More

    ಕಲೆ ಎಲ್ಲರಿಗೂ ಸುಲಭವಾಗಿ ಕರಗತವಾಗದು

    ಹೊನ್ನಾವರ: ಕಲೆ ಎಲ್ಲರಿಗೂ ಸುಲಭದಲ್ಲಿ ಕರಗತ ಆಗುವುದಿಲ್ಲ. ವ್ಯಕ್ತಿಗಿಂತ ಕಲೆ ಮುಖ್ಯವಾದುದು ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಡಾ. ಗಿರೀಶ್ಚಂದ್ರ ಹೇಳಿದರು.

    ಹಡಿನಬಾಳದ ಶ್ರೀ ವಿಷ್ಣುಮೂರ್ತಿ ದೇವಾಲಯದ ಆವಾರದಲ್ಲಿ ಹಡಿನಬಾಳದ ರಾಗಶ್ರೀ ಸಂಗೀತ ಮತ್ತು ಸಾಂಸ್ಕೃತಿಕ ಸಂಸ್ಥೆ ಹಾಗೂ ದೆಹಲಿಯ ಸಂಗೀತ ನಾಟಕ ಅಕಾಡೆಮಿ ಆಯೋಜಿಸಿದ್ದ ರಾಗಶ್ರೀ ರಾಷ್ಟ್ರೀಯ ಸಂಗೀತೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ಕಲೆಗೆ ಪ್ರೋತ್ಸಾಹ ದೊರೆಯಬೇಕು. ರಾಗಶ್ರೀ ಗ್ರಾಮೀಣ ಭಾಗದಲ್ಲಿ ಎಲ್ಲ ಕಲೆಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ’ ಎಂದರು.

    ವಿಶ್ರಾಂತ ಕುಲಪತಿ ಪೊ›. ಮಲ್ಲೇಪುರಂ ಜಿ. ವೆಂಕಟೇಶ ಮಾತನಾಡಿ, ರಾಷ್ಟ್ರೀಯ ಏಕತೆಗೆ ಕಲೆ ಮಾಧ್ಯವಾಗಿದೆ. ಸಂಗೀತದಿಂದ ಶಾಂತಿ ಸಿಗುತ್ತದೆ ಎಂದರು. ಪಂ. ಜಿ.ಆರ್. ಭಟ್ ಬಾಳೇಗದ್ದೆ ಹೆಸರಿನಲ್ಲಿ ನೀಡುವ ರಾಗಶ್ರೀ ರಾಷ್ಟ್ರೀಯ ಪ್ರಶಸ್ತಿಯನ್ನು ವಿದುಷಿ ಭಾರತಿ ಪ್ರತಾಪ್ ಅವರಿಗೆ ಪ್ರದಾನ ಮಾಡಲಾಯಿತು. ಎಸ್​ಆರ್​ಎಲ್ ಸಮೂಹ ಸಂಸ್ಥೆ ಮಾಲೀಕ ವೆಂಕಟ್ರಮಣ ಹೆಗಡೆ, ಪಂ. ಕೃಷ ಅವಧಾನಿ ರ್ಕ, ಪಂ. ಎಸ್.ಎಂ.ಭಟ್ಟ ಕಟ್ಟಿಗೆ, ಡಾ. ಟಿ.ವಿ.ಭಟ್ಟ ಕವಲಕ್ಕಿ, ವೇ. ಮೂರ್ತಿ ರಾಮ ಭಟ್ಟ ಹಡಿನಬಾಳ ಅವರನ್ನು ಸನ್ಮಾನಿಸಲಾಯಿತು. ಎಸ್​ಎಸ್​ಎಲ್​ಸಿಯಲ್ಲಿ 625 ಅಂಕ ಪಡೆದ ನಾಗಾಂಜಲಿ ನಾಯ್ಕ, ಯುವ ವಿಜ್ಞಾನಿ ಸದಾನಂದ ಹೆಗಡೆ, ವಿನಾಯಕ ಭಟ್ಟ ಹರಡಸೆ ಅವರನ್ನು ಪುಸ್ಕರಿಸಲಾಯಿತು. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ವೇ.ಮೂ. ಶಿವರಾಮ ಭಟ್ಟ ಅಲೇಖ, ಯಕ್ಷಗಾನ ಕಲಾವಿದ ಶಿವಾನಂದ ಹೆಗಡೆ ಕೆರೆಮನೆ, ಸಂಗೀತ ಕಲಾವಿದ ಡಾ. ಅಶೋಕ ಹುಗ್ಗಣ್ಣವರ, ಎಸ್. ಶಂಭು ಭಟ್ಟ ಕಡತೋಕ ಇದ್ದರು. ಶ್ರೀಧರ ಬಳಗಾರ, ರಾಗಶ್ರೀ ಅಧ್ಯಕ್ಷ ವಿದ್ವಾನ್ ಶಿವಾನಂದ ಭಟ್ಟ ಮಾತನಾಡಿದರು. ಎನ್.ಜಿ. ಹೆಗಡೆ ಕಪ್ಪೆಕೇರಿ ವಂದಿಸಿದರು. ಭಾರತಿ ಪ್ರತಾಪ್ ಅವರಿಂದ ಸಂಗೀತ ಕಛೇರಿ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts