More

     ಕಾಡಾನೆ ದಾಳಿಗೆ ಕಾಫಿ ತೋಟ ಧ್ವಂಸ

    ಮೂಡಿಗೆರೆ: ತಾಲೂಕಿನ ತಳವಾರ ಗ್ರಾಮದಲ್ಲಿ ಮಂಗಳವಾರ ಕಾಡಾನೆ ದಾಳಿ ನಡೆಸಿ ಅಪಾರ ಪ್ರಮಾಣದ ಬೆಳೆ ನಾಶಪಡಿಸಿದೆ. ಒಂಟಿ ಸಲಗ ಮನೆ ಸುತ್ತಮುತ್ತ ತಿರುಗಾಡಿ ಪಕ್ಕದ ಕಾಫಿ ತೋಟಕ್ಕೆ ನುಗ್ಗಿ ಕಾಫಿಗಿಡ, ಕಾಳುಮೆಣಸು, ಅಡಕೆ, ಬಾಳೆ ಗಿಡಗಳನ್ನು ಧ್ವಂಸಗೊಳಿಸಿದೆ. ಒಂದು ಗುಂಪಿನಲ್ಲಿ 3 ಕಾಡಾನೆ ಇದ್ದರೆ ಇನ್ನೊಂದು ಒಂಟಿಯಾಗಿ ತಿರುಗಾಡುತ್ತಾ ಉಪಟಳ ನೀಡುತ್ತಿದೆ. ಕುಂದೂರು, ತಳವಾರ, ದೊಡ್ಡಳ್ಳ, ತತ್ಕೊಳ ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ರಾತ್ರಿಯಾಗುತ್ತಿದ್ದಂತೆ ಅರಣ್ಯದಿಂದ ರಸ್ತೆ ಬದಿಗೆ ಬಂದು ನಿಲ್ಲುತ್ತವೆ ಕಾಡಾನೆ ಉಪಟಳದಿಂದ ರಸ್ತೆಯಲ್ಲಿ ತೆರಳುವವರು ಭಯಪಡುವಂತಾಗಿದೆ. ಕಾಡಾನೆ ದಾಳಿಯಿಂದ 40ಕ್ಕೂ ಅಧಿಕ ಕಾಫಿ ಗಿಡಗಳು ಹಾಳಾಗಿವೆ. ಕಾಳುಮೆಣಸಿನ ಬಳ್ಳಿಗಳನ್ನು ತುಳಿದು ನಾಶಪಡಿಸಿವೆ ಎಂದು ರೈತ ಅಶ್ವಥ್ ಆರೋಪಿಸಿದ್ದಾರೆ. ಹಿಂದೆ ಕಾಡಾನೆಗಳು ದಾಳಿ ನಡೆಸಿ ಕಾಫಿ ತೋಟ, ಭತ್ತದ ಗದ್ದೆಯನ್ನು ನಾಶಪಡಿಸಿದೆ. ಪರಿಹಾರಕ್ಕಾಗಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿ ವರ್ಷ ಕಳೆದರೂ ಪರಿಹಾರ ನೀಡಿಲ್ಲ. ಪದೇ ಪದೇ ಕಾಡಾನೆಗಳು ಬೆಳೆ ನಾಶಪಡಿಸುತ್ತಿರುವುದರಿಂದ ಕೃಷಿ ಚಟುವಟಿಕೆ ನಡೆಸುವುದು ಕಷ್ಟಕರವಾಗಿದೆ. ತೋಟ ಅಭಿವೃದ್ಧಿಪಡಿಸಿ ಬೆಳೆ ಕೈ ಸೇರಬೇಕು ಎನ್ನುವಷ್ಟರಲ್ಲಿ ಕಾಡಾನೆಗಳು ಬೆಳೆ ಧ್ವಂಸಗೊಳಿಸುತ್ತಿವೆ. ಕಾಡಾನೆಗಳನ್ನು ಸರ್ಕಾರ ಹಿಡಿದು ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts