More

    ಕಲೆಯನ್ನು ಪ್ರೋತ್ಸಾಹಿಸಿ ಪರಂಪರೆ ಉಳಿಸಿ

    ಯಲ್ಲಾಪುರ: ಯಕ್ಷಗಾನ ಅಭಿಮಾನದ ಕಲೆ. ಅಭಿಮಾನಿಗಳು ಕಲೆ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸುವ ಮೂಲಕ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ನಾಯಕನಕೆರೆ ಶಾರದಾಂಬಾ ದೇವಸ್ಥಾನದ ಅಧ್ಯಕ್ಷ ಡಿ. ಶಂಕರ ಭಟ್ಟ ಹೇಳಿದರು.

    ಪಟ್ಟಣದ ನಿಸರ್ಗಮನೆಯಲ್ಲಿ ಸಂಕಲ್ಪ ಸಂಸ್ಥೆಯ ಆಶ್ರಯದಲ್ಲಿ ಭಾನುವಾರ ಕಲಾ ಭವನ ಉದ್ಘಾಟನೆ ಹಾಗೂ ಹೊಸ್ತೋಟ ಮಂಜುನಾಥ ಭಾಗವತರ ಸಂಸ್ಮರಣೆ ಪ್ರಯುಕ್ತ ಏರ್ಪಡಿಸಿದ್ದ ಯಕ್ಷಗಾನೋತ್ಸವ-ಹಿಮ್ಮೇಳ ಗಾನ ಹಬ್ಬ ಉದ್ಘಾಟಿಸಿ ಅವರು ಮಾತನಾಡಿದರು.

    ಸಂಕಲ್ಪ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಹೊಸ್ತೋಟ ಮಂಜುನಾಥ ಭಾಗವತರು ಯಕ್ಷಗಾನದ ದೊಡ್ಡ ಆಸ್ತಿಯಾಗಿದ್ದರು. ಅವರ ರಚನೆಯ ಪ್ರಸಂಗ ಸಾಹಿತ್ಯ ಯಕ್ಷಗಾನಕ್ಕೆ ಅಮೂಲ್ಯ ಕೊಡುಗೆಯಾಗಿದೆ. ಅಂಧರಿಗೂ ಯಕ್ಷಗಾನ ಕಲಿಸಿ ದಾಖಲೆ ನಿರ್ವಿುಸಿದ್ದರು ಎಂದರು.

    ಪ್ರಮುಖರಾದ ಎಂ.ಆರ್. ಹೆಗಡೆ, ಎನ್.ಕೆ. ಭಟ್ಟ, ಬೀರಣ್ಣ ನಾಯಕ ಮೊಗಟಾ, ಪಿ.ಜಿ. ಭಟ್ಟ ಬರಗದ್ದೆ, ಡಿ.ಎನ್. ಗಾಂವ್ಕಾರ, ಸಿ.ಜಿ. ಹೆಗಡೆ, ಸುಬ್ಬಯ್ಯ ಧೊಗಳೆ, ವಿದ್ವಾನ್ ಗಣಪತಿ ಭಟ್ಟ, ಎನ್.ಎಸ್. ಭಟ್ಟ, ಪಿ.ಜಿ. ಹೆಗಡೆ ಇದ್ದರು. ನಾಗರಾಜ ಹೆಗಡೆ ಕವಲಕ್ಕಿ ನಿರ್ವಹಿಸಿದರು. ಹಿಮ್ಮೇಳ ಗಾನ ಹಬ್ಬದಲ್ಲಿ ಭಾಗವತರಾಗಿ ವಿದ್ವಾನ್ ಗಣಪತಿ ಭಟ್ಟ ಮೊಟ್ಟೆಗದ್ದೆ, ರಾಘವೇಂದ್ರ ಆಚಾರ್ಯ, ಕಾವ್ಯಶ್ರೀ ಅಜೇರು, ಸರ್ವೆಶ್ವರ ಮೂರೂರು, ರವೀಂದ್ರ ಭಟ್ಟ ಅಚವೆ, ಅನಂತ ದಂತಳಿಗೆ, ಗೋಪಾಲಕೃಷ್ಣ ಜೋಗಿಮನೆ, ಮದ್ದಲೆಯಲ್ಲಿ ಗಣಪತಿ ಭಾಗ್ವತ್ ಕವಾಳೆ, ಸುನೀಲ ಭಂಡಾರಿ, ಎನ್.ಜಿ. ಹೆಗಡೆ, ಕೃಷ್ಣ ಪ್ರಕಾಶ ಉಳಿತ್ತಾಯ, ಪಿ.ಕೆ. ಹೆಗಡೆ, ಚಂಡೆಯಲ್ಲಿ ಕೃಷ್ಣಯಾಜಿ ಇಡಗುಂಜಿ, ವಿಘ್ನೕಶ್ವರ ಕೆಸರಕೊಪ್ಪ, ಮಹಾಬಲೇಶ್ವರ ನಾಯಕನಕೆರೆ, ದೇಲಂತಮಜಲು ಸುಬ್ರಹ್ಮಣ್ಯ ಭಟ್ಟ, ಸುಜನ್ ಹಾಲಾಡಿ ಇದ್ದರು. ವಿವಿಧ ಪೌರಾಣಿಕ ಪ್ರಸಂಗಗಳ ಆಯ್ದ ಪದ್ಯಗಳನ್ನು ಏಳು ಭಾಗವತರು ಪ್ರಸ್ತುತಪಡಿಸಿದರು. ತೇಜಸ್ವಿ ಗಾಂವ್ಕಾರ ಹೆಗ್ಗಾರ, ವರುಣ ಕಲಾವನ, ಶ್ರೀಶ ಕೊಂಡದಕುಳಿ, ತೇಜಸ್ ಹೆಗಡೆ ಯಕ್ಷನೃತ್ಯದ ಮೂಲಕ ಗಮನ ಸೆಳೆದರು.</

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts