More

    ಕಲಾವಿದರ ಗಾಯದ ಮೇಲೆ ಕೋವಿಡ್ ಬರೆ

    ಶಿಗ್ಗಾಂವಿ: ಕಳೆದೆರಡು ವರ್ಷಗಳಿಂದ ಕೋವಿಡ್​ನಿಂದ ಸಂಕಷ್ಟಕ್ಕೊಳಗಾಗಿದ್ದ ಕಲಾವಿದರ ಬದುಕು ಇನ್ನೂ ಸರಿದಾರಿಗೆ ಬಂದಿಲ್ಲ. ಈಗ ಮತ್ತೆ ಮೂರನೇ ಅಲೆ ಬಂದಪ್ಪಳಿಸಿದರೆ ಕಲಾವಿದರ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ ಎಂದು ಸಾಹಿತಿ ಹಾಗೂ ನಿವೃತ್ತ ಪ್ರಾಚಾರ್ಯ ಬ.ಪ. ಯಲಿಗಾರ ಹೇಳಿದರು.

    ಪಟ್ಟಣದ ಗಾನಯೋಗಿ ಪಂ. ಪುಟ್ಟರಾಜ ಕವಿ ಗವಾಯಿಗಳ ಕಲಾ ಸಂಸ್ಥೆಯಲ್ಲಿ ರಾಮಚಂದ್ರಪ್ಪ ನೇಪತ್ಯ ವೇಷಭೂಷಣ ಕಲಾ ಸಂಸ್ಥೆ ಶಿಗ್ಗಾಂವಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾವೇರಿ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಜಾನಪದ ಸಂಕ್ರಾಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
    31 ದೊಡ್ಡಾಟ ಕಲಾ ತಂಡಗಳನ್ನು ತಯಾರಿಸಿದ್ದ ದಿ. ಟಿ.ಬಿ. ಸೊಲಬಕ್ಕನವರ ಅವರು ಕಲಾವಿದರು ಮತ್ತು ಕಲೆ ಉಳಿಸುವಲ್ಲಿ ಶ್ರಮಿಸಿದವರು. ಅದೇ ರೀತಿ ತೆರೆಯ ಹಿಂದಿನ ಕಾರ್ಯ ಮಾಡಿ ನೇಪತ್ಯ ಕಲೆಯ ಮೂಲಕ ಕಲಾ ಸೇವೆಯಲ್ಲಿ ಶಂಕರ ಅರ್ಕಸಾಲಿ ನಿರತರಾಗಿದ್ದಾರೆ ಎಂದರು.

    ಪ್ರಾಚಾರ್ಯ ನಾಗರಾಜ ದ್ಯಾಮನಕೊಪ್ಪ ಮಾತನಾಡಿ, ನೋವಿನಲ್ಲಿಯೂ ಸಂತೋಷ ನೀಡುವ ಕಾರ್ಯಕ್ರಮ ಇದಾಗಿದೆ. ಇಂದು ಕಲಾವಿದರಿಗೆ ಬೆಂಬಲ ಇಲ್ಲವಾಗಿದೆ. ಕೇವಲ ನಂಬಿಕೆಯಲ್ಲಿಯೇ ಕಲಾವಿದರ ಜೀವನ ಸಾಗುತ್ತಿದೆ. ಅಂತಹ ಕಲಾವಿದರ ಶಕ್ತಿಯನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದರು.
    ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಮಾತನಾಡಿ, ಕಷ್ಟಗಳನ್ನು ಅರಿತು-ಬೆರೆತು ಬೇರೆಯವರಿಗೆ ರಂಜಿಸುವ ಮನೋಭಾವ ಕಲಾವಿದರಿಗೆ ಮಾತ್ರ ಇದೆ. ಕಲೆ, ಸಂಗೀತ ಉಳಿಸಿ- ಬೆಳೆಸುವ ನಿಟ್ಟಿನಲ್ಲಿ ತಾಲೂಕಿನಾದ್ಯಂತ ಶಿಗ್ಗಾಂವಿಯ ಪುಟ್ಟರಾಜರ ಕಲಾ ಸಂಸ್ಥೆ ಮತ್ತು ನೇಪತ್ಯ ಕಲಾವಿದರ ಸಂಸ್ಥೆ ಹೆಜ್ಜೆ ಇಟ್ಟಿದೆ ಎಂದರು.
    ನೇಪತ್ಯ ವೇಷಭೂಷಣ ಸಂಸ್ಥೆಯ ಶಂಕರ ಅರ್ಕಸಾಲಿ ಮಾತನಾಡಿ, ಮಾಡುವ ಕಾಯಕದಲ್ಲಿಯೇ ತೃಪ್ತಿ ಕಾಣುವ ಸಂಸ್ಥೆ ಇದಾಗಿದ್ದು, ಕಲೆ ಉಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಮ್ಮದು. ಯುವ ಪೀಳಿಗೆ ಮೂಲ ಕಲೆಗೆ ಒತ್ತು ನೀಡಬೇಕಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts