More

    ಕಾಡುಗಳು ಅಕ್ಷಯ ಪಾತ್ರೆ ಇದ್ದಂತೆ

    ಹುಬ್ಬಳ್ಳಿ: ಅರಣ್ಯಗಳು ಜಗತ್ತಿಗೆ ಆಮ್ಲಜನಕ, ನೀರು, ನೆರಳು, ಔಷಧ, ಅಂಟು-ರಾಳ ಮುಂತಾದವುಗಳನ್ನು ಕೊಡುವ ಅಕ್ಷಯ ಪಾತ್ರೆ ಇದ್ದಂತೆ ಎಂದು ಪರಿಸರ ಅಧಿಕಾರಿ ಶೋಭಾ ಪೋಳ ಅಭಿಪ್ರಾಯಪಟ್ಟರು.

    ವಿಶ್ವ ಅರಣ್ಯ ದಿನ ಮತ್ತು ವಿಶ್ವ ಜನ ದಿನದ ಅಂಗವಾಗಿ ವಸುಂಧರಾ ಫೌಂಡೇಷನ್ ಮತ್ತು ವ್ಹಿ ಕೇರ್ ಫೌಂಡೇಷನ್ ವತಿಯಿಂದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಯೋಗದಲ್ಲಿ ನಗರದ ಲ್ಯಾಮಿಂಗ್ಟನ್ ಶಾಲೆ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಭಿವೃದ್ಧಿ ನೆಪ ಅಥವಾ ಅತಿಯಾದ ದುರಾಸೆಯಿಂದ ಅರಣ್ಯಗಳು ನಾಶವಾಗುತ್ತಿವೆ. ಇದರಿಂದಾಗಿ ಮಳೆಯ ಅಸಮತೋಲನ ಉಂಟಾಗಿದೆ. ಹಾಗಾಗಿ, ಮಾನವನ ಜೀವನಾಡಿಯಾದ ಅರಣ್ಯವನ್ನು ಕಾಪಾಡುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದರು.

    ವ್ಹಿ ಕೇರ್ ಫೌಂಡೇಷನ್ ಅಧ್ಯಕ್ಷ ಗಂಗಾಧರ ಗುಜಮಾಡಿ ಅವರು ಜಲ ಸಂರಕ್ಷಣೆ ಬಗ್ಗೆ ಮಾತನಾಡಿದರು.

    ಇದಕ್ಕೂ ಮುನ್ನ ಲ್ಯಾಮಿಂಗ್ಟನ್ ಶಾಲೆ ಆವರಣದಲ್ಲಿ ಸೈಕಲ್ ಜಾಥಾಕ್ಕೆ ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ ಹಾಗೂ ಉದ್ಯಮಿ ವಿ.ಎಸ್.ವಿ. ಪ್ರಸಾದ ಚಾಲನೆ ನೀಡಿದರು. ಅಂಬೇಡ್ಕರ್ ವೃತ್ತ, ಚನ್ನಮ್ಮ ವೃತ್ತ, ಹೊಸೂರು, ಅಕ್ಷಯ ಪಾರ್ಕ್ ಮಾರ್ಗವಾಗಿ ತೆರಳಿ ವಾಪಸ್ ಲ್ಯಾಮಿಂಗ್ಟನ್ ಶಾಲೆಯಲ್ಲಿ ಜಾಥಾ ಅಂತ್ಯಗೊಂಡಿತು.

    ಪರಿಸರವಾದಿ ಲಿಂಗರಾಜ ನಿಡವಣಿ, ಉದ್ಯಮಿ ಸಂತೋಷ ಆರ್. ಶೆಟ್ಟಿ, ಶ್ರೀನಿವಾಸ ಏಕಬೋಟೆ, ಬಾಬುರಾವ ಘಂಟಸಾಲಿ, ರಮೇಶ ಮಹದೇವಪ್ಪನವರ, ಬಸವರಾಜ ಅಮ್ಮಿನಬಾವಿ, ಮಂಜುನಾಥ ಉದ್ದಿ, ಪ್ರಕಾಶ ಉಗರಗೋಳ, ಮೂರುಸಾವಿರಪ್ಪ ಮೆಣಸಿನಕಾಯಿ, ರವಿ ಶೆರೆವಾಡ, ಕಿರಣ ಕಗಲಗೊಂಬ, ಇಂದಿರಾ ಚವ್ಹಾಣ, ರೂಪಾ ಉಗರಗೋಳ, ವಿಜಯ ಮಿಸ್ಕಿನ್, ವಿನಾಯಕ ನಾಯ್ಕರ, ಮತ್ತಿತರರು ಉಪಸ್ಥಿತರಿದ್ದರು. ವಸುಂಧರಾ ಫೌಂಡೇಷನ್ ಅಧ್ಯಕ್ಷ ಮೇಘರಾಜ ಕೆರೂರ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts