More

    ಕಲ್ಲಂಗಡಿಗೆ ಸಿಗದ ಸೂಕ್ತ ಬೆಲೆ

    ಕೊಡೇಕಲ್: ಸೂಕ್ತ ಬೆಲೆ ಸಿಗದ ಕಾರಣ ಕಲ್ಲಂಗಡಿ ಹಣ್ಣು ಬೆಳೆದಿರುವ ರೈತರೇ ಇದನ್ನು ಮಾರಾಟಕ್ಕೆ ಮುಂದಾಗಿದ್ದಾರೆ.

    ಇಸ್ಲಾಂಪುರ, ಮುದನೂರ, ಕಲ್ಲದೇವನಳ್ಳಿ, ಮಾರನಾಳ , ಮಾರುತಿ ತಾಂಡಾ, ದೇವರಗಡ್ಡಿ ಸೇರಿ ಇನ್ನಿತರ ಗ್ರಾಮಗಳಲ್ಲಿ 15 ಹೆಕ್ಟೇರ್ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆಯಲಾಗಿದೆ. ಆದರೆ, ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದಿರುವುದರಿಂದ ಬೆಳೆಗಾರರಿಗೆ ದಿಕ್ಕು ತೋಚದಂತಾಗಿದ್ದು, ಸ್ವತ ತಾವೇ ಟ್ರ್ಯಾಕ್ಟರ್ನಲ್ಲಿ ಹಾಕಿಕೊಂಡು ಮಾರಾಟ ಮಾಡುತ್ತಿದ್ದಾರೆ. ಮೂರ್ನಾಲ್ಕು ಕೆಜಿಯ ಒಂದು ಹಣ್ಣಿಗೆ 20 ರೂ. ಸಿಗುತ್ತಿದೆ.

    ಬೇಸಿಗೆ ಸಂದರ್ಭದಲ್ಲಿ ಕಲ್ಲಂಗಡಿಗೆ ಹೆಚ್ಚು ಬೆಲೆ ದೊರೆಯುತ್ತದೆ ಎಂದು ಬಹುತೇಕ ರೈತರು ಕಲ್ಲಂಗಡಿ ಬೆಳೆದಿದ್ದಾರೆ. ಆದರೆ, ಸ್ಥಳಿಯ ವ್ಯಾಪಾರಿಗಳು ಮಾತ್ರ ಬೇರೆ ಭಾಗಗಳಿಂದ ಕಲ್ಲಂಗಡಿ ಹಣ್ಣುಗಳು ಖರೀದಿಸುತ್ತಿರುವುದರಿಂದ ಇಲ್ಲಿನ ರೈತರು ಬೆಳೆದಿರುವ ಹಣ್ಣುಗಳಿಗೆ ಬೆಲೆ ಸಿಗದಂತಾಗಿದೆ.

    ತೋಟಗಾರಿಕೆ ಬೆಳೆ ಬೆಳೆಯುವ ವೇಳೆಯಲ್ಲಿ ರೈತರಿಗೆ ವಿವಿಧ ರೀತಿಯಲ್ಲಿ ಸಲಹೆ ನೀಡುವ ತೋಟಗಾರಿಕೆ ಅಧಿಕಾರಿಗಳು ಕಲ್ಲಂಗಡಿ ಹಣ್ಣಿಗೆ ಬೆಲೆ ಸಿಗದ ಸಂದರ್ಭದಲ್ಲಿ ಮಾತ್ರ ರೈತರ ನೆರವಿಗೆ ಬಾರದೆ ಇರುವುದು ವಿಪಯರ್ಾಸ. ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸದ ಕಾರಣ ರೈತರು ರಾಷ್ಟ್ರೀಯ ಹೆದ್ದಾರಿ, ಬಸ್ ನಿಲ್ದಾಣ ಸೇರಿ ಪ್ರಮುಖ ರಸ್ತೆಗಳಲ್ಲಿ ಟಂಟಂ ಇಲ್ಲವೆ ಟ್ರ್ಯಾಕ್ಟರ್ಗಳಲ್ಲಿ ಹಣ್ಣುಗಳನ್ನು ತಂದು ಮಾರಾಟ ಮಾಡುವ ಸ್ಥಿತಿ ನಿರ್ಮಾಣವಾಗಿದೆ.

    ಒಂದು ಎಕರೆ ತೋಟದಲ್ಲಿ ಕಲ್ಲಂಗಡಿ ಬೆಳೆಯಲು 8 ಸಾವಿರ ರೂ. ವೆಚ್ಚ ತಗಲುತ್ತದೆ. ಈ ವರ್ಷ ಒಳ್ಳೆಯ ಫಸಲು ಬಂದಿದೆ. ಆದರೂ ಬೆಲೆ ಇಲ್ಲದ ಕಾರಣ ಸಿಕ್ಕಷ್ಟು ಮಾರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ಹೇಳುತ್ತಾರೆ ರೈತರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts