More

    ಕಳ್ಳರನ್ನು ಬೆನ್ನತ್ತಿ ಹಿಡಿದುಕೊಟ್ಟ ಜನತೆ !

    ಔರಾದ್: ಬಂಗಾರದ ಆಭರಣ ಕಿತ್ತುಕೊಂಡು ಪರಾರಿಯಾಗಲು ಯತ್ನಿಸಿದ ಕಳ್ಳರಿಗೆ ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಇಲ್ಲಿ ನಡೆದಿದೆ. ಮಂಗಳವಾರ ಸಂತಪುರ ಗ್ರಾಮದ ಲಕ್ಷ್ಮೀ ಮಂದಿರದ ಹತ್ತಿರ ಅಂಬಿಕಾ ಎನ್ನುವವರ 4 ತೊಲೆಯ ಗಂಟನ್ ಅನ್ನು ಬೈಕ್ ಮೇಲೆ ಬಂದ ಆಗಂತುಕನೊಬ್ಬ ಕಿತ್ತುಕೊಂಡು ವಡಗಾಂವ ಕಡೆಗೆ ಪರಾರಿಯಾಗಿದ್ದ. ಈ ವಿಷಯ ಅರಿತು ಎರಡ್ಮೂರು ಗ್ರಾಮಗಳ ಜನರ ಸತತ ಪ್ರಯತ್ನದಿಂದಾಗಿ ಇಡೀ ಕಳ್ಳರ ಗ್ಯಾಂಗ್ ಸಿಕ್ಕಿಬಿದ್ದಿದೆ.
    ಅಂಬಿಕಾ ಅವರ ಬಂಗಾರದ ಸರ ಕಿತ್ತೂಕೊಂಡು ಬೈಕ್ ಮೇಲೆ ಕಳ್ಳರು ಪರಾರಿಯಾಗುತ್ತಿದ್ದಾಗ ಅದೇ ವೇಳೆ ನಂದಿ ನಾಗೂರದಿಂದ ಸಂತಪುರಕ್ಕೆ ಬರುತ್ತಿದ್ದ ಯುವಕ ಸಂಗಮೇಶ ಕೆಂಚಾ ಅವರಿಗೆ ಮಹಿಳೆ ಮಾಹಿತಿ ನೀಡಿದ್ದಾರೆ. ವಿಷಯ ಅರಿತ ಯುವಕ ತಕ್ಷಣ ಜೋಜನಾ ಹಾಗೂ ನಂದಿನಾಗೂರ ಗ್ರಾಮದ ಜನರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ. ನಂದಿ ನಾಗೂರ ಹತ್ತಿರ ಕಳ್ಳರ ಗ್ಯಾಂಗ್ ಜನರಿಗೆ ಚಾಕು ತೋರಿಸಿ, ಬೈಕ್ ನಿಲ್ಲಿಸದೆ ಪರಾರಿಯಾಗಿದೆ. ಕೂಡಲೇ ಗ್ರಾಮಸ್ಥರು ವಡಗಾಂವ ಗ್ರಾಮದ ಯುವಕರಿಗೆ ಫೋನ್ ಮಾಡಿ ತಿಳಿಸಿದ್ದಾರೆ. ವಡಗಾಂವ ಗ್ರಾಮದ ವೀರಭಧ್ರೇಶ್ವರ ದೇವಾಲಯದ ಹತ್ತಿರ ರಸ್ತೆಯ ಮೇಲೆ ದೊಡ್ಡ ಕಟ್ಟಿಗೆಗಳನ್ನು ಹಾಕಿದ್ದಾಗ ಬೈಕ್ ಮೇಲಿದ್ದ ನಾಲ್ವರು ಕಳ್ಳರಿಗೆ ಸ್ಥಳೀಯರು ಹಿಡಿದಿದ್ದಾರೆ.
    ನಂತರ ಪೋಲಿಸರು ಬಂದು ಈ ನಾಲ್ವರಿಗೆ ಕರೆದುಕೊಂಡು ಹೋಗಿದ್ದಾರೆ. ಇವರಿಗೆ ವಿಚಾರಣೆ ನಡೆಸಿದಾಗ ಇನ್ನ್ನುಳಿದ ನಾಲ್ವರಿಗೂ ಬಂಧಿಸಲಾಗಿದೆ. ಇದು ಇರಾನಿ ಗ್ಯಾಂಗ್ ಆಗಿದ್ದು, ಇದರಲ್ಲಿ ನಾಲ್ವರು ಮಹಿಳೆಯರು ಮತ್ತು ನಾಲ್ವರು ಪುರುಷರಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
    ಬಂಧಿತರಿಂದ 1.20 ಲಕ್ಷ ರೂ. ಮೌಲ್ಯದ ಚಿನ್ನದ ಸರ, 2 ಲಕ್ಷ ರೂ. ಮೌಲ್ಯದ ಎರಡು ಬೈಕ್ಗಳನ್ನು ವಶಕ್ಕೆ ಪಡೆಯಲಾಗಿದೆ. ಜನರ ಸಹಕಾರದ ಮೇರೆಗೆ ನಡೆದ ಪೊಲೀಸರ ಕಾರ್ಯಕ್ಕೆ ಎಸ್ಪಿ ಡಿ.ಎಲ್. ನಾಗೇಶ ಪ್ರಶಂಸೆ ವ್ಯಕ್ತಪಡಿದ್ದಾರೆ. ಡಿವೈಎಸ್ಪಿ ಡಾ.ದೇವರಾಜ್, ಸಿಪಿಐ ಟಿ.ಆರ್. ರಾಘವೇಂದ್ರ, ಪಿಎಸ್ಐ ಪ್ರಭಾಕರ ಪಾಟೀಲ್, ಸುವರ್ಣ, ಸಿಬ್ಬಂದಿ ಸುನೀಲ್ ಕೋರೆ, ಜ್ಞಾನೇಶ್ವರ, ವೆಂಕಟ, ಮಲ್ಲಮ್ಮ, ರಾಜಕುಮಾರ ಪಾಂಚಾಳ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts