More

    ಕಾಂಗ್ರೆಸ್-ಸಿಪಿಐನದು ಸಮಾನ ನಿಲುವು -ಶಾಸಕ ಬಸವಂತಪ್ಪ ಹೇಳಿಕೆ 

    ದಾವಣಗೆರೆ: ಕಾಂಗ್ರೆಸ್ ಹಾಗೂ ಕಮ್ಯುನಿಸ್ಟ್ ಎರಡೂ ಜಾತ್ಯತೀತ ನಿಲುವು ಹೊಂದಿವೆ. ಉಭಯ ಪಕ್ಷಗಳ ತತ್ವ-ಸಿದ್ಧಾಂತಗಳು ಒಂದೇ ನಾಣ್ಯದ ಎರಡು ಮುಖಗಳು ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು.
    ಕಮ್ಯುನಿಸ್ಟ್ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
    ಕಮ್ಯುನಿಸ್ಟ್‌ನೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದು, ಪಂಪಾಪತಿ ಕಾಲದಿಂದಲೂ ಒಡನಾಟದಲ್ಲಿದ್ದೇನೆ. ಶಿಸ್ತಿಗೆ ಹೆಸರಾಗಿದ್ದ ಈ ಪಕ್ಷ ಶಕ್ತಿ-ಧ್ವನಿ ಇಲ್ಲದ ಜನರಿಗೆ ಬಲ ನೀಡುತ್ತಿತ್ತು. ಜನರ ಆಶೋತ್ತರಗಳಿಗೆ ಸ್ಪಂದಿಸಿದೆ ಎಂದು ಹೇಳಿದರು.
    ಬಡ ಕುಟುಂಬದಿಂದ ಬಂದ ನಾನು ಹೋರಾಟ ಮಾಡಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಶಾಸಕನಾಗಿ ಆಯ್ಕೆ ಆಗಿದ್ದೇನೆ. ಜನರ ಸಂಕಷ್ಟಗಳಿಗೆ ಸ್ಪಂದಿಸಿದರೆ ಜನರು ಕೈ ಹಿಡಿಯುತ್ತಾರೆ ಎಂದರು.
    ಕಟ್ಟಡ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಎಚ್.ಜಿ.ಉಮೇಶ್ ಮಾತನಾಡಿ, ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಕಾರ್ಮಿಕರ ವಂತಿಗೆಯಿಂದಲೇ 4500 ಕೋಟಿ ರೂ. ಸಂಗ್ರಹವಾಗಿದೆ. ಆದರೆ, ಮಂಡಳಿಯಲ್ಲಿ ಭ್ರಷ್ಟಾಚಾರ ನಡೆದಿದ್ದು ಕಾರ್ಮಿಕ ಸಚಿವರ ಗಮನಕ್ಕೆ ತರಲಾಗಿದೆ. ಕೃಷಿ, ಹಮಾಲರು ಸೇರಿ ಎಲ್ಲಾ ವರ್ಗದ ಅಸಂಘಟಿತ ಕಾರ್ಮಿಕರ ಸೌಲಭ್ಯಕ್ಕಾಗಿ ಸೂಕ್ತ ಕ್ರಮ ಸರ್ಕಾರ ಕೈಗೊಳ್ಳಬೇಕೆಂದು ಆಗ್ರಹಿಸಿದರು.
    ಸಿಪಿಐ ಖಜಾಂಚಿ ಆನಂದರಾಜ್ ಮಾತನಾಡಿ, ಕಾಂಗ್ರೆಸ್‌ನ ತತ್ವ ಸಿದ್ಧಾಂತಗಳೊಂದಿಗೆ ಹೊಂದಾಣಿಕೆ ಕಾರಣಕ್ಕೆ ಯಾವುದೇ ಚುನಾವಣೆಯಲ್ಲೂ ಕಮ್ಯುನಿಸ್ಟ್ ಬೆಂಬಲ ನೀಡುತ್ತ ಬಂದಿದೆ ಎಂದರು.
    ಪಕ್ಷದ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು, ಸಹ ಕಾರ್ಯದರ್ಶಿ ಆವರಗೆರೆ ವಾಸು, ಅಂಗನವಾಡಿ ಕಾರ್ಯಕರ್ತೆಯರು ಸಹಾಯಕಿಯರ ಫೆಡರೇಷನ್‌ನ ಜಿಲ್ಲಾಧ್ಯಕ್ಷೆ ಶಾರದಮ್ಮ, ಮಹಿಳಾ ಸಂಘಟಕಿ ಸರೋಜಮ್ಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts