಯಾದ ಕಾರಣ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಆಯೋಗಕ್ಕೆ ಮತ್ತೊಂದು ಪತ್ರ ಬರೆದು ಎರಡನೇ ಹಂತದಲ್ಲಿ ಚುನಾವಣೆ ಬೇಡ, ಮೊದಲ ಹಂತದಲ್ಲೇ ಎಲ್ಲ ಗ್ರಾಪಂಗಳಿಗೆ ಚುನಾವಣೆ ಮಾಡಲು ಸಿದ್ಧರಿದ್ದೇವೆ ಎಂದು ತಿಳಿಸಿದ್ದರು. ಜಿಲ್ಲೆಯಲ್ಲಿ ಡಿ. 27ರಿಂದ 29ರವರೆಗೆ ದತ್ತ ಜಯಂತಿ ಆಚರಣೆ ಮಾಡಲಾಗುತ್ತಿದ್ದು, ಕಾನೂನು ಮತ್ತು ಸುವ್ಯವಸ್ಥೆ ದೃಷ್ಟಿಯಿಂದ ಸೂಕ್ಷ್ಮ ಪ್ರದೇಶವಾಗಿರುವ ಕಾರಣ ಪೊಲೀಸ್ ಮತ್ತು ಇತರ ಇಲಾಖೆ ಅಧಿಕಾರಿಗಳ ಸೇವೆ ಅಗತ್ಯ. ಹೀಗಾಗಿ ಎರಡನೇ ಹಂತದ ಚುನಾವಣೆ ಮತ್ತು ದತ್ತ ಜಯಂತಿಗೆ ಬಂದೋಬಸ್ತ್ ಮಾಡಲು ಕಷ್ಟವಾಗಲಿದೆ ಎಂದು ಜಿಲ್ಲಾಧಿಕಾರಿ ಚುನಾವಣಾ ಆಯೋಗಕ್ಕೆ ಬರೆದ ಪತ್ರದಲ್ಲಿ ತಿಳಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts