More

    ಕಳ್ಳತನ ತಡೆಗೆ ಪೊಲೀಸರು ಕ್ರಮ ಕೈಗೊಳ್ಳಲಿ

    ಬೆಳಗಾವಿ: ಸ್ಥಳೀಯ ಮಹಾಂತೇಶ ನಗರದಲ್ಲಿ ದಿನದಿಂದ ದಿನಕ್ಕೆ ಕಳ್ಳರ ಕಾಟ ಹೆಚ್ಚಾಗಿದ್ದು, ಮನೆಗಳ್ಳತನ ಹಾಗೂ ವಾಹನ ಕಳ್ಳತನ ಎಗ್ಗಿಲ್ಲದೆ ನಡೆದಿದೆ. ಪಾಲಿಕೆ ಹಾಗೂ ಪೊಲೀಸ್ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಜರುಗಿಸಿ ಕಳ್ಳತನ ತಡೆಗಟ್ಟಬೇಕು ಎಂದು ಚಂದ್ರಮತಿ ವೇರನೇಕರ ಮನವಿ ಮಾಡಿದರು.

    ಸಾಹಿತ್ಯ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾಂತೇಶ ನಗರದಲ್ಲಿ ದ್ವಿಚಕ್ರವಾಹನ, ಮನೆಗಳ್ಳತನ ಹಾಗೂ ಸರಗಳ್ಳತನ ವಿಪರೀತವಾಗಿ ನಡೆಯುತ್ತಿದ್ದು, ಈ ಬಗ್ಗೆ ಈಗಾಗಲೇ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ ಎಂದರು.

    ದಿನವೂ ಒಂದಿಲ್ಲೊಂದು ಕಳ್ಳತನ ನಡೆಯುತ್ತಿರುವುದರಿಂದ ನಿವಾಸಿಗಳು ರೋಸಿ ಹೋಗಿದ್ದು, ಪೊಲೀಸರಿಗೆ ಹಾಗೂ ಪಾಲಿಕೆ ಅವರಿಗೆ ಈ ಬಗ್ಗೆ ಮಾಹಿತಿ ನೀಡಿದರೂ, ಯಾವುದೇ ಪ್ರಯೋಜನವಾಗಿಲ್ಲ. ಪೊಲೀಸ್ ಸಿಬ್ಬಂದಿ ದಿನವೂ ಸಹಿ ಮಾಡುವ ಬೀಟ್ ಪುಸ್ತಕ ಇಟ್ಟಿರುವ ಮನೆಯಲ್ಲೂ ಕಳ್ಳತನವಾಗಿದೆ ಎಂದು ಮಾಹಿತಿ ನೀಡಿದರು.

    ಪ್ರೇಮ ಚೌಗಲಾ ಮಾತನಾಡಿ, ಕಳ್ಳತನ ತಡೆಗಟ್ಟುವ ನಿಟ್ಟಿನಲ್ಲಿ ನಿವಾಸಿಗಳೇ ಕಾರ್ಯಪ್ರವೃತ್ತರಾಗಿದ್ದು, ಸರತಿಯಂತೆ ಎಚ್ಚರವಿದ್ದು, ಕಾವಲು ಕಾಯಲು ತೀರ್ಮಾನಿಸಿದ್ದೇವೆ. ಅಲ್ಲದೆ, ಸಾಧ್ಯವಾದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಸಿಸಿ ಕ್ಯಾಮರಾ ಅಳವಡಿಸಿಕೊಳ್ಳುವುದು ಹಾಗೂ ಪೊಲೀಸ್ ಸಹಾಯವಾಣಿ ಬಳಕೆ ಮಾಡುವ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ ಎಂದರು. ಸುದ್ದಿಗೋಷ್ಠಿಯಲ್ಲಿ ಪಿ.ಆರ್.ಪಾಟೀಲ, ಹಲಗಪ್ಪ ಚಿಂಚನಕಟ್ಟಿ, ಎಸ್.ಎಸ್.ಮುತಗಿ, ಬಿ.ಎಂ.ಗೋಮಾಡಿ, ವಿನಯ ಮಾಳಗಿ ಹಾಗೂ ವಿ.ಕೆ.ಕುಲಕರ್ಣಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts