More

    ಕಳೆದಿದ್ದ 24.50 ಲಕ್ಷ ರೂ. ಮೌಲ್ಯದ 100 ಮೊಬೈಲ್ ಪತ್ತೆ

    ಕಲಬುರಗಿ: ನಗರದಲ್ಲಿ ಸಾರ್ವಜನಿಕರು ಕಳೆದುಕೊಂಡಿದ್ದ ಮೊಬೈಲ್‌ಗಳನ್ನು ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ ಹಚ್ಚಿದ್ದು, ೧೦೧ ಮೊಬೈಲ್‌ಗಳನ್ನು ಅವರ ವಾರಸುದಾರರಿಗೆ ಹಿಂದಿರುಗಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಆರ್.ಚೇತನ್ ಮಾಹಿತಿ ನೀಡಿದರು.
    ನಗರದ ಪೊಲೀಸ್ ಕಮೀಷನರ್ ಕಚೇರಿಯಲ್ಲಿ ಬುಧವಾರ ವಾರಸುದಾರರಿಗೆ ಮೊಬೈಲ್ ಹಸ್ತಾಂತರಿಸಿ ಮಾತನಾಡಿ, ೨೦೨೪ರ ಜನವರಿಯಿಂದ ಇದುವರೆಗೆ ನಗರದಲ್ಲಿ ೩೦೦ ಮೊಬೈಲ್ ಕಾಣೆಯಾದ ಬಗ್ಗೆ ದೂರುಗಳು ಬಂದಿದ್ದು, ೧೬೦ ಮೊಬೈಲ್‌ಗಳನ್ನು ಪತ್ತೆ ಹಚ್ಚಲಾಗಿದ್ದು, ೨೪.೫೦ ಲಕ್ಷ ರೂ. ಮೌಲ್ಯದ ೧೦೦ ಮೊಬೈಲ್ ಹಿಂದಿರುಗಿಸಲಾಗುತ್ತಿದೆ. ಮೊಬೈಲ್ ಕಳೆದುಕೊಂಡವರು ದೂರು ನೀಡಿದರೆ ಪತ್ತೆ ಹಚ್ಚಿಕೊಡಲಾಗುವುದು ಎಂದು ತಿಳಿಸಿದರು.
    ಸೆನ್ ಪೊಲೀಸ್ ಠಾಣೆ ಪಿಐ ನಾಸೀರ್ ಸನದಿ ನೇತೃತ್ವದ ತಂಡ ರಚಿಸಿ, ಸಿಬ್ಬಂದಿ ಶಿವರಾಜ, ಹೊನ್ನುರಸಾಬ್, ಅಮರನಾಥ, ಅಂಬ್ರೇಶ, ರವಿಚಂದ್ರ, ಅಪರಾಧ ವಿಭಾಗದ ರವಿಕುಮಾರ, ಗುರುನಾಥ, ಗೋಪಾಲ ಅವರ ಕಾರ್ಯಕ್ಷಮತೆಯಿಂದ ಆಂಧ್ರಪ್ರದೇಶ, ಮಹಾರಾಷ್ಟç, ತೆಲಂಗಾಣ ಹಾಗೂ ವಿವಿಧ ಜಿಲ್ಲೆಗಳಿಂದ ೨೪.೫೦ ಲಕ್ಷ ರೂ. ಬೆಲೆ ಬಾಳುವ ೧೦೧ ಮೊಬೈಲ್ ಪತ್ತೆ ಮಾಡಿ, ವಾರಸುದಾರರಿಗೆ ವಾಪಸ್ ನೀಡಲಾಗಿದೆ. ಈ ಕುರಿತು ಕೆಲವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.
    ಪತ್ರಿಕಾಗೋಷ್ಠಿ ಆರಂಭದಲ್ಲೇ ಚುನಾವಣೆ ನೀತಿ ಸಂಹಿತೆ ಇದ್ದು, ನಾನು ಹೆಚ್ಚಿನ ಪ್ರಶ್ನೆಗಳಿಗೆ ಉತ್ತರಿಸಲು ಆಗುವುದಿಲ್ಲ ಎಂದರು. ೨೦೨೩ ಜನವರಿ ೧ರಿಂದ ಮೇ ೧೫ರವರೆಗೆ ೧೦೧೩ ಅಪರಾಧ ಪ್ರಕರಣ ನಡೆದಿದ್ದು, ೨೦೨೪ ಜನವರಿ ೧ರವರೆಗೆ ೯೦೦ ಅಪರಾಧ ಪ್ರಕರಣ ನಡೆದಿವೆ ಎಂದರು.
    ಡಿಸಿಪಿ ಕನ್ನಿಕಾ ಸಿಕ್ರಿವಾಲ್, ಉಪ ಪೊಲೀಸ್ ಆಯುಕ್ತ ಪ್ರವೀಣ ನಾಯಕ್, ಸಹಾಯಕ ಪೊಲೀಸ್ ಆಯುಕ್ತ ಚಂದ್ರಶೇಖರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts