More

    ಕಾಡಾನೆ ದಾಳಿಗೆ ಬಾಳೆ, ಅಡಕೆ ಬೆಳೆ ಹಾಳು

    ಮುಂಡಗೋಡ: ತಾಲೂಕಿನ ಅರಶಿಣಗೇರಿ ಗ್ರಾಮದ ಅರಣ್ಯದಂಚಿನಲ್ಲಿರುವ ರೈತರ ತೋಟ ಮತ್ತು ಗದ್ದೆಗಳಿಗೆ ಕಾಡಾನೆಗಳು ಸೋಮವಾರ ರಾತ್ರಿ ನುಗ್ಗಿ ಬೆಳೆ ಹಾನಿ ಮಾಡಿವೆ. ಇಂದೂರ ಶಾಖೆಯ ವಡಗಟ್ಟಾ ಗ್ರಾಮದಲ್ಲಿ ಇದೇ ಮೊದಲ ಬಾರಿಗೆ ದಾಳಿ ನಡೆಸಿದ ಕಾಡಾನೆಗಳು ಬಸವರಾಜ ತಗಡಿನಮನಿ ಎಂಬ ರೈತನ ಅಂದಾಜು 500 ರಿಂದ 600 ಬಾಳೆ ಮತ್ತು ಅಡಕೆ ಗಿಡಗಳನ್ನು ನಾಶ ಮಾಡಿವೆ. ಪೀರಪ್ಪ ಲಮಾಣಿ ಎಂಬ ರೈತನ ಎರಡು ಎಕರೆ ಜಮೀನಿನಲ್ಲಿ ಬೆಳೆದ ಭತ್ತದ ಕಾಳಿನ ಬಣವೆಯನ್ನು ಧ್ವಂಸ ಮಾಡಿವೆ.

    ಪ್ರತಿ ವರ್ಷ ದಾಂಡೇಲಿ ಅರಣ್ಯದಿಂದ ಸವಾರಿ ಹೊರಟ ಕಾಡಾನೆಗಳ ಹಿಂಡು ತಾಲೂಕಿನ ಗುಂಜಾವತಿ, ಕಳಕಿಕಾರೆ, ಮೈನಳ್ಳಿ, ಉಗ್ಗಿನಕೇರಿ, ತಮ್ಯಾನಕೊಪ್ಪ, ತೇಗಿನಕೊಪ್ಪ, ಕೋಡಂಬಿ, ಬೆಡಸಗಾಂವ, ಕೂರ್ಲಿ, ಅಟಬೈಲ್, ಅಟ್ಟಣಗಿ, ಹನುಮಾಪುರ, ದೊಡ್ಡಹಾರವಳ್ಳಿ ಇತರ ಭಾಗಗಳಲ್ಲಿ ರೈತರ ಬೆಳೆ ಹಾನಿ ಮಾಡುತ್ತ ಬಂದಿವೆ. ಬಾಚಣಕಿ ಗ್ರಾಮ ಪಂಚಾಯಿತಿ ಭಾಗದಲ್ಲಿ ಪ್ರಥಮ ಬಾರಿ ಲಗ್ಗೆ ಇಟ್ಟಿರುವುದು ಈ ಭಾಗದ ರೈತರಲ್ಲಿ ಆತಂಕ ಮೂಡಿಸಿದೆ.

    ಕಾಡಾನೆಗಳ ಹಿಂಡು ಶಿಗ್ಗಾಂವಿ ತಾಲೂಕಿನ ಜೇಕಿನಕಟ್ಟಿ ಭಾಗದಿಂದ ಜೇನಮುರಿ ಅರಣ್ಯದ ಮೂಲಕ ಬಂದಿದೆ. ಕಾಡಾನೆಗಳನ್ನು ಅರಣ್ಯದತ್ತ ಓಡಿಸಲು ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾರೆ.
    | ಸುರೇಶ ಕುಳ್ಳೊಳ್ಳಿ ಆರ್​ಎಫ್​ಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts