More

    ಕಷ್ಟದ ಸಮಯದಲ್ಲಿ ಕಾಣೆಯಾದ ಸಂಸದ

    ಕಾರವಾರ: ಕಷ್ಟದ ಸಮಯದಲ್ಲಿ ಮುಂಚೂಣಿಯಲ್ಲಿ ನಿಂತು ಜನರಿಗೆ ನೆರವಾಗಬೇಕಿದ್ದ ಉತ್ತರ ಕನ್ನಡ ಸಂಸದ ಅನಂತ ಕುಮಾರ ಹೆಗಡೆ ಕಾಣೆಯಾಗಿದ್ದಾರೆ ಎಂದು ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ ಆರೋಪಿಸಿದರು.
    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದರು ಕೇಂದ್ರದ ಜತೆ ಮಾತನಾಡಿ, ಆಕ್ಸಿಜನ್, ಔಷಧ ದೊರೆಯುವಂತೆ ಮಾಡಬೇಕಿತ್ತು. ಆದರೆ, ಅವರು ಕರೊನಾವೇ ಇಲ್ಲ ಎಂದು ಹೇಳಿಕೆ ನೀಡಿದ ವಿಡಿಯೋ ನೋಡಿದ್ದೇವೆ ಎಂದು ಲೇವಡಿ ಮಾಡಿದರು.
    ಕೇಂದ್ರ, ರಾಜ್ಯ ಸರ್ಕಾರಗಳಿಗೆ ಮುಂದಾಲೋಚನೆ ಇಲ್ಲ. ತಜ್ಞರು ಮುನ್ನೆಚ್ಚರಿಕೆ ನೀಡಿದ ನಂತರವೂ ಎಚ್ಚೆತ್ತುಕೊಳ್ಳದ ಕಾರಣ ಕರೊನಾ ಎರಡನೇ ಅಲೆ ಇಷ್ಟು ಗಂಭೀರ ಹಾನಿ ಮಾಡಿದೆ. ಮೂರನೆ ಅಲೆ ಹರಡುತ್ತದೆ ಎಂದಿದ್ದರೂ ಯಾವುದೇ ತಯಾರಿ ನಡೆಸಿಲ್ಲ. ಇದೊಂದು ಟೆಲಿವಿಷನ್ ಸರ್ಕಾರವಾಗಿದೆ. ಕರೊನಾವನ್ನೂ ಒಂದು ಈವೆಂಟ್ ಎಂದು ಬಿಜೆಪಿ ತಿಳಿದಿದೆ.
    ರಾಜ್ಯದ ಕೆಲವು ಸಚಿವರು ಮೂರು ಮಾಸ್ಕ್ ಹಾಕಿ ಮನೆಯಲ್ಲಿ ಕುಳಿತಿದ್ದಾರೆ. ಇನ್ನು ಕೆಲವರು ಸಿಎಂ ಬದಲಾವಣೆ ಮಾಡಲು ದೆಹಲಿಗೆ ಓಡಾಟ ನಡೆಸಿದ್ದಾರೆ. ಮತ್ತಷ್ಟು ಜನ ಕಮೀಷನ್ ದಂಧೆಯಲ್ಲಿ ತೊಡಗಿದ್ದಾರೆ ಎಂದು ಟೀಕಿಸಿದರು.
    ಕಾಂಗ್ರೆಸ್ ರಾಜಕೀಯ ಬಿಟ್ಟು ಸೇವಾ ಕಾರ್ಯದಲ್ಲಿ ತೊಡಗಿದೆ. ಮುಂದೆ ಜನರಿಗೆ ವ್ಯಾಕ್ಸಿನ್ ಹಾಕಲು ನೋಂದಣಿ ಮಾಡಿಕೊಡುವ ಕಾರ್ಯ ಮಾಡಲಿದೆ ಎಂದರು.
    ಕರೊನಾದಿಂದ ಮೃತರ ಕುಟುಂಬಕ್ಕೆ ಸರ್ಕಾರ ಪರಿಹಾರ ಘೊಷಿಸಬೇಕು. ಉದ್ಯೋಗ ಕಳೆದುಕೊಂಡ ಯುವಕರಿಗೆ ಕನಿಷ್ಠ 6 ತಿಂಗಳು ತಲಾ 6 ಸಾವಿರ ರೂ. ಸ್ಟೈಫಂಡ್ ನೀಡಬೇಕು.
    ಕಾಂಗ್ರೆಸ್ ಮುಖಂಡರಾದ ಭೀಮಣ್ಣ ನಾಯ್ಕ, ದೇವದತ್ತ ಕಾಮತ್, ಬಸವರಾಜ್, ಸಂತೋಷ ಶೆಟ್ಟಿ, ಕುಮಾರ ಜೋಶಿ, ಶಂಭು ಶೆಟ್ಟಿ, ಸಮೀರ ನಾಯ್ಕ ಸುದ್ದಿಗೋಷ್ಠಿಯಲ್ಲಿದ್ದರು.
    25 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್: ಸುಪ್ರೀಂ ಕೋರ್ಟ್ ವಕೀಲ ದೇವದತ್ತ ಕಾಮತ್ ಮಾತನಾಡಿ, ಕಾಂಗ್ರೆಸ್ ಪಕ್ಷದಿಂದ ಪ್ರತಿ ತಾಲೂಕಿನಲ್ಲಿ ತಲಾ 25 ಹಾಸಿಗೆಗಳ ಉಚಿತ ಕೋವಿಡ್ ಕೇರ್ ಸೆಂಟರ್ ಮಾಡಲಾಗುವುದು ಎಂದರು.
    ಮಾಜಿ ಶಾಸಕ ಸತೀಶ ಸೈಲ್ ಮಾತನಾಡಿ, ಶ್ರೀನಿವಾಸ ಅವರು ಮಲ್ಲಾಪುರ, ಕೆರವಡಿ, ದೇವಳಮಕ್ಕಿ, ಬೈರೆ, ಕದ್ರಾ, ಮಲ್ಲಾಪುರ, ಗ್ರಾಮಗಳಿಗೆ ಭೇಟಿ ನೀಡಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಹೋಂ ಗಾರ್ಡ್ ಗಳಿಗೆ ಮಾಸ್ಕ್, ಸ್ಯಾನಿಟೈಸರ್, ಪಲ್ಸ್ ಆಕ್ಸಿಮೀಟರ್ ನೀಡಿದರು. ಗಿರಿಜಾಬಾಯಿ ಸೈಲ್ ಟ್ರಸ್ಟ್​ನಿಂದ ತಾಲೂಕಿನ ಎಲ್ಲ ಆಶಾ ಕಾರ್ಯಕರ್ತೆಯರಿಗೆ ತಲಾ 1 ಸಾವಿರ ರೂ. ಸಹಾಯಧನ ನೀಡಲಾಯಿತು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts