More

    ಕಸಕದಾಸರಿಂದ ಸಾಮಾಜಿಕ ಕಾಂತ್ರಿ

    ಧರ್ಮಾಪುರ: ಕನಕದಾಸರು ದಾಸ ಸಾಹಿತ್ಯದ ಮೂಲಕ ಜಾತಿ, ಮತ, ಕುಲಗಳ ಭೇದಭಾವ ಮೀರಿಸುವಂತೆ ಸಮಾಜದ ಪಿಡುಗುಗಳ ಹಾಗೂ ಅಂಕುಡೊಂಕುಗಳ ಬಗ್ಗೆ ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ತಿಳಿಸಿ ಸಾಮಾಜಿಕ ಕ್ರಾಂತಿಯನ್ನೇ ಮಾಡಿದರು ಎಂದು ಜಿಪಂ ಮಾಜಿ ಸದಸ್ಯ ಕುನ್ನೇಗೌಡ ಬಣ್ಣಿಸಿದರು.

    ಧರ್ಮಾಪುರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನಕದಾಸರು ಕೀರ್ತನೆ ಮೂಲಕ ಮನುಕುಲದ ಉನ್ನತಿಗಾಗಿ ಶ್ರಮಿಸಿದ್ದಾರೆ ಎಂದರು.

    ಕೆ.ಆರ್.ನಗರ ಕಾಗಿನೆಲೆ ಶಾಖಾ ಮಠದ ಶ್ರೀ ಶಿವನಂದಪುರಿ ಸ್ವಾಮೀಜಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ವಕೀಲ ಡಿ.ಪಿ.ಮಹದೇವ್, ಗ್ರಾಪಂ ಅಧ್ಯಕ್ಷರಾದ ಪುನೀತಾ ಲೋಕೇಶ್, ಉಪಾಧ್ಯಕ್ಷೆ ತುಳಸಮ್ಮ, ಸದಸ್ಯರಾದ ಮಲ್ಲೇಶ್, ಮಹದೇವ್, ಕುಮಾರ, ಲತಾ ಬಸವಣ್ಣ, ಮಂಜು, ಮುಖಂಡರಾದ ಪುಟ್ಟಮಾದಯ್ಯ, ರಮೇಶ್, ಶೇಖರ್, ಮಹೇಶ್, ರವಿ, ಯಜಮಾನ ನಿಂಗೇಗೌಡ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts