More

    ಕಲಾ ವಿಭಾಗದಲ್ಲಿ ಪ್ರೇಮಾ ಚವ್ಹಾಣ ಪ್ರಥಮ ರ‍್ಯಾಂಕ್

    ಬಾಗಲಕೋಟೆ: ಸಮಾಜ ಕಲ್ಯಾಣ ಇಲಾಖಾ ವ್ಯಾಪ್ತಿಯಲ್ಲಿ ಬರುವ ಮೆಟ್ರಿಕ್ ನಂತರದ ಒಟ್ಟು ೭ ವಸತಿ ನಿಲಯಗಳ ಪೈಕಿ ಕಲಾ ವಿಭಾಗದಲ್ಲಿ ಮೆಟ್ರಿಕ್ ನಂತರದ ಪರಿಶಿಷ್ಟ ಪಂಗಡದ ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿ ಮೊನಿಕಾ ಪೂಜಾರಿ ಶೇ.೯೮.೧೬ ರಷ್ಟು ಫಲಿತಾಂಶ ಪಡೆಯುವ ಮೂಲಕ ಪ್ರಥಮ ರ‍್ಯಾಂಕ್ ಪಡೆದುಕೊಂಡಿದ್ದಾರೆ.

    ಅದೇ ರೀತಿ ವಿಜ್ಞಾನ ವಿಭಾಗದಲ್ಲಿ ಮೆಟ್ರಿಕ್ ನಂತರದ ಪರಿಶಿಷ್ಟ ಜಾತಿಯ ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿ ಪ್ರಮಾ ಚವ್ಹಾಣ ಶೇ.೯೫.೩೩ ರಷ್ಟು ಅಂಕ ಪಡೆದು ದ್ವಿತೀಯ ಸ್ಥಾನ ಪಡೆದರೆ, ಮೆಟ್ರಿಕ್ ನಂತರದ ಬಾಲಕರ ನೂತನ ವಸತಿ ನಿಲಯದ ವಿದ್ಯಾರ್ಥಿ ಕುಮಾರ ಭರತ ನಾಯ್ಕರ ಶೇ.೯೩ ರಷ್ಟು ಅಂಕಪಡೆದು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಸಾಧನೆಗೈದ ವಿದ್ಯಾರ್ಥಿಗಳನ್ನು ಸಮಾಜ ಕಲ್ಯಾಣ ಇಲಾಖೆಯಿಂದ ಸನ್ಮಾನಿಸಿ ಗೌರವ ಸಲ್ಲಿಸಲಾಯಿತು.

    ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೆಶಕಿ ನಂದಾ ಹಣಮರಟ್ಟಿ ಮುಂದಿನ ಜೀವನದಲ್ಲಿ ಇನ್ನು ಹೆಚ್ಚಿನ ಯಶಸ್ಸು ಕಾಣಲೆಂದು ಹಾರೈಸಿದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸೈರಾಬಾನು ನದಾಫ್ ಸೇರಿದಂತೆ ಮೆಟ್ರಿಕ್ ನಂತರದ ವಸತಿ ನಿಲಯಗಳ ಮೇಲ್ವಿಚಾರಕರು, ಪೋಷಕರು ಉಪಸ್ಥಿತರಿದ್ದರು.

    ಜಿಲ್ಲೆಯ ವ್ಯಾಪ್ತಿಯಲ್ಲಿ ಮೆಟ್ರಿಕ್ ನಂತರದ ವಸತಿ ನಿಲಯಗಳು ೭ ಇದ್ದು, ಪರೀಕ್ಷೆಗೆ ಕುಳಿದ ಒಟ್ಟು ೨೩೦ ವಿದ್ಯಾರ್ಥಿಗಳ ಪೈಕಿ ೨೨೨ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಇದರಲ್ಲಿ ಬಾಲಕರು ೧೧೦ ಹಾಗೂ ಬಾಲಕಿಯರು ೧೧೨ ಜನ ತೇರ್ಗಡೆ ಹೊಂದಿರುತ್ತಾರೆ. ಶೇ.೮೫ ರಷ್ಟು ಅಂಕಪಡೆದವರು ೪೮ ಜನ ಇದ್ದರೆ ಪ್ರಥಮ ದರ್ಜೆಯಲ್ಲಿ ೧೩೫, ದ್ವಿತೀಯ ದರ್ಜೆಯಲ್ಲಿ ೩೦ ಹಾಗೂ ತೃತೀಯ ದರ್ಜೆಯಲ್ಲಿ ೯ ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts