More

    ಕಾಂಗ್ರೆಸ್ ಹಿಂದುತ್ವ ವಿರೋಧಿ ಪಕ್ಷ-ಫಡ್ನ್‌ವಿಸ್ ಆರೋಪ

    ಚಿಕ್ಕೋಡಿ: ಹಿಂದುತ್ವ ಅಶ್ಲೀಲ ಪದ ಎಂದು ಹೇಳುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ತಲೆಯಲ್ಲಿ ಗಲೀಜು ತುಂಬಿದೆ ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಆರೋಪಿಸಿದ್ದಾರೆ.
    ನಿಪ್ಪಾಣಿ ನಗರದ ಮುನಿಸಿಪಲ್ ಹೈಸ್ಕೂಲ್ ಮೈದಾನದಲ್ಲಿ ನಿಪ್ಪಾಣಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಚಿವೆ ಶಶಿಕಲಾ ಜೊಲ್ಲೆ ಪರವಾಗಿ ಹಮ್ಮಿಕೊಳ್ಳಲಾಗಿದ್ದ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
    ಹಿಂದುತ್ವದ ವಿರುದ್ಧ ಹಾಗೂ ಹಿಂದು ವಿರೋಧಿ ನೀತಿ ಹೊಂದಿರುವ ಕಾಂಗ್ರೆಸ್ ಪಕ್ಷವನ್ನು ಯಾವುದೇ ಕಾರಣಕ್ಕೂ ಬೆಂಬಲಿಸಬಾರದು ಎಂದು ಮನವಿ ಮಾಡಿದ್ದಾರೆ. ಮೇ.10 ನಡೆಯಲಿರುವ ಚುನಾವಣೆ ಸಂದರ್ಭದಲ್ಲಿ ಕಮಲದ ಚಿಹ್ನೆಗೆ ಮತ ನೀಡುವ ಮೂಲಕ ಬಜರಂಗದಳ ನಿಷೇಧಿಸಲು ಹೊರಟಿರುವ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಬೇಕು ಎಂದು ಮನವಿ ಮಾಡಿದ್ದಾರೆ.
    ಕಳೆದ 9 ವರ್ಷಗಳಿಂದ ಭಾರತ ದೇಶವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಮೋದಿ ಅವರ ಕೈಯಲ್ಲಿ ದೇಶದ ಆಡಳಿತವನ್ನು ತಾವು ಕೊಟ್ಟಿದ್ದೀರಿ. ಹೀಗಾಗಿ ಅವರು ಪ್ರಧಾನ ಸೇವಕರಾಗಿ ನವ ಭಾರತ ನಿರ್ಮಾಣ ಮಾಡುತ್ತಿದ್ದಾರೆ.ದೇಶದಲ್ಲಿ ಮೋದಿ ಅವರಿಗೆ ಪರ್ಯಾಯ ಇಲ್ಲ. ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಸರ್ಕಾರಕ್ಕೆ ಪರ್ಯಾಯ ಇಲ್ಲ. ಜತೆಗೆ ನಿಪ್ಪಾಣಿಯಲ್ಲಿ ಸಚಿವೆ ಜೊಲ್ಲೆ ಅವರಿಗೆ ಪರ್ಯಾಯ ಇಲ್ಲ ಫಡ್ನವೀಸ್ ಹೇಳಿದ್ದಾರೆ.
    ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ವರ್ಷಕ್ಕೆ ಉಚಿತವಾಗಿ 3 ಸಿಲಿಂಡರ್‌ಗಳನ್ನು ಉಚಿತವಾಗಿ ನೀಡಲು ಮುಂದಾಗಿದೆ. ನಿಪ್ಪಾಣಿ ಕ್ಷೇತ್ರದಲ್ಲಿ ಸಚಿವೆ ಜೊಲ್ಲೆ 2 ಸಾವಿರ ಕೋಟಿ ರೂ. ಅನುದಾನ ತಂದು ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಹೀಗಾಗಿ ಹಾರಾಷ್ಟ್ರದಲ್ಲಿಯೇ ಅಸ್ಥಿತ್ವ ಕಳೆದುಕೊಳ್ಳುತ್ತಿರುವ ಎನ್‌ಸಿ ಪಿ ಹಾಗೂ ಭೃಷ್ಟಾಚಾರದಿಂದ ಅಪಖ್ಯಾತಿಗೊಳಗಾಗಿರುವ ಕಾಂಗ್ರೇಸ್ ಪಕ್ಷದ ಆಟ ನಡೆಯೋದಿಲ್ಲ ಎಂಬುವುದನ್ನು ಈ ಚುನಾವಣೆಯಲ್ಲಿ ಸಾಬೀತು ಪಡಿಸುವಂತೆ ಮತದಾರರಿಗೆ ಫಡ್ನವೀಸ್ ಎಂದರು.
    ನಿಪ್ಪಾಣಿ ಬಿಜೆಪಿ ಅಭ್ಯರ್ಥಿ, ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಕ್ಷೇತ್ರದಲ್ಲಿ ತಾನು ಸಾಕಷ್ಟು ಕೆಲಸ ಮಾಡಿದ್ದು, ಇನ್ನಷ್ಟು ಅಭಿವೃದ್ಧಿ ಮಾಡಲು ತನ್ನನ್ನು ಈ ಚುನಾವಣೆಯಲ್ಲಿ ಗೆಲ್ಲಿಸುವಂತೆ ವಿನಂತಿಸಿಕೊಂಡರು. ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ರಾಜ್ಯಸಭಾ ಸದಸ್ಯ ಧನಂಜಯ ಮಾಡಿಕ ಮುಂತಾದವರು ಮಾತನಾಡಿದರು.
    ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಜಯವಂತ ಬಾಟಲೆ, ಪ್ರಣವ ಮಾನವಿ, ಸಂಜಯ ಪಾಟೀಲ, ಅಜಿತ ಘೋಪಚಾಡೆ,ಚಂದ್ರಕಾಂತ ಕೋಟಿವಾಲೆ, ವೃಷಭ ಜೈನ, ಬಸವಪ್ರಸಾದ ಜೊಲ್ಲೆ, ಜ್ಯೋತಿಪ್ರಸಾದ ಜೊಲ್ಲೆ ಮುಂತಾದವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts