More

    ಕಲೆಯ ಬೀಡು ರಾಕ್ ಗಾರ್ಡನ್

    ಶಿಗ್ಗಾಂವಿ: ನಮಗೆ ಕಲೆ, ಸಂಸ್ಕೃತಿಯ ಪರಿಚಯ ಮಾಡಿಕೊಳ್ಳಬೇಕೆಂದರೆ ಒಮ್ಮೆ ಉತ್ಸವ ರಾಕ್ ಗಾರ್ಡನ್​ಗೆ ಭೇಟಿ ನೀಡಬೇಕು ಎಂದು ಬೆಂಗಳೂರು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಮಹ್ಮದ್ ನವಾಜ್ ಹೇಳಿದರು.

    ತಾಲೂಕಿನ ಗೊಟಗೋಡಿಯ ಉತ್ಸವ ರಾಕ್ ಗಾರ್ಡನ್​ಗೆ ಶನಿವಾರ ಭೇಟಿ ನೀಡಿ ಮಾತನಾಡಿದ ಅವರು, ‘ಗಾರ್ಡನ್ ಹೆಸರಿಗೆ ತಕ್ಕಂತೆ ಕಲೆ, ಸಂಸ್ಕೃತಿಯ ಬೀಡಾಗಿದೆ. ಉತ್ಸವ ರಾಕ್ ಗಾರ್ಡನ್​ನ ಪ್ರತಿಯೊಂದು ಗ್ಯಾಲರಿಗಳು ವಿಶಿಷ್ಟ ಸಂದೇಶ ನೀಡುತ್ತವೆ. ಮನುಷ್ಯ ಮತ್ತು ಪ್ರಾಣಿಗಳ ರೂಪದಲ್ಲಿರುವ ಶಿಲ್ಪಗಳು ನಮ್ಮ ಜತೆಗೆ ಮಾತನಾಡುತ್ತಿವೆ ಎಂದೆನಿಸುತ್ತವೆ. ದನಗಳ ಸಂತೆಯ ಗ್ಯಾಲರಿಯಂತೂ ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಉಳಿದ ಗ್ಯಾಲರಿಗಳು ಸಹ ಎಲ್ಲ ವರ್ಗದವರನ್ನು ಆಕರ್ಷಿಸುತ್ತವೆ’ ಎಂದರು.

    ನ್ಯಾಯಮೂರ್ತಿ ಮಹ್ಮದ್ ನವಾಜ್ ದಂಪತಿಯನ್ನು ಉತ್ಸವ ರಾಕ್ ಗಾರ್ಡನ್ ಸಮಿತಿಯಿಂದ ಸನ್ಮಾನಿಸಲಾಯಿತು. ಶಿಗ್ಗಾಂವಿ ನ್ಯಾಯಾಲಯದ ನ್ಯಾಯಾಧೀಶೆ ಶ್ರೀದೇವಿ ದರ್ಬಾರೆ, ವ್ಯವಸ್ಥಾಪಕ ಬಸವರಾಜ ಮಡಿವಾಳರ, ಅಶೋಕ ಬಾಳಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts