More

    ಕಾಟಯ್ಯನ ಕೆರೆ ಒತ್ತುವರಿ ತೆರವಿಗೆ ಒತ್ತಾಯಿಸಿ ಪ್ರತಿಭಟನೆ

    ಚಿತ್ರದುರ್ಗ: ಹೊಳಲ್ಕೆರೆ ತಾಲೂಕು ಅಪ್ಪರಸನಹಳ್ಳಿ ಕಾಟಯ್ಯನ ಕೆರೆ ಒತ್ತುವರಿ ತೆರವಿಗೆ ಆಗ್ರಹಿಸಿ ಗ್ರಾಮಸ್ಥರು ಬುಧವಾರ ಡಿಸಿ ಕಚೇರಿ ಬಳಿ ಪ್ರತಿಭ ಟಿಸಿದರು.
    ಈ ಕೆರೆಯಿಂದ 12 ಹಳ್ಳಿಗಳ ರೈತರಿಗೆ ಅನುಕೂಲವಾಗಿದ್ದು, ಸಾದರಹಳ್ಳಿ ರಿ.ಸ.ನಂ.43ರ 25 ಎಕರೆ 19 ಗುಂಟೆ,ಅರಸನಘಟ್ಟ ರಿ.ಸ.ನಂ.129ರ 51 ಎಕರೆ 39 ಗುಂಟೆ, ಮಾಕುಂಟೆ ರಿ. ಸ.ನಂ.22ರಲ್ಲಿ 11 ಎಕರೆ 13 ಕೆರೆ ಅಂಗಳದ ಜಾಗವನ್ನು ಸರ್ವೆ ನಡೆಸಿ,ಕೂಡಲೇ ಒ ತ್ತುವರಿ ತೆರವುಗೊಳಿಸಬೇಕು ಹಾಗೂ ಕೆರೆ ಸುತ್ತ ಏರಿ ನಿರ್ಮಿಸಿ ಕೊಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು ಅವರಿಗೆ ಮನವಿ ಸಲ್ಲಿಸಿದರು.
    ಕೆರೆ ಒತ್ತುವರಿ ತೆರವಿಗೆ ಆಗ್ರಹಿಸಿ ತಾಲೂಕು ಕಚೇರಿ,ಕೆರೆ ಪ್ರಾಧಿಕಾರ, ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ಮಾಡಿದ್ದರು ಕ್ರಮ ತೆಗೆದು ಕೊಂಡಿಲ್ಲ.ಎಂಟು ದಿನದೊಳಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದರು. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ,ಸಾರ್ವಜನಿಕರ ಸ್ವತ್ತಾಗಿರುವ ಕೆರೆಗಳ ಒತ್ತುವರಿ ತಪ್ಪು. ಕೆರೆಗಳ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಜ ವಾಬ್ದಾರಿಯಾಗಿದೆ. ಕೆರೆಗಳ ಅಳತೆಗೂ ಸೂಚಿಸಲಾಗಿದೆ. ಆದ್ಯತೆ ಮೇರೆಗೆ ಕಾಟಯ್ಯನ ಕೆರೆ ಸರ್ವೆ ಮಾಡಿಸಿ ಒತ್ತುವರಿ ತೆರವುಗೊಳಿಸಲಾ ಗುವುದೆಂದು ಭರವಸೆ ನೀಡಿದರು.
    ಶ್ರೀ ಅಮೃತ ಲಿಂಗೇಶ್ವರ ಕೆರೆ ಬಳಕೆದಾರರ ಸಂಘದ ಅಧ್ಯಕ್ಷ ಜಿ.ಎಸ್.ಶಶಿಧರ್,ಗ್ರಾಪಂ ಸದಸ್ಯ ಜಿ.ಪರಮೇಶ್ವರಪ್ಪ, ರೈತ ಮುಖಂಡ ಬಸವರಾಜಪ್ಪ, ಸಿ.ಎಂ.ಮಹೇಶ್ವರಪ್ಪ, ನಾಗರಾಜ,ದಯಾನಂದ್,ಜಗದೀಶ್,ತಿಪ್ಪಯ್ಯ,ಬಸವಂತಪ್ಪ, ಲಿಂಗರಾಜು, ಜಿ.ಮಂಜುನಾಥ್, ಸಿ ದ್ದಯ್ಯ,ಯಶೋಧರ, ಸಂಗಯ್ಯ,ಶಿವರುದ್ರಯ್ಯ,ಕೆ.ಎಂ.ವಿರೇಶ್,ಪ್ರಕಾಶ್,ವೀರಯ್ಯ,ವೇದಮೂರ್ತಿ, ಮಹಾರುದ್ರಪ್ಪ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts