More

    ಕಲ್ಯಾಣದ ಸೇವೆ ತೃಪ್ತಿ ತಂದಿದೆ

    ಬಸವಕಲ್ಯಾಣ: ಬಸವಣ್ಣನವರ ಕಾಯಕ ಭೂಮಿಯಲ್ಲಿ ಸಲ್ಲಿಸಿದ ಸೇವೆ ತೃಪ್ತಿ ತಂದಿದೆ. ಮೇಲಧಿಕಾರಿಗಳ ಮಾರ್ಗದರ್ಶನ, ಸಿಬ್ಬಂದಿ ಸಹಕಾರ, ಜನರು ತೋರಿದ ವಿಶ್ವಾಸ ಎಂದಿಗೂ ಮರೆಯಲಾಗದು ಎಂದು ನಿರ್ಗಮಿತ ತಹಸೀಲ್ದಾರ್ ಸಾವಿತ್ರಿ ಸಲಗರ ಹೇಳಿದರು.

    ವಗರ್ಾವಣೆ ಹಿನ್ನೆಲೆಯಲ್ಲಿ ಗುರುವಾರ ಸಂಜೆ ಬಿಕೆಡಿಬಿ ಸಂಭಾಗಣದಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಹಾಗೂ ನೂತನ ತಹಸೀಲ್ದಾರ್ ಶಾಂತಗೌಡ ಬಿರಾದಾರ್ ಸ್ವಾಗತ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದ ಅವರು, ಕಂದಾಯ ಇಲಾಖೆಗೆ ನಿತ್ಯ ಸಾಕಷ್ಟು ಜನ ಸಮಸ್ಯೆ ಹೊತ್ತು ಬರುತ್ತಾರೆ. ಸ್ಪಂದಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ಕರ್ತವ್ಯದಲ್ಲಿ ನಿಷ್ಠೆ ಇರಬೇಕು. ಬಡವರ ಕಣ್ಣೀರು ಒರೆಸುವಂಥ ಕೆಲಸ ಎಲ್ಲರಿಂದಲೂ ನಡೆಯಬೇಕು ಎಂದರು.

    ಸಹಾಯಕ ಆಯುಕ್ತ ರಮೇಶ ಕೋಲಾರ ಮಾತನಾಡಿ, ಸಲಗರ ಕಾರ್ಯವೈಖರಿಯನ್ನು ಕೊಂಡಾಡಿದರು. ನೂತನ ತಹಸೀಲ್ದಾರ್ ಶಾಂತಗೌಡ ಬಿರಾದಾರ್ ಸನ್ಮಾನ ಸ್ವೀಕರಿಸಿ ಮಾತನಾಡಿ, ಕಲ್ಯಾಣದಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ್ದು ಖುಷಿ ತಂದಿದೆ. ಈ ಹಿಂದೆ ಸಾವಿತ್ರಿ ಸಲಗರ ಅವರಿಗೆ ನೀಡಿದ ಸಹಕಾರ ನನಗೂ ನೀಡುವಿರಿ ಎಂಬ ವಿಶ್ವಾಸವಿದೆ ಎಂದರು.

    ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ರಾಜಕುಮಾರ ಬಿರಾದಾರ್ ಸಿರಗಾಪುರ, ಹುಲಸೂರು ತಹಸೀಲ್ದಾರ್ ಶಿವಾನಂದ ಮೇತ್ರೆ, ತಾಪಂ ಇಒ ಕಿರಣ ಪಾಟೀಲ್, ಬಿಕೆಡಿಬಿ ತಹಸೀಲ್ದಾರ್ ಮೋಸಿನ್, ಬಿಇಒ ಸಿ.ಜಿ.ಹಳ್ಳದ ಮಾತನಾಡಿದರು. ಯರಬಾಗ ಗ್ರಾಮ ಲೆಕ್ಕಾಧಿಕಾರಿ ಶಿವರಾಜ ಪೂಜಾರಿ ಸ್ವಾಗತಿಸಿದರು. ಶರಣು ಪವಾಡಶೆಟ್ಟಿ ನಿರೂಪಣೆ ಮಾಡಿದರು.

    ಸನ್ಮಾನ: ಇಲ್ಲಿಂದ ಕಲಬುರಗಿ ಮಹಾನಗರ ಪಾಲಿಕೆ ಎಸ್ಟೇಟ್ ಅಧಿಕಾರಿ ಹುದ್ದೆಗೆ ವಗರ್ಾವಣೆಗೊಂಡಿರುವ ಸಾವಿತ್ರಿ ಸಲಗರ ಹಾಗೂ ನೂತನ ತಹಸೀಲ್ದಾರ್ ಶಾಂತಗೌಡ ಬಿರಾದಾರ್ ಅವರನ್ನು ಅಧಿಕಾರಿಗಳು, ವಿವಿಧ ಸಂಘ-ಸಂಸ್ಥೆ ಪ್ರಮುಖರು, ಗಣ್ಯರು, ಸಾರ್ವಜನಿಕರು ಸನ್ಮಾನಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts