More

    ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ ಸೋಂಕು

    ಧಾರವಾಡ: ಜಿಲ್ಲೆಯಲ್ಲಿ ಕರೊನಾ ಹರಡುವಿಕೆಯು ಕಾಡ್ಗಿಚ್ಚಿನ ಸ್ವರೂಪ ಪಡೆಯತೊಡಗಿದ್ದು, ಗುರುವಾರ ಒಂದೇ ದಿನ 47 ಜನರಲ್ಲಿ ಸೋಂಕು ದೃಢಪಟ್ಟಿದೆ. ಸೋಂಕಿತರ ಒಟ್ಟು ಸಂಖ್ಯೆ 427ಕ್ಕೆ ಏರಿಕೆಯಾಗಿದೆ. ಹಳೇಹುಬ್ಬಳ್ಳಿ ಬಿಂದರಗಿ ಓಣಿ ಕರೊನಾ ಹಾಟ್​ಸ್ಪಾಟ್​ನಂತೆ ಕಂಡುಬಂದಿದ್ದು, 8 ಜನರಲ್ಲಿ ವೈರಾಣು ದೃಢಪಟ್ಟಿದೆ.

    ಹುಬ್ಬಳ್ಳಿ ತಾಲೂಕಿನಲ್ಲಿ 31, ಧಾರವಾಡದಲ್ಲಿ 10 ಪ್ರಕರಣ ಪತ್ತೆಯಾಗಿದ್ದು, ಅಪಾಯವನ್ನು ಸಾರಿ ಹೇಳುತ್ತಿದೆ.

    ಈಗಾಗಲೇ ಕರೊನಾ ಸೋಂಕಿತರಾಗುವವರ ಸಂಪರ್ಕ ವಷ್ಟೇ ಅಲ್ಲದೆ, ನೆಗಡಿ-ಕೆಮ್ಮು-ಜ್ವರ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು, ವೈದ್ಯರನ್ನು ಸಂರ್ಪಸಿದಾಗ ಗಂಟಲ ದ್ರವ ಪರೀಕ್ಷೆಗೆ ಒಳಪಟ್ಟಾಗ ಕರೊನಾ ದೃಢಪಟ್ಟ ಪ್ರಕರಣಗಳು ದೊಡ್ಡ ಸಂಖ್ಯೆಯಲ್ಲಿವೆ. ಇಂಥವರಿಗೆ ಯಾರಿಂದ ಸೋಂಕು ಹರಡಿದೆ ಎಂದು ಪತ್ತೆ ಮಾಡುವುದು ಸವಾಲಾಗಿದೆ.

    ಸೋಂಕು ದೃಢಪಟ್ಟವರ ವಿವರ: ಹಳೇಹುಬ್ಬಳ್ಳಿ ಬಿಂದರಗಿ ಓಣಿಯ 18, 22, 28, 38, 45 ವರ್ಷದ ಮಹಿಳೆಯರು, 13, 16, 31 ವರ್ಷದ ಪುರುಷರು ಹುಬ್ಬಳ್ಳಿ ಗಣೇಶಪೇಟೆಯ 54 ವರ್ಷದ ಪುರುಷನ ಸಂಪರ್ಕ ಹೊಂದಿದ್ದಾರೆ.

    ಹುಬ್ಬಳ್ಳಿ ಗಣೇಶಪೇಟ ಕರಿಯಮ್ಮ ದೇವಸ್ಥಾನ ಹತ್ತಿರದ ನಿವಾಸಿ 38 ವರ್ಷದ ಮಹಿಳೆ; ತಬೀಬ್ ಲ್ಯಾಂಡ್ ನಿವಾಸಿ 49 ವರ್ಷದ ಪುರುಷ ನೆಗಡಿ, ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. ಕುಲಕರ್ಣಿ ಹಕ್ಕಲದ 45 ವರ್ಷದ ಮಹಿಳೆ, 28, 35 ವರ್ಷದ ಪುರುಷರು, 3 ಹಾಗೂ 10 ವರ್ಷದ ಬಾಲಕಿಯರು ಹುಬ್ಬಳ್ಳಿ ಗೂಡ್ಸ್ ಶೆಡ್ ರಸ್ತೆಯ ಸೋಂಕಿತನ ಸಂಪರ್ಕ ಹೊಂದಿದ್ದಾರೆ.

    ಹುಬ್ಬಳ್ಳಿ ನೆಹರುನಗರದ 34 ವರ್ಷದ ಪುರುಷನಿಗೆ ಅದೇ ಪ್ರದೇಶದ ವ್ಯಕ್ತಿಯ ಸಂಪರ್ಕವಿದೆ. ಪಾಟೀಲ ಗಲ್ಲಿಯ 73 ವರ್ಷದ ಪುರುಷ, ಕೇಶ್ವಾಪುರದ 20 ವರ್ಷದ ಪುರುಷ, ಹಳೇ ಹುಬ್ಬಳ್ಳಿ ದಿಡ್ಡಿ ಓಣಿಯ 11 ವರ್ಷದ ಬಾಲಕಿ, ರವೀಂದ್ರನಗರ ಅಕ್ಕಮಹಾದೇವಿ ಆಶ್ರಮ ಹಿಂಭಾಗದ ನಿವಾಸಿ 37 ವರ್ಷದ ಮಹಿಳೆ, ರ್ಕ ಬಸವೇಶ್ವರ ನಗರದ 42 ವರ್ಷದ ಮಹಿಳೆ, ಹುಬ್ಬಳ್ಳಿಯ ಗದಗ ರಸ್ತೆ ಸಿಮೆಂಟ್ ಚಾಳದ 39 ವರ್ಷದ ಪುರುಷ, ಮಂಟೂರ ರಸ್ತೆ ಮಂಗನಸಿ ಪ್ಲಾಟ್​ನ 18 ವರ್ಷದ ಯುವಕ, ಕೌಲಪೇಟೆಯ 20 ವರ್ಷದ ಮಹಿಳೆ, 55 ವರ್ಷದ ಪುರುಷ, ಮಕಾನದಾರ ಗಲ್ಲಿಯ 17 ವರ್ಷದ ಯುವಕ ನೆಗಡಿ, ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. ಹುಬ್ಬಳ್ಳಿ ಶಾಂತಿನಿಕೇತನ ನಗರದ 38 ವರ್ಷದ ಮಹಿಳೆ ಅಂತರ ಜಿಲ್ಲೆಯ ಪ್ರಯಾಣ ಇತಿಹಾಸ ಹೊಂದಿದ್ದಾರೆ.

    ಗಣೇಶಪೇಟೆ ಜಮಾದಾರ ಗಲ್ಲಿಯ 24 ವರ್ಷದ ಮಹಿಳೆಯ ಸಂಪರ್ಕ ಪತ್ತೆ ಮಾಡಲಾಗುತ್ತಿದೆ. ಪಾಟೀಲ ಗಲ್ಲಿಯ 56 ವರ್ಷದ ಮಹಿಳೆ, ಕುಸುಗಲ್ ಗ್ರಾಮದ 60 ವರ್ಷದ ಪುರುಷನ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಯಲ್ಲಾಪುರ ಓಣಿ ಕೆ.ಕೆ. ನಗರದ 47 ವರ್ಷದ ಮಹಿಳೆ ನೆಗಡಿ, ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

    ಧಾರವಾಡದ ಕೋರ್ಟ್ ವೃತ್ತದ ಅಂಚೆ ಕಚೇರಿ ಹತ್ತಿರದ ಭೋವಿ ಗಲ್ಲಿಯ 43 ವರ್ಷದ ಮಹಿಳೆ, ಮದಿಹಾಳದ ವ್ಯಕ್ತಿಯ ಸಂಪರ್ಕದಿಂದ ಸೋಂಕಿತರಾಗಿದ್ದಾರೆ. ಮಾಳಮಡ್ಡಿ ಯು.ಬಿ. ಹಿಲ್​ನ 20 ಹಾಗೂ 48 ವರ್ಷದ ಮಹಿಳೆ ಅದೇ ಪ್ರದೇಶದ ವ್ಯಕ್ತಿಯ ಸಂಪರ್ಕ ಹೊಂದಿದ್ದಾರೆ. ತಾಲೂಕಿನ ಗರಗ ಗ್ರಾಮದ ಮೌಲಾಲಿ ಗಲ್ಲಿಯ 38 ವರ್ಷದ ಪುರುಷ ನೆಗಡಿ, ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. ಧಾರವಾಡ ಪೊಲೀಸ್ ಹೆಡ್ ಕ್ವಾಟರ್ಸ್​ನ 31 ಹಾಗೂ 47 ವರ್ಷದ ಮಹಿಳೆಯರಿಗೆ ಅದೇ ಪ್ರದೇಶದ ಸೋಂಕಿತನ ಸಂಪರ್ಕವಿದೆ. ಧಾರವಾಡ ಸಂಗೊಳ್ಳಿ ರಾಯಣ್ಣ ನಗರ ಗಣಪತಿ ಗುಡಿ ಹತ್ತಿರದ 29 ವರ್ಷದ ಪುರುಷ ನೆಗಡಿ, ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. ವಿದ್ಯಾಗಿರಿಯ 34 ವರ್ಷದ ಪುರುಷ, ದಾನೇಶ್ವರಿ ನಗರದ 28 ವರ್ಷದ ಮಹಿಳೆ, ಕೊಪ್ಪದಕೇರಿಯ 66 ವರ್ಷದ ಮಹಿಳೆ ನೆಗಡಿ, ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

    ಕುಂದಗೋಳ ತಾಲೂಕಿನ ಸಂಕ್ಲೀಪುರದ 25 ವರ್ಷದ ಪುರುಷನ ಸಂಪರ್ಕ ಪತ್ತೆ ಮಾಡಲಾಗುತ್ತಿದೆ.

    ಕಲಘಟಗಿ ತಾಲೂಕಿನ ದಾಸ್ತಿಕೊಪ್ಪದ 41 ವರ್ಷದ ಪುರುಷ ನೆಗಡಿ, ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. ಗಂಜಿಗಟ್ಟಿ ನಿವಾಸಿ 30 ವರ್ಷದ ಪುರುಷನಿಗೆ ಧಾರವಾಡ ಮಾಳಮಡ್ಡಿ ಯು.ಬಿ. ಹಿಲ್ ಪ್ರದೇಶದ ಸೋಂಕಿತನ ಸಂಪರ್ಕವಿದೆ.

    ಬಳ್ಳಾರಿ ಜಿಲ್ಲೆಯ ಹೊಸಪೇಟೆಯ 60 ವರ್ಷದ ಪುರುಷ ಹಾಗೂ ಹಾವೇರಿ ಜಿಲ್ಲೆ ಬ್ಯಾಡಗಿಯ 52 ವರ್ಷದ ಪುರುಷನ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ವಿಜಯಪುರ ನಗರದ ಜಿವಿಎಲ್​ಎಂ ಲೇಔಟ್​ನ 35 ವರ್ಷದ ಪುರುಷ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದನು.

    ಕಂಡಕ್ಟರ್​ಗೂ ಕಾಟ: ವಾಕರಸಾ ಸಂಸ್ಥೆಯ ಹುಬ್ಬಳ್ಳಿ ಗ್ರಾಮೀಣ ವಿಭಾಗದ 2ನೇ ಘಟಕದ ನಿರ್ವಾಕನೊಬ್ಬನಿಗೆ ಕರೊನಾ ತಗುಲಿದೆ. ಆತನ ಸಂಪರ್ಕದಲ್ಲಿದ್ದ ಮೂವರು ಚಾಲಕರನ್ನು ಕ್ವಾರಂಟೈನ್ ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts