More

    ಕಾಡಾನೆ ದಾಳಿಗೆ ಭತ್ತದ ಬೆಳೆ ಹಾನಿ

    ಯಲ್ಲಾಪುರ: ತಾಲೂಕಿನ ಮದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾದೇವಕೊಪ್ಪದಲ್ಲಿ ಕಳೆದ 15 ದಿನಗಳಿಂದ ನಿರಂತರವಾಗಿ ಕಾಡಾನೆಗಳ ಹಾವಳಿ ಮುಂದುವರಿದಿದೆ. ಇದರಿಂದಾಗಿ ರೈತರ ಬೆಳೆಗಳು ಆನೆಗಳ ತುಳಿತಕ್ಕೆ ನಾಶವಾಗುತ್ತಿವೆ.

    ಮಾದೇವಕೊಪ್ಪದ ವಿಠ್ಠು ಬಾಗು ಕೊಕ್ರೆ, ನಾಗು ಬಿಚುಕ್ಲೆ, ರಾಮು ಬಿಚುಕ್ಲೆ, ಕಾಳು ಜಾನು ಪಾಟೀಲ, ನಾರಾಯಣ ಗಾಂವ್ಕರ್ ಮುಂತಾದ ರೈತರು ಅಂದಾಜು 25ರಿಂದ 30 ಎಕರೆಯಲ್ಲಿ ಬೆಳೆದ ಭತ್ತದ ಬೆಳೆ ನಾಶವಾಗಿದೆ.

    ವಲಯ ಅರಣ್ಯಾಧಿಕಾರಿ ನದಾಫ್, ವಿನಯಕುಮಾರ್ ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಮಾತನಾಡಿದ ನದಾಫ್, ಈ ಭಾಗದ ಹೆಚ್ಚಿನ ರೈತರು ಅರಣ್ಯ ಭೂಮಿ ಅತಿಕ್ರಮಿಸಿ ಕೃಷಿ ಮಾಡುತ್ತಿದ್ದಾರೆ. ಹಾಗಾಗಿ ಇಲಾಖೆಯಿಂದ ಪರಿಹಾರ ಕೊಡಲು ಕಾನೂನಿನ ತೊಡಕಿದೆ ಎಂದರು.

    ವನವಾಸಿ ಕಲ್ಯಾಣದ ರಾಜ್ಯ ಹಿತರಕ್ಷಾ ಪ್ರಮುಖ ದೊಂಡು ಪಾಟೀಲ, ನಾವು ಸಾಗುವಳಿ ಮಾಡುತ್ತಿರುವ ಭೂಮಿಯ ಕುರಿತು ಅರಣ್ಯ ಹಕ್ಕು ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದು, ಅವು ಪರಿಶೀಲನೆ ಹಂತದಲ್ಲಿರುವುದರಿಂದ ಸರ್ಕಾರ ನಮಗೆ ವಿಶೇಷ ಪರಿಹಾರ ಘೊಷಿಸಬೇಕು. ಮಾನವೀಯ ನೆಲೆಯಲ್ಲಿ ನ್ಯಾಯ ಒದಗಿಸಿಕೊಡಬೇಕೆಂದು ಅಧಿಕಾರಿಗಳನ್ನು ಆಗ್ರಹಿಸಿದರು.

    ಗದ್ದೆಗೆ ನುಗ್ಗಿ ನಾಟಿ ನಾಶಪಡಿಸಿದ ಕಾಡೆಮ್ಮೆ

    ಸಿದ್ದಾಪುರ: ತಾಲೂಕಿನ ಬಿದ್ರಕಾನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಪ್ಪಡಿಕೆಯಲ್ಲಿ ಕೆಲವು ದಿನಗಳಿಂದ ನಾಟಿ ಮಾಡಿರುವ ಭತ್ತದ ಗದ್ದೆಗಳಿಗೆ ಕಾಡೆಮ್ಮೆಗಳು ದಾಳಿ ನಡೆಸಿ ಬೆಳೆ ನಾಶಪಡಿಸುತ್ತಿವೆ. ಅವುಗಳನ್ನು ಓಡಿಸಲಿಕ್ಕಾಗದೇ ಭತ್ತ ಬೆಳೆಗಾರರು ಚಿಂತಾಕ್ರಾಂತರಾಗಿದ್ದಾರೆ.

    ಉಪ್ಪಡಿಕೆಯ ಚಿಕ್ಕ ಹಿಡುವಳಿ ದಾರರಾದ ಶ್ರೀಕಾಂತ ಹೆಗಡೆ, ಸತ್ಯ ನಾರಾ ಯಣ ಹೆಗಡೆ, ಶ್ರೀಪಾದ ಹೆಗಡೆ, ದಿನೇಶ ನಾಯ್ಕ ನಾಟಿ ಮಾಡಿರುವ ಸುಮಾರು ಐದು ಎಕರೆ ಭತ್ತದ ಗದ್ದೆಗೆ ನಿತ್ಯ ಕಾಡೆಮ್ಮೆಗಳು ನುಗ್ಗಿ ಬೆಳೆ ನಾಶ ಮಾಡುತ್ತಿದೆ. ಈ ವರ್ಷ ಭತ್ತದ ಬೆಳೆ ಬೆಳೆಯುವುದಕ್ಕಾಗಿ ಮಾಡಿದ ಶ್ರಮಗಳೆಲ್ಲ ನೀರಿನಲ್ಲಿ ಕೊಚ್ಚಿಹೋದಂತಾಗಿದೆ. ಇನ್ನುಳಿದಿರುವ ಅಲ್ಪ-ಸ್ವಲ್ಪ ಬೆಳೆ ರಕ್ಷಿಸಿಕೊಳ್ಳುವುದು ಹೇಗೆಂಬ ಚಿಂತೆ ರೈತರನ್ನು ಕಾಡುತ್ತಿದೆ.

    ಶಾಶ್ವತ ಪರಿಹಾರಕ್ಕೆ ಆಗ್ರಹ

    ಭತ್ತದ ಗದ್ದೆಗೆ ದಾಳಿ ನಡೆಸುವ ಕಾಡುಪ್ರಾಣಿಗಳನ್ನು ಅರಣ್ಯ ಇಲಾಖೆಯವರು ನಿಯಂತ್ರಿಸಬೇಕು. ಇಲ್ಲದಿದ್ದರೆ ಅವುಗಳನ್ನು ಈ ಭಾಗದಿಂದ ಬೇರೆ ಕಡೆಗೆ ಓಡಿಸಬೇಕು. ಇಲಾಖೆಯವರು ಸ್ಥಳಕ್ಕೆ ಬಂದು ಪರಿಶೀಲಿಸಿ ಬೆಳೆ ಹಾನಿ ಮಾಡಿದ್ದಕ್ಕೆ ಶಾಶ್ವತ ಪರಿಹಾರ ನೀಡಬೇಕು ಎಂದು ಬೆಳೆಗಾರರು ಆಗ್ರಹಿಸಿದ್ದಾರೆ.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts